ಅವರಿಬ್ಬರೂ ಮಹಿಳೆಯರು-ಬೀಗರು, ಈ ಹಿಂದೆ ಅವರ ಗಂಡಂದಿರೂ ಪರಸ್ಪರ ಎದುರಾಳಿ ಆಗಿದ್ದವರು… ಏನಿದು ದಾವಣಗೆರೆಯ ಕದನ ಕುತೂಹಲ!

ಈ ಹಿಂದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರ ಪತಿ ಎಸ್ ಎಸ್ ಮಲ್ಲಿಕಾರ್ಜುನ ಹಾಗೂ ಗಾಯತ್ರಿ ಸಿದ್ದೇಶ್ವರ ಪತಿ ಸಂಸದ ಜಿಎಂ ಸಿದ್ದೇಶ್ವರ ಮೂರು ಸಲ ಪರಸ್ಪರ ಎದುರಾಳಿಯಾಗಿ ಲೋಕಸಭೆಗೆ ಸ್ಪರ್ಧಿಸಿದ್ದರು. ಮೂರೂ ಸಲ ಜಿಎಂ ಸಿದ್ದೇಶ್ವರ ಗೆದ್ದಿದ್ದಾರೆ. ಈಗ ಅವರಿಬ್ಬರ ಪತ್ನಿಯರು ಕಣದಲ್ಲಿದ್ದಾರೆ. ಇಬ್ಬರೂ ಮಹಿಳೆಯರು - ಬೀಗರು ಎಂಬ ಕಾರಣ ಸ್ಪರ್ಧೆಗೆ ಹೊಸ ಖದರು ಬಂದಿದೆ.

ಅವರಿಬ್ಬರೂ ಮಹಿಳೆಯರು-ಬೀಗರು, ಈ ಹಿಂದೆ ಅವರ ಗಂಡಂದಿರೂ ಪರಸ್ಪರ ಎದುರಾಳಿ ಆಗಿದ್ದವರು... ಏನಿದು ದಾವಣಗೆರೆಯ ಕದನ ಕುತೂಹಲ!
ಅವರಿಬ್ಬರೂ ಮಹಿಳೆಯರು-ಬೀಗರು, ಈ ಹಿಂದೆ ಅವರ ಗಂಡಂದಿರೂ ಪರಸ್ಪರ ಎದುರಾಳಿಗಳು
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​

Updated on: Mar 23, 2024 | 12:18 PM

ಅವೆರೆಡು ಪ್ರತಿಷ್ಠಿತ ಕಟುಂಬಗಳು. ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿರುವ ಕುಟುಂಬಸ್ಥರು. ಒಂದು ಕುಟುಂಬದವರು ರಾಜ್ಯದ ನಂಬರ್ ಓನ್ ಅಡಿಕೆ ವ್ಯಾಪಾರಿಗಳು ಆಗಿದ್ರೆ ಮತ್ತೊಂದು ಮೆಡಿಕಲ್-ಇಂಜಿನೀಯರಿಂಗ್ ಕಾಲೇಜುಗಳ ಕುಟುಂಬಸ್ಥರು (relatives). ಇಂತಹ ಇಡೀ ಕುಟುಂಬಗಳನ್ನ ನಿರ್ವಹಣೆ ಮಾಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳು (women) ಚುನಾವಣೆ ಕಣಕ್ಕಿಳಿದ್ದಿದ್ದಾರೆ (BJP, Congress). ಟಿಕೆಟ್ ಸಿಕ್ಕಿದ್ದೆ ತಡ ಇಬ್ಬರೂ ಶಕ್ತಿದೇವತೆಗೆ ಮೊರೆ ಹೋಗಿದ್ದಾರೆ. ಇಲ್ಲಿದೆ ನೋಡಿ ಪ್ರತಿಷ್ಠಿತರ ಪತ್ನಿಯ ಫೈಟ್ ಸ್ಟೋರಿ (Davanagere Lok Sabha Election).

