AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದು ದಾವಣಗೆರೆಯ ಮತ್ತೊಂದು ಪ್ರವಾಸಿ ತಾಣವಾಗಬೇಕಿತ್ತು! ಆದ್ರೆ ಅಭಿವೃದ್ಧಿಯ ಮಾತೇ ಇಲ್ಲ -ರೈತರ ನೆಮ್ಮದಿ ಕೆಡಿಸಿದೆ

ಹರಿಹರದಲ್ಲಿರೋ ದೇವರ ಬೆಳಕೆರೆ.. ಇಲ್ಲಿ ಬೀಸೋ ತಂಗಾಳಿಯ ಮಜಾನೇ ಬೇರೆ. ಈ ಜಲಾಶಯ ಧುಮ್ಮಿಕ್ಕಿ ಹರಿಯೋ ನೀರನ್ನು ನೋಡೋದೆ ಒಂದು ಚಂದ. ವೀಕೆಂಡ್ ಅಂದ್ರೆ ಇಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತೆ. ಆದರೆ ಬೇಸರ ಸಂಗತಿ ಎಂದ್ರೆ ಇಲ್ಲಿ ಆಗಮಿಸೋ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಈ ಡ್ಯಾಮನ್ನ ಅಭಿವೃದ್ದಿಪಡಿಸಿ ಪ್ರವಾಸಿ ಕೇಂದ್ರ ಮಾಡ್ಬೇಕು ಅನ್ನೋದು ಗ್ರಾಮಸ್ಥರ ಆಗ್ರಹ.

ಅದು ದಾವಣಗೆರೆಯ ಮತ್ತೊಂದು ಪ್ರವಾಸಿ ತಾಣವಾಗಬೇಕಿತ್ತು! ಆದ್ರೆ ಅಭಿವೃದ್ಧಿಯ ಮಾತೇ ಇಲ್ಲ -ರೈತರ ನೆಮ್ಮದಿ ಕೆಡಿಸಿದೆ
ಅದು ದಾವಣಗೆರೆಯ ಮತ್ತೊಂದು ಪ್ರವಾಸಿ ತಾಣವಾಗಬೇಕಿತ್ತು! ಆದ್ರೆ ಅಭಿವೃದ್ಧಿಯ ಮಾತೇ ಇಲ್ಲ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​|

Updated on:Nov 16, 2023 | 3:03 PM

Share

ಅದು ಕ್ಷೀರ ಸಮುದ್ರವಲ್ಲ. ಅದು ಯಾವ ನದಿಗೆ ಕಟ್ಟಿದ ಡ್ಯಾಂ ಅಲ್ಲ. ನಿರಂತರ ಸುರಿದ ಮಳೆಗೆ ಅಲ್ಲೊಂದು ಸ್ವರ್ಗವೇ ಸೃಷ್ಟಿಯಾಗುತ್ತದೆ. ಅದೊಂದು ಪ್ರವಾಸಿ ತಾಣವು ಹೌದು. ಇಂತಹ ಪ್ರಸಿದ್ಧ ಡ್ಯಾಂ ಮಾತ್ರ ರೈತರ ನೆಮ್ಮದಿ ಹಾಳು ಮಾಡಿದೆ. ಅರೇ ರೈತರ ( farmers ) ಜೀವನಾಡಿ ಡ್ಯಾಂ ಹೇಗೆತಾನೆ ರೈತನ ಶತ್ರುವಾದೀತು? ಇಲ್ಲಿದೆ ನೋಡಿ ಜಲ ಕಂಟಕ ಸ್ಟೋರಿ. ಇದು ದಾವಣಗೆರೆಯ ಹರಿಹರದಲ್ಲಿರೋ ದೇವರ ಬೆಳಕೆರೆ ಜಲಾಶಯ (Davanagere Devarabelakere Dam). ಇದು ಯಾವುದೇ ನದಿ ಕಟ್ಟಿದ ಡ್ಯಾಂ ಅಲ್ಲ. ಶ್ಯಾಗಳೆ ಹಳ್ಳಕ್ಕೆ ಕಟ್ಟಿದ ಡ್ಯಾಂ. ಸ್ವಚ್ಚಂದ ಪರಿಸರ, ಶಾಂತ ಪ್ರದೇಶದಲ್ಲಿರೋ ಈ ಜಲಾಶಯವನ್ನು ನೋಡೋಕೆ ಅಂತಾ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ (Tourism).

