ದಾವಣಗೆರೆ: ನಿಗೂಢ ಜ್ವರಕ್ಕೆ ತತ್ತರಿಸಿದ ಗ್ರಾಮ, 250ಕ್ಕೂ ಹೆಚ್ಚು ಮನೆಗಳಲ್ಲಿ ನರಳಾಡುತ್ತಿರುವ ಜನ
ಗ್ರಾಮದಲ್ಲಿನ ಅರ್ಧದಷ್ಟು ಜನ ಈ ನಿಗೂಢ ಜ್ವರದಿಂದ ಹಾಸಿಗೆ ಹಿಡಿದಿದ್ದಾರೆ. ಇದಕ್ಕೆ ಸಂಬಂಧ ಪಟ್ಟವರು ಯಾರೂ ಕೂಡ ಇದುವರೆಗೂ ಬಂದಿಲ್ಲ.
ದಾವಣಗೆರೆ: ಕಳೆದ ಒಂದು ವಾರದಿಂದ ನಿರಂತರವಾಗಿ 250ಕ್ಕೂ ಹೆಚ್ಚು ಜನರು ನಿಗೂಢ ಜ್ವರ (Fever) ದಿಂದ ಬಳಲುತ್ತಿರುವಂತಹ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಕನಕಟ್ಟೆ ಗ್ರಾಮದಲ್ಲಿ ನಡೆದಿದೆ. ತಲೆನೋವು, ಮೈ ಕೈ ಬಾವು, ಕೀಲುನೋವು. ಜೊತೆಗೆ ವಿಪರೀತ ಜ್ವರದಿಂದ ಬಳಲುತ್ತಿರುವ ಜನ, ನಿತ್ಯ ಜಗಳೂರು, ದಾವಣಗೆರೆ ಆಸ್ಪತ್ರೆಗಳಿಗೆ ಸುತ್ತಾಡುತ್ತಿದ್ದಾರೆ. ಗ್ರಾಮಕ್ಕೆ ವೈದ್ಯರ ತಂಡ ಭೇಟಿ ನೀಡಿ, ವೈದ್ಯರ ಕ್ಯಾಂಪ್ ಹಾಕಿ ಸೂಕ್ತ ಚಿಕಿತ್ಸೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಈ ಕುರಿತಾಗಿ ಗ್ರಾಮಸ್ಥರಾದ ಬೊಮ್ಮನಿಂಗಪ್ಪ ಮಾತನಾಡಿದ್ದು, ಗ್ರಾಮದಲ್ಲಿನ ಅರ್ಧದಷ್ಟು ಜನ ಈ ನಿಗೂಢ ಜ್ವರದಿಂದ ಹಾಸಿಗೆ ಹಿಡಿದಿದ್ದಾರೆ. ಇದಕ್ಕೆ ಸಂಬಂಧ ಪಟ್ಟವರು ಯಾರೂ ಕೂಡ ಇದುವರೆಗೂ ಬಂದಿಲ್ಲ. ಈ ನಿಗೂಢ ಜ್ವರ ಹೇಗೆ ಬಂದಿದೆ ಎನ್ನವುದು ಗೊತ್ತಿಲ್ಲ. ದಯವಿಟ್ಟು ಆರೋಗ್ಯ ಇಲಾಖೆಯವರು ಒಂದು ಸಲಾ ಭೇಟಿ ನೀಡಿ, ನಮ್ಮ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯಾ, ಸೊಳ್ಳೆ, ವಾತಾವರಣದ ಸಮಸ್ಯೆಯ ಎನ್ನುವುದನ್ನು ಜನರಿಗೆ ನಿಖರವಾದ ಮಾಹಿತಿಯನ್ನ ನೀಡಿ ಎಂದು ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.