ದಾವಣಗೆರೆಯಲ್ಲಿ 120ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ಪತ್ತೆ

TV9 Digital Desk

| Edited By: guruganesh bhat

Updated on: Sep 11, 2021 | 8:04 PM

ಡೆಂಗ್ಯೂ ಸೇರಿ ಹಲವು ಕಾಯಿಲೆಗಳಿರುವ ಮಕ್ಕಳಿಗೆ ಜಿಲ್ಲಾಸ್ಪತ್ರೆ, ಬಾಪೂಜಿ ಆಸ್ಪತ್ರೆ ಮತ್ತು ಎಸ್ ಎಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

ದಾವಣಗೆರೆಯಲ್ಲಿ 120ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ಪತ್ತೆ
ಎಚ್ಚರಿಕೆ ಇರಲಿ

ದಾವಣಗೆರೆ: ಜಿಲ್ಲೆಯಲ್ಲಿ 120ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ. ಜಿಲ್ಲಾ ಮಲೇರಿಯಾ ಅಧಿಕಾರಿ ನಟರಾಜ್ ನೇತೃತ್ವದ ತಂಡ ಡೆಂಗ್ಯೂ ಜ್ವರ ಪತ್ತೆಯಾದವರಿಗೆ ಚಿಕಿತ್ಸೆ ನೀಡುವ ತಂಡದ ನೇತೃತ್ವ ವಹಿಸಿದ್ದಾರೆ. ಡೆಂಗ್ಯೂ ಸೇರಿ ಹಲವು ಕಾಯಿಲೆಗಳಿರುವ ಮಕ್ಕಳಿಗೆ ಜಿಲ್ಲಾಸ್ಪತ್ರೆ, ಬಾಪೂಜಿ ಆಸ್ಪತ್ರೆ ಮತ್ತು ಎಸ್ ಎಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಡೆಂಗ್ಯೂ ಟೆಸ್ಟ್ ಮಾಡುವಂತೆ ಸೂಚಿಸಲಾಗಿದೆ ಎಂದು ಸಹ ಅವರು ತಿಳಿಸಿದ್ದಾರೆ.

Dengue Symptoms: ನಿಮ್ಮ ಜ್ವರ ಡೆಂಗ್ಯೂ ಜ್ವರವಾ ಎಂದು ಪತ್ತೆ ಹಚ್ಚುವುದು ಹೇಗೆ?; ಇಲ್ಲಿದೆ ಉಪಯುಕ್ತ ಮಾಹಿತಿ

ವೈರಲ್ ಫೀವರ್ ಹಾಗೂ ಡೆಂಗ್ಯೂ ಜ್ವರ ಆರಂಭದಲ್ಲಿ ಒಂದೇ ರೀತಿಯಾಗಿರುತ್ತವೆ. ಇದು ಸಾಮಾನ್ಯ ಜ್ವರ ಎಂದು ನಿರ್ಲಕ್ಷ್ಯ ಮಾಡಿದರೆ ಅಪಾಯ ಖಂಡಿತ. ವಿಪರೀತ ಚಳಿ ಹಾಗೂ ಜ್ವರದಿಂದ ಆರಂಭವಾಗುವ ಡೆಂಗ್ಯೂ ಜ್ವರ ಸೋಂಕಿತ ವ್ಯಕ್ತಿಯಿಂದ ಬೇರೊಬ್ಬರಿಗೆ ಗಾಳಿಯ ಮೂಲಕ ಹರಡುತ್ತದೆ. ಮುಂಜಾನೆ ಕಚ್ಚುವ ಈಡಿಸ್ ಎಂಬ ಸೊಳ್ಳೆಯಿಂದ ಹರಡುವ ಡೆಂಗ್ಯೂ ನಮ್ಮ ದೇಹದೊಳಗೆ ಸೇರಿಕೊಳ್ಳುತ್ತಿದ್ದಂತೆ ಬಳಿ ರಕ್ತ ಕಣಗಳು ಕಡಿಮೆಯಾಗುತ್ತವೆ.