ಇಲ್ಲಿ ಬೀಸೋ ಸವಿ ತಂಗಾಳಿಯ ಮಜಾನೇ ಬೇರೆ. ಈ ಜಲಾಶಯ ಧುಮ್ಮಿಕ್ಕಿ ಹರಿಯೋ ನೀರನ್ನು ನೋಡೋದೆ ಒಂದು ಚಂದ. ಹಾಲಿನಂತೆ ಹರಿಯೋ ಈ ನೀರಿನ ಬೆಳ್ಳನೇ ಸಾಲು.. ವೀಕೆಂಡ್ ಅಂದ್ರೆ ಇಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತೆ. ಆದರೆ ಬೇಸರ ಸಂಗತಿ ಎಂದ್ರೆ ಇಲ್ಲಿ ಆಗಮಿಸೋ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಪಾರ್ಕ್ ಆಗಲಿ ಅಥವಾ ಕೂರೋಕೆ ಆಸನಗಳಾಗಲಿ ಇಲ್ಲ ಇಲ್ಲ.

ಈ ಡ್ಯಾಮನ್ನ ಅಭಿವೃದ್ದಿ ಪಡಿಸಿ ಪ್ರವಾಸಿ ಕೇಂದ್ರ ಮಾಡ್ಬೇಕು ಅನ್ನೋದು ಗ್ರಾಮಸ್ಥರ ಆಗ್ರಹ. ಇದು ಬಂದು ಸುತ್ತಾಡು ಹೋಗುವ ಜನರ ಮನಸ್ಸಿನ ಮಾತು. ಆದ್ರೆ ಇಲ್ಲಿ ಸಂಗ್ರಹವಾದ ಜಲ ಸಸ್ಯಗಳಿಂದ ರೈತರ ನೆಮ್ಮದಿ ಹಾಳಾಗಿದೆ. ಡ್ಯಾಂ ನಲ್ಲಿ ಸಂಗ್ರಹ ಆಗುವ ನೀರು ಹರಿದು ಮುಂದೆ ಹೋಗುತ್ತಿಲ್ಲ. ಇದರಿಂದ ಡ್ಯಾಂನ ಹಿನ್ನೀರಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿನ ನೀರು ನಿಲ್ಲುತ್ತದೆ. ರೈತರು ಬೆಳೆ ಬೆಳೆಯುವುದು ಹಾಗು ಬದುಕುವುದು ಕಷ್ಟವಾಗಿದೆ.

ಹರಿಹರದಿಂದ ಕೆಲವೇ ಕೆಲವು ಕಿ.ಮಿ. ದೂರದಲ್ಲಿರೋ ಈ ಡಾಮ್ ಗೆ ಪ್ರತಿನಿತ್ಯ ಸೂರ್ಯಸ್ತದ ಸಮಯದಲ್ಲಿ ಪ್ರವಾಸಿಗರು ಬರ್ತಾರೆ. ಜಲಾಶಯದಲ್ಲಿ ಮೈತುಂಬಿ ಹರಿಯೋ ದೃಶ್ಯ ಕಣ್ಣಿಗೆ ತಂಪೆರೆಯುತ್ತೆ. ಆಳೆತ್ತರದಿಂದ ದುಮ್ಮಿಕ್ಕೋ ಬೆಳ್ನೊರೆಯ ಧಾರೆ ನೋಡುಗರ ಕಣ್ಣಿಗೆ ಹಬ್ಬದ ಅನುಭವ. ಆದ್ರೆ ಇಲ್ಲಿಗೆ ಬಂದವರಿಗೆ ಕುಡಿಯೋಕೆ ನೀರೇ ಸಿಗಲ್ಲ, ಶೌಚಾಲಯಗಳಂತೂ ಇಲ್ವೇ ಇಲ್ಲ.

