ಸಂವಿಧಾನಕ್ಕಾಗಲಿ, ಕಾನೂನಿಗಾಗಲಿ ಅವಮಾನ ಮಾಡಿಲ್ಲ: ಕೇದಾರ ಪೀಠದ ಭೀಮಾಶಂಕರ‌ಲಿಂಗ‌ ಶ್ರೀಗಳ ಸ್ಪಷ್ಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 30, 2023 | 6:00 PM

ನಮಗಿಂತ ದೊಡ್ಡದು ಮತ್ತು ದೇವರಿಗಿಂತ ಸಣ್ಣದು ಅಂದ್ರೆ ಸಂವಿಧಾನ ಮತ್ತು ಕಾನೂನು. ಅವುಗಳಿಗೆ ಸದಾ ಗೌರವ ಕೊಡುತ್ತಲೇ ಬಂದಿದ್ದೇವೆ ಎಂದು ಕೇದಾರ ಪೀಠದ ಭೀಮಾಶಂಕರ‌ಲಿಂಗ‌ ಶಿವಾಚಾರ್ಯ ಜಗದ್ಗುರುಗಳು ಸ್ಪಷ್ಟನೆ ನೀಡಿದರು.

ಸಂವಿಧಾನಕ್ಕಾಗಲಿ, ಕಾನೂನಿಗಾಗಲಿ ಅವಮಾನ ಮಾಡಿಲ್ಲ: ಕೇದಾರ ಪೀಠದ ಭೀಮಾಶಂಕರ‌ಲಿಂಗ‌ ಶ್ರೀಗಳ ಸ್ಪಷ್ಟನೆ
ಭೀಮಾಶಂಕರ‌ಲಿಂಗ‌ ಶಿವಾಚಾರ್ಯ ಜಗದ್ಗುರುಗಳು
Follow us on

ದಾವಣಗೆರೆ: ಯಾವುದೇ ಕಾರಣಕ್ಕೂ ನಾವು ಸಂವಿಧಾನ (Constitution) ಹಾಗೂ ಕಾನೂನಿಗೆ ಅವಮಾನ ಮಾಡಿಲ್ಲ. ನಮಗಿಂತ ದೊಡ್ಡದು ಮತ್ತು ದೇವರಿಗಿಂತ ಸಣ್ಣದು ಅಂದ್ರೆ ಸಂವಿಧಾನ ಮತ್ತು ಕಾನೂನು. ಅವುಗಳಿಗೆ ಸದಾ ಗೌರವ ಕೊಡುತ್ತಲೇ ಬಂದಿದ್ದೇವೆ ಎಂದು ಕೇದಾರ ಪೀಠದ ಭೀಮಾಶಂಕರ‌ಲಿಂಗ‌ ಶಿವಾಚಾರ್ಯ ಜಗದ್ಗುರುಗಳು (Bhimashankara Linga Shivacharya Jagadguru) ಸ್ಪಷ್ಟನೆ ನೀಡಿದರು. ಜ. 27 ರಂದು ದಾವಣಗೆರೆ‌ ಜಿಲ್ಲೆಯ ಹರಿಹರ ತಾಲೂಕಿನ ಶಿವನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದರಲ್ಲಿ ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡಿದರು. ಅದು ಹತ್ತು ವರ್ಷದ ಹಿಂದಿನ ಘಟನೆ ಅಂದು ನೆನಪಿಸಿದ್ದೇವು ಎಂದು ಉಜ್ಜಯಿನಿ ಪೀಠ ಬಗ್ಗೆ ತಿಳಿಸಿದರು.

ಪಂಚಪೀಠಗಳ ವೀರಶೈವ ಪರಂಪರೆಯ ಬಗ್ಗೆ ಅಂದು ನಾವು ಹೇಳಿದ್ದೇವೆ. ಪಂಚಪೀಠಗಳ ಪೈಕಿ ಕರ್ನಾಟಕದಲ್ಲಿ ಇರುವುದು ರಂಭಾಪುರಿ ಪೀಠ ಒಂದೇ. ಕೇದಾರ, ಕಾಶಿ, ಶ್ರೀಶೈಲ ಆಯಾ ಸ್ಥಳದಲ್ಲಿ ಇವೆ. ಆದರೆ ಮಧ್ಯಪ್ರದೇಶದಲ್ಲಿರುವ ಮೂಲ ಉಜ್ಜಯಿನಿ ಪೀಠ ಅಭಿವೃದ್ಧಿ ಆಗಬೇಕೆಂದು ಹೇಳಿದ್ದೇನೆ ಎಂದು ಕೇದಾರ ಪೀಠದ ಭೀಮಾಶಂಕರ‌ಲಿಂಗ‌ ಶ್ರೀಗಳ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ತನ್ನ ಇಡೀ ಕುಟುಂಬವನ್ನೇ ಕಾಪಾಡಿದ್ದ ದಾವಣಗೆರೆಯ ಕೀರ್ತಿ ವಿವೇಕ್​ಗೆ ಶೌರ್ಯ ಪ್ರಶಸ್ತಿ, ಆ ರೋಚಕ ಘಟನೆ ಬಿಚ್ಚಿಟ್ಟ ಬಾಲಕ

