ಬೆಂಗಳೂರಿನಿಂದ ಹೊಸಪೇಟೆಗೆ ಹೋಗುತ್ತಿದ್ದ ಇಂಡಿಕಾ ಕಾರು ಡಿವೈಡರ್‌ಗೆ ಡಿಕ್ಕಿ: ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ದುರ್ಮರಣ

ಅಪಘಾತದಲ್ಲಿ ಕಾರಿನಲ್ಲಿದ್ದ 6 ಜನ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಮೃತರೆಲ್ಲರೂ ಯಾದಗಿರಿ ಜಿಲ್ಲೆಯ ಶಹಾಪುರ ನಿವಾಸಿಗಳು. ಬೆಂಗಳೂರಿನಿಂದ ಹೊಸಪೇಟೆ ಕಡೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಬೆಂಗಳೂರಿನಿಂದ ಹೊಸಪೇಟೆಗೆ ಹೋಗುತ್ತಿದ್ದ ಇಂಡಿಕಾ ಕಾರು ಡಿವೈಡರ್‌ಗೆ ಡಿಕ್ಕಿ: ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ದುರ್ಮರಣ
ಡಿವೈಡರ್‌ಗೆ ಇನ್ನೋವಾ ಕಾರು ಡಿಕ್ಕಿಯಾಗಿ ರಸ್ತೆ ಭೀಕರ ದುರಂತ: 7 ಜನರ ಸಾವು, ಕಾರಿನಲ್ಲಿದ್ದ6 ಜನ ಸ್ಥಳದಲ್ಲೇ ದುರ್ಮರಣ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 7 ಮಂದಿ ಅಸುನೀಗಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಇಂಡಿಕಾ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಭೀಕರ ದುರಂತ ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ 6 ಜನ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಮೃತರೆಲ್ಲರೂ ಯಾದಗಿರಿ ಜಿಲ್ಲೆಯ ಶಹಾಪುರ ನಿವಾಸಿಗಳು. ಬೆಂಗಳೂರಿನಿಂದ ಹೊಸಪೇಟೆ ಕಡೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ದಾವಣಗೆರೆ ಎಸ್‌ಪಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮೃತರೆಲ್ಲಾ ಸಂಕ್ರಾಂತಿ ಹಬ್ಬಕ್ಕಾಗಿ ಸ್ವಗ್ರಾಮಕ್ಕೆ ಹೋಗುತ್ತಿದ್ದರು. ಬೆಂಗಳೂರಿನಿಂದ ಸ್ವಗ್ರಾಮಗಳಿಗೆ ತೆರಳುತ್ತಿದ್ದ ಎಳು ಜನ ಯುವಕರು 18 ರಿಂದ 22 ವರ್ಷದೊಳಗಿನವರು.

ಮೃತರ ವಿವರ: ಯಾದಗಿರಿ ಜಿಲ್ಲೆಯ ನಾಲ್ಕು, ವಿಜಯನಗರ ಜಿಲ್ಲೆಯ