Also read: Tourism ಸಹಜ ಸೌಂದರ್ಯದ ಕೊಡೇರಿ ಗಂಗೆಬೈಲು ಬೀಚ್ ಗೆ ಬೇಕಿದೆ ಕಾಯಕಲ್ಪ

ಇಲ್ಲಿ ರಸ್ತೆಗಳಲ್ಲಿ ವಿದ್ಯುತ್ ದೀಪಗಳೇ ಇಲ್ಲ. ಈಗಾಗಲೇ ಹತ್ತಾರು ಸಲ ಇಲ್ಲಿನ ಜಲ ಸಸ್ಯ ತೆರವಿಗೆ ಪ್ರಯತ್ನಿಸಲಾಗಿದೆ. ನೀರಾವರಿ ಇಲಾಖೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಆದ್ರೆ ದಿನದಿಂದ ದಿನಕ್ಕೆ ಜಲ ಸಸ್ಯಗಳ ಬೆಳವಣಿಗೆ ಹೆಚ್ಚಾಗುತ್ತಿದೆ. ಎಲ್ಲಿ ನೋಡಿದರಲ್ಲಿ ಡ್ಯಾಂ ತುಂಬ ನೀರಿನಕ್ಕಿಂತ ಹೆಸರು ಬೆಳೆಯೇ ಕಾಣುತ್ತದೆ.

ಇಷ್ಟೆಲ್ಲಾ ಸಮಸ್ಯೆಗಳು ಇದ್ರೂ ಕೂಡಾ ಪ್ರವಾಸಿಗರ ಮಾತ್ರ ಕೂಲ್ ಪ್ಲೇಸ್. ಈ ಜಲ ಸಸ್ಯಗಳನ್ನ ತೆರವು ಗೊಳಿಸಿ ಇಲ್ಲಿ ಬರೋ ಪ್ರತಿಯೊಬ್ಬ ಪ್ರವಾಸಿಗನೂ ಬೋಟಿಂಗ್ ಫೆಸಿಲಿಟಿ ಇರ್ತಿದ್ರೆ ಚೆನ್ನಾಗಿತ್ತು ಅಂತಾ ಅನ್ಕೋತಾನೆ.ಇಲ್ಲಿನ 33 ಚದರ ಮೈಲಿ ವಿಸ್ತೀರ್ಣದ ಜಲಾಶಯ ನೋಡುವುದೇ ಖುಷಿ ಪಡೋ ಮಜಾನೇ ಬೇರೆ. ಆದ್ರೆ ಮೂಲಭೂತ ಸೌಕರ್ಯಗಳನ್ನು ಮಾಡಿದ್ರೆ ಇದು ದಾವಣಗೆರೆಯ ಮತ್ತೊಂದು ಪ್ರವಾಸಿ ತಾಣವಾಗೋದ್ರಲ್ಲಿ ಸಂಶಯವಿಲ್ಲ. ಜಲ ಸಸ್ಯೆಗಳನ್ನ ತೆರವುಗೊಳಿಸಿದ್ರೆ ರೈತರು ನೆಮ್ಮದಿಯ ನಿದ್ದೆ ಮಾಡುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:02 pm, Thu, 16 November 23

‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
12 ವೈಡ್, 1 ನೋ ಬಾಲ್... ಓವರ್ ಮುಗಿಯುವ ಮುನ್ನವೇ ಪಂದ್ಯವೇ ಮುಗಿದು ಹೋಯ್ತು!
12 ವೈಡ್, 1 ನೋ ಬಾಲ್... ಓವರ್ ಮುಗಿಯುವ ಮುನ್ನವೇ ಪಂದ್ಯವೇ ಮುಗಿದು ಹೋಯ್ತು!