ಕೋಲಾರ ಜಿಲ್ಲೆಯ ಆವಣಿಯಲ್ಲಿ ಲವಕುಶ ಮಂದಿರಕ್ಕೆ ಶಂಕುಸ್ಥಾಪನೆ

ಕೋಲಾರ: ಲವ ಕುಶ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಕೋಲಾರ ಜಿಲ್ಲೆಯ ಆವಣಿಯಲ್ಲಿ ಲವಕುಶ ಮಂದಿರಕ್ಕೆ ಶಂಕುಸ್ಥಾಪನೆ ಮಾಡಲಾಯಿತು. ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ಅವರು ನೆರವೇರಿಸಿದರು ಶಂಕುಸ್ಥಾಪನೆ ನೆರವೇರಿಸಿದರು. ರಾಮಾಯಣದ ಕುರುಹುಗಳನ್ನು ಹೊಂದಿರುವ, ವಾಲ್ಮೀಕಿ ಆಶ್ರಮ ಎಂದೇ ಹೇಳಲಾಗುವ ಆವಣಿ ಐತಿಹಾಸಿಕ ಹಿನ್ನೆಲೆ ಹೊಂದಿದೆ.

ಅಯೋಧ್ಯೆ ರಾಮಜನ್ಮ ಭೂಮಿಯಾದರೆ, ಆವನಿ ಲವಕುಶರ ಜನ್ಮಭೂಮಿ ಎಂದೇ ಹೇಳಾಗುತ್ತದೆ. ಹಾಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಂತೆ ಆವಣಿಯಲ್ಲಿ ಲವಕುಶ ಮಂದಿರ ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಲಾಗಿದೆ. ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬೆಣ್ಣೆನಗರಿ ದಾವಣಗೆರೆಯಲ್ಲೊಂದು ವಿಶೇಷ ಜಾತ್ರೆ

ದಾವಣಗೆರೆ: ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಕರಿಬಸವೇಶ್ವರ ಗದ್ದಿಗೆ ಇದೆ. ಈ ಗದ್ದಿಗೆಗೆ ಪರಮೇಶ್ವರ ಸ್ವಾಮೀಜಿಗಳು ಬಂದ ಬಳಿಕ ಇಲ್ಲೊಂದು ಸಾಮಾಜಿಕ ಕ್ರಾಂತಿಯಾಗಿದೆ. ಅದೇನಪ್ಪ ಅಂದ್ರೆ ಇಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸಮಪಾಲು ನೀಡಿದ್ದಾರೆ. ವಿಶೇಷ ಅಂದ್ರೆ ಇಲ್ಲಿನ ರಥೋತ್ಸವ ನಡೆಯುವುದು ಮಹಿಳೆಯರಿಗಾಗಿ. ಮಹಿಳೆಯರೇ ರಥ ಎಳೆದುಕೊಂಡು ಹೋಗಬೇಕು. ಹೀಗಾಗಿ ಇದಕ್ಕೆ ಮಹಿಳಾ ಯಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ.

ಇದನ್ನೂ ಓದಿ: ದಾವಣಗೆರೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ಧಿಯಾಗಿದ್ದ ಹೊನ್ನಾಳಿ ಡಾನ್ ಹೋರಿ ಸಾವು

ಎಲ್ಲಿ ನೋಡಿದರಲ್ಲಿ ಸಂಭ್ರಮದಲ್ಲಿ ಮಹಿಳೆಯರು ಮುಳುಗಿರುತ್ತಾರೆ. ಮಹಿಳೆಯರೇ ಇಲ್ಲಿ ದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಾರೆ. ಕಳೆದ 11 ವರ್ಷಗಳಿಂದ ಈ ರಥತ್ಸೋವ ನಡೆಯುತ್ತಿದೆ. ವಾರದಲ್ಲಿ ಎರಡು ದಿನಗಳ ಕಾಲ ಇಲ್ಲಿ ಪೂಜೆ ಮತ್ತು ಅಪ್ಪಣೆ ನಡೆಯುತ್ತೆ. ಅಂದ್ರೆ ಮನೆಯಲ್ಲಿ ಯಾವುದೇ ತೊಂದರೆಗಳಿದ್ದರೇ ಅದಕ್ಕೆ ಪರಿಹಾರ ಹೇಳುವ ಕಾಯಕ ಇಲ್ಲಿದೆ. ಇದೇ ಪರಮೇಶ್ವರ ಸ್ವಾಮೀಜಿಗಳ ಮನಸ್ಸಿನಲ್ಲಿ ಕರಿಬಸಜ್ಜಯ್ಯ ಬಂದು ಸಂದೇಶ ನೀಡುತ್ತಾರೆ ಎಂಬುದು ಜನರ ನಂಬಿಕೆ. ಈ ಜಾತ್ರೆಯ ದಿನ ಗ್ರಾಮದ ತುಂಬೆಲ್ಲಾ ಸಡಗರ ತುಂಬಿರುತ್ತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.