ತೀವ್ರ ಜ್ವರ, ಸಂದು ನೋವು, ವಿಪರೀತ ತಲೆನೋವು, ತಲೆಸುತ್ತು, ವಾಂತಿ, ಮೈಯಲ್ಲಿ ಗುಳ್ಳೆಗಳು ಡೆಂಗ್ಯೂ ರೋಗದ ಮುಖ್ಯ ಲಕ್ಷಣಗಳು. 105 ಡಿಗ್ರಿ ತಾಪಮಾನಕ್ಕಿಂತಲೂ ಹೆಚ್ಚಿರುವ ನಿರಂತರ ಜ್ವರ ಕೊವಿಡ್ ಹಾಗೂ ಡೆಂಗ್ಯೂ ಎರಡೂ ರೋಗಗಳ ಲಕ್ಷಣವೂ ಹೌದು. ಹೀಗಾಗಿ, ಯಾರಾದರೂ ನಿರಂತರ ಜ್ವರದಿಂದ ಬಳಲುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ.

ಜ್ವರ ಬಂದಾಗ ದೇಹದ ಉಷ್ಣಾಂಶವನ್ನು ಹೆಚ್ಚಾಗುತ್ತಿದೆಯಾ ಅಥವಾ ಕಡಿಮೆಯಾಗುತ್ತಿದೆಯಾ? ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಿರಿ. ಡೆಂಗ್ಯೂ ಬಂದರೆ ಮೈಯಲ್ಲಿ ಗುಳ್ಳೆ, ಚರ್ಮದ ಸುಕ್ಕು ಹಾಗೂ ಕೆಲವು ದಿನಗಳ ನಂತರ ತಲೆ ಸುತ್ತು ಹಾಗೂ ವಾಂತಿ ಕಾಣಿಸಿಕೊಳ್ಳುತ್ತದೆ. ಡೆಂಗ್ಯೂ ಜ್ವರವಾ? ಅಥವಾ ಬೇರೆ ಸೋಂಕಾ? ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಿ. ಜ್ವರದಿಂದ ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ.

ಡೆಂಗ್ಯೂ ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ ಮೂರರಿಂದ 14 ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿ ನೋವು, ಮತ್ತು ಗುಳ್ಳೆಗಳು ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ. ಈಡಿಸ್ ಸೊಳ್ಳೆ ಹೂವಿನ ಕುಂಡ, ಹಳೆಯ ಟೈರ್, ಹಳೆಯ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿಗಳಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದಲೇ ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತವೆ. ಆದ್ದರಿಂದ ಇವುಗಳನ್ನು ಶುಚಿಗೊಳಿಸಿ ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ನೋಡಿಕೊಳ್ಳಬೇಕು. ಇದರಿಂದ ಡೆಂಗ್ಯೂ ಹರಡುವುದನ್ನು ತಪ್ಪಿಸಬಹುದು.

ಡೆಂಗ್ಯೂ ಬಂದಾಗ ಹೆಚ್ಚಿನ ವಿಶ್ರಾಂತಿ ಬಹಳ ಮುಖ್ಯ. ಜ್ವರಕ್ಕೆ ಔಷಧವಾಗಿ ಪ್ಯಾರಸಿಟಮಾಲ್ ಬಳಸಿ. ಆದರೂ ಜ್ವರ ಕಡಿಮೆಯಾಗದಿದ್ದರೆ ಒದ್ದೆ ಬಟ್ಟೆಯಲ್ಲಿ ದೇಹವನ್ನು ಒರೆಸಿ. ದ್ರವ ಪದಾರ್ಥಗಳನ್ನೇ ಹೆಚ್ಚು ಸೇವಿಸಿ. ಅತಿಯಾದ ಸುಸ್ತು ಕಂಡುಬಂದಲ್ಲಿ ಅದು ಪ್ಲೇಟ್ಲೆಟ್ ಕಡಿಮೆಯಾಗಿರುವ ಲಕ್ಷಣವೂ ಆಗಿರಬಹುದು. ಹೊಟ್ಟೆ ನೋವು, ಎದೆನೋವು, ವಾಂತಿ, ರಕ್ತಸ್ರಾವ, ಮೂಗು, ವಸಡು ಮತ್ತು ಮಲಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದರೆ ತಕ್ಷಣವೇ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ.

ಇದನ್ನೂ ಓದಿ: 

ಮಳೆಗಾಲದಲ್ಲಿ ಡೆಂಗ್ಯೂ ರೋಗ ಹರಡಬಹುದು ಎಚ್ಚರ! ರೋಗ ಬಾರದಂತೆ ತಡೆಗಟ್ಟುವ ಕ್ರಮಗಳನ್ನು ತಿಳಿಯಿರಿ

Travel: ಪ್ರಪಂಚದ ಈ ಸ್ಥಳಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ; ಅಚ್ಚರಿಯ ಮಾಹಿತಿ ಇಲ್ಲಿದೆ

(Davanagere more than 120 dengue cases found hospitals allocated for treatment)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada