AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚ್ಚಂಗಿದುರ್ಗದ ದೇವಿಗೆ ಭಕ್ತರ ಚಿತ್ರ-ವಿಚಿತ್ರ ಹರಕೆ, ಸರ್ಕಾರಿ ಕೆಲಸಕ್ಕಾಗಿ ಬೇಡಿಕೆ ಇಟ್ಟ ಭಕ್ತ

ದಾವಣಗೆರೆ: ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಿಯ ದೇವಸ್ಥಾನದ ಕಾಣಿಕೆ ಉಂಡಿಯ ಎಣಿಕೆ ಕಾರ್ಯ ಇತ್ತೀಚಿಗೆ ನಡೆಯಿತು. ಭಾರೀ ಭದ್ರತೆಯಲ್ಲಿ ನಡೆದ ಈ ಎಣಿಕೆ ಕಾರ್ಯದಲ್ಲಿ ಕೆಲ ಚಿತ್ರ-ವಿಚಿತ್ರ ಹರಕೆ ಪತ್ರಗಳು ನೆರೆದವರನ್ನ ಮೂಕವಿಸ್ಮಿತರನ್ನಾಗಿಸಿದ್ರೆ, ಕೆಲವು ನಗೆಯ ಕಡಲಲ್ಲಿ ತೇಲಿಸಿದವು. ಸರಕಾರಿ ಕೆಲಸ ಕೊಡಿಸು ತಾಯಿ ಇದರ ಕೆಲ ಸ್ಯಾಂಪಲ್‌ಗಳು ಹೀಗಿವೆ. ‘ದೇವರೆ ನನಗೆ ಒಂದು ಸಣ್ಣದೋ ಅಥವಾ ದುಡ್ಡದೋ ಸರ್ಕಾರಿ ಕೆಲಸ ಬೇಕು’. ‘ಅಮ್ಮ ತಾಯಿ, ಶ್ರೀಯಲಮ್ಮ ದೇವಿ ನೋಡಮ್ಮ ನಮ್ಮ ಮನೆಯಲ್ಲಿ […]

ಉಚ್ಚಂಗಿದುರ್ಗದ ದೇವಿಗೆ ಭಕ್ತರ ಚಿತ್ರ-ವಿಚಿತ್ರ ಹರಕೆ, ಸರ್ಕಾರಿ ಕೆಲಸಕ್ಕಾಗಿ ಬೇಡಿಕೆ ಇಟ್ಟ ಭಕ್ತ
Guru
| Edited By: |

Updated on:Jun 18, 2020 | 3:05 PM

Share

ದಾವಣಗೆರೆ: ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಿಯ ದೇವಸ್ಥಾನದ ಕಾಣಿಕೆ ಉಂಡಿಯ ಎಣಿಕೆ ಕಾರ್ಯ ಇತ್ತೀಚಿಗೆ ನಡೆಯಿತು. ಭಾರೀ ಭದ್ರತೆಯಲ್ಲಿ ನಡೆದ ಈ ಎಣಿಕೆ ಕಾರ್ಯದಲ್ಲಿ ಕೆಲ ಚಿತ್ರ-ವಿಚಿತ್ರ ಹರಕೆ ಪತ್ರಗಳು ನೆರೆದವರನ್ನ ಮೂಕವಿಸ್ಮಿತರನ್ನಾಗಿಸಿದ್ರೆ, ಕೆಲವು ನಗೆಯ ಕಡಲಲ್ಲಿ ತೇಲಿಸಿದವು.

ಸರಕಾರಿ ಕೆಲಸ ಕೊಡಿಸು ತಾಯಿ ಇದರ ಕೆಲ ಸ್ಯಾಂಪಲ್‌ಗಳು ಹೀಗಿವೆ. ‘ದೇವರೆ ನನಗೆ ಒಂದು ಸಣ್ಣದೋ ಅಥವಾ ದುಡ್ಡದೋ ಸರ್ಕಾರಿ ಕೆಲಸ ಬೇಕು’. ‘ಅಮ್ಮ ತಾಯಿ, ಶ್ರೀಯಲಮ್ಮ ದೇವಿ ನೋಡಮ್ಮ ನಮ್ಮ ಮನೆಯಲ್ಲಿ ತುಂಬಾ ಬಡತನ ಇದೆ. ಅದಕ್ಕಾಗಿ ನನಗೆ ಯಾವುದಾದರೂ ಒಂದು ಸರ್ಕಾರಿ ಕೆಲಸ ಕಲ್ಪಸಿಕೊಂಡು ತಾಯಿ’ ಎಂಬ ಕೋರಿಕೆ. ಮತ್ತೊಂದು ಹೀಗಿದೆ ‘ ನಾನು ಈ ಸಲ ಬಿ.ಎ. ಓದ್ದುತ್ತಿದ್ದೇನೆ, ಪರೀಕ್ಷೆಯಲ್ಲಿ ಎಲ್ಲ ವಿಷಯದಲ್ಲಿ ಉತ್ತೀರ್ಣವಾಗುವಂತೆ ಆರ್ಶೀವಾದ ಮಾಡು ತಾಯಿ’ ಎಂಬ ಚಿತ್ರ-ವಿಚಿತ್ರ ಕೋರಿಕೆಗಳು ಉಚ್ಚೆಂಗಮ್ಮ ದೇವಿಗೆ ಬಂದಿವೆ.

ರಾಜ್ಯಸರ್ಕಾರದ ಆದೇಶವಾಗುವರೆಗೆ ದಾಸೋಹ ಇಲ್ಲ ಇನ್ನು ದೇವಿ ಹುಂಡಿಯಲ್ಲಿ ಒಟ್ಟು 1,54,333 ರೂಪಾಯಿಗಳ ಕಾಣಿಕೆ ಜಮೆಯಾಗಿದೆ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸೆ ದಿನಗಳಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ದಾಸೋಹಕ್ಕಾಗಿ 1.67.017 ರೂಪಾಯಿಗಳನ್ನು ತೆಗೆದು ಇಡಲಾಗಿದೆ. ಆದರೆ ಕೊರೊನಾದಿಂದಾಗಿ ದಾಸೋಹವನ್ನು ಸ್ಥಗಿತ ಮಾಡಲಾಗಿದೆ. ರಾಜ್ಯ ಸರ್ಕಾರದ ಆದೇಶ ಆಗೋವರೆಗೂ ದಾಸೋಹ ಆರಂಭವಾಗುವುದಿಲ್ಲ.

ಬೆಳ್ಳಗೆ 9 ಘಂಟೆಯಿಂದ ಸಂಜೆ 5 ವರೆಗೆ ನಡೆದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಎಣಿಕೆ ಸಮಯದಲ್ಲಿ ಮುಜರಾಯಿ, ಕಂದಾಯ ಇಲಾಖೆ ಮತ್ತು ದೇವಸ್ಥಾನದ ಸಿಬ್ಬಂದಿ ಉಪಸ್ಥಿತರಿದ್ದರು. ಎಣಿಕೆ ನಂತರ ದೇವಸ್ತಾನದ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.

Published On - 8:06 am, Thu, 18 June 20

ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