ಒಬ್ಬರು ಸಂಸದರ ಪತ್ನಿ, ಇನ್ನೊಬ್ಬರು ಸಚಿವರೊಬ್ಬರ ಪತ್ನಿ. ಈ ಮೊದಲು ನಮ್ಮ ಮನೆಯವರಿಗೆ ಮತ ನೀಡಿ ಎಂದು ಗಲ್ಲಿಯಲ್ಲಿನ ಹತ್ತಾರು ಹೆಣ್ಣು ಮಕ್ಕಳನ್ನ ಕರೆದುಕೊಂಡು ಚುನಾವಣೆ ವೇಳೆ ಸುತ್ತಾಡುತ್ತಿದ್ದರು. ಹೀಗೆ ಪ್ರತಿಯೊಂದು ಚುನಾವಣೆಯಲ್ಲಿ ಸುತ್ತಿಸುತ್ತಿ ನಾವೇ ಸ್ಪರ್ಧೆ ಮಾಡಿದ್ರೆ ಹೇಗೆ ಎಂದು ಈ ಇಬ್ಬರೂ ಈಗ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಾಗಿದ್ದಾರೆ.

Gayathri Siddeshwara Vs Prabha Mallikarjun in Davanagere: ನಾವಿಲ್ಲಿ ಹೇಳುತ್ತಿರುವುದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ-ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಂಸದ ಜಿಎಂ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ-ಬಿಜೆಪಿ ಅಭ್ಯರ್ಥಿ. ಇನ್ನೊಂದು ವಿಶೇಷ ನೋಡುವುದಾದರೆ ಇವರಿಬ್ಬರೂ ಸಂಬಂಧಿಕರು. ಸಿದ್ದೇಶ್ವರ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ ಬೀಗರಾಗುತ್ತಾರೆ! ಇಲ್ಲಿ ಗೆದ್ದರೂ ಸೈ, ಸೋತರೂ ಸೈ! ಅಧಿಕಾರ ಮಾತ್ರ ಈ ಎರಡು ಕುಟುಂಬದವರಲ್ಲಿಯೇ ಇರುತ್ತದೆ.

ಈ ಸಲ ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಜಿಎಂ ಸಿದ್ದೇಶ್ವರ ತಮ್ಮ ಪತ್ನಿಗೆ ಟಿಕೆಟ್ ಕೊಡಿಸಿದ್ದಾರೆ. ಇತ್ತ ಲೋಕಸಭೆ ಚುನಾವಣೆ ಉಸಾಬರಿ ಬೇಡ ಎಂದು ಕಳೆದ ಚುನಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಬಿ ಮಂಜಪ್ಪ ಅವರಿಗೇ ಟಿಕೆಟ್ ಕೊಡಿಸಿ ಸುಮ್ಮನಾಗಿದ್ದರು. ಈ ವರ್ಷ ಅವರ ಪತ್ನಿಯನ್ನ ಸ್ಪರ್ಧೆ ಗಿಳಿಸಿದ್ದು ಹೇಳಿ ಮಾಡಿಸಿದಂತೆ ಈ ಜೋಡಿಯ ಮಧ್ಯೆ ಭರ್ಜರಿ ಫೈಟಿಂಗ್ ಏರ್ಪಟ್ಟಿದೆ. ಸ್ಪರ್ಧೆ ಎನೇ ಇರಲಿ ನಾವು ಮಾತ್ರ ತಾಯಿ ಮಗಳು ಇದ್ದಂತೆ ಎನ್ನುತ್ತಾರೆ ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ, ದಾವಣಗೆರೆ ಲೋಕ ಸಭಾ ಕ್ಷೇತ್ರ

ಸಂಸದ ಜಿಎಂ ಸಿದ್ದೇಶ್ವರ ರಾಜ್ಯದ ನಂಬರ್ ಓನ್ ಅಡಿಕೆ ವ್ಯಾಪಾರಿ. ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ದೊಡ್ಡ ಶ್ರೀಮಂತ ಕುಟುಂಬ. ಜೊತೆಗೆ ಗಣಿ ದೊರೆ ಕೂಡಾ. ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಕಾಲೇಜ್, ಸಕ್ಕರೆ ಫ್ಯಾಕ್ಟರಿ ಸಹ ಹೊಂದಿದ್ದಾರೆ. ಪಿಯುಸಿ ಓದಿರುವ ಗಾಯತ್ರಿ ಸಿದ್ದೇಶ್ವರ ಶಿವಮೊಗ್ಗ ಮೂಲಕ ರೈತ ಕುಟುಂಬದ ಮಗಳು.

ಇತ್ತ ಡಾ. ಪ್ರಭಾ ಮಲ್ಲಿಕಾರ್ಜುನ ಕುಟುಂಬ ಅಂದ್ರೆ ಅವರದ್ದೂ ರಾಜ್ಯದಲ್ಲಿನ ಅತಿ ಶ್ರೀಮಂತ ಕುಟುಂಬದಲ್ಲೊಂದು. ಮಾವ ಶಾಮನೂರು ಶಿವಶಂಕರ – ಅಖಿಲ ಭಾರತ ವೀರ ಶೈವ ಮಹಾ ಸಭೆಯ ಅಧ್ಯಕ್ಷ ಜೊತೆಗೆ ಶಾಸಕರು. ಪತಿ ಎಸ್ ಎಸ್ ಮಲ್ಲಿಕಾರ್ಜುನ ಸಚಿವ, ಎರಡು ಮೆಡಿಕಲ್ ಕಾಲೇಜ್ ಇಂಜಿನಿಯರಿಂಗ್, ಡೆಂಟಲ್ ಹೀಗೆ ನೂರಾರು ಶಿಕ್ಷಣ ಸಂಸ್ಥೆಗಳಿವೆ. ಇವರ ಕುಟುಂಬ ಮೂರು ಸಕ್ಕರೆ ಕಾರ್ಖಾನೆಗಳು, ಮೂರು ರೈಸ್ ಮಿಲ್ ಹೀಗೆ ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ದಾವಣಗೆರೆ ತಾಲೂಕಿನ ಕಕ್ಕರಗೊಳ್ ರೈತ ಕುಟುಂಬದಿಂದ ಬಂದ ಮಹಿಳೆ ಡಾ. ಪ್ರಭಾ ಮಲ್ಲಿಕಾರ್ಜುನ. ಈ ಸಲ ಸ್ಪರ್ಧೆ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ.

ಈ ಹಿಂದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಪತಿ ಎಸ್ ಎಸ್ ಮಲ್ಲಿಕಾರ್ಜುನ ಹಾಗೂ ಗಾಯತ್ರಿ ಸಿದ್ದೇಶ್ವರ ಪತಿ ಸಂಸದ ಜಿಎಂ ಸಿದ್ದೇಶ್ವರ ಮೂರು ಸಲ ಪರಸ್ಪರ ಎದುರಾಳಿಯಾಗಿ ಲೋಕಸಭೆಗೆ ಸ್ಪರ್ಧಿಸಿದ್ದರು. ಮೂರು ಸಲ ಜಿಎಂ ಸಿದ್ದೇಶ್ವರ ಗೆದ್ದಿದ್ದಾರೆ. ಈಗ ಅವರಿಬ್ಬರ ಪತ್ನಿಯರು ಕಣದಲ್ಲಿದ್ದಾರೆ. ಸಿದ್ದೇಶ್ವರಗೆ ಬಂಡಾಯದ ಬಿಸಿ ಇದೆ ಕಾಂಗ್ರೆಸ್ಸಿಗೆ ಬಂಡಾಯ ಅಷ್ಟಾಗಿಲ್ಲ. ಹೀಗಾಗಿ ಅದೇ ಭೀಮಸಮುದ್ರದ ಸಿದ್ದೇಶ್ವರ, ದಾವಣಗೆರೆಯ ಶಾಮನೂರು ಕುಟುಂಬಗಳ ನಡುವೆ ಸ್ಪರ್ಧೆ ಎರ್ಪಟ್ಟಿದೆ. ಇಬ್ಬರೂ ಮಹಿಳೆಯರು ಎಂಬ ಕಾರಣ ಸ್ಪರ್ಧೆಗೆ ಹೊಸ ಖದರು ಬಂದಿದೆ ಎನ್ನಬಹುದಾಗಿದೆ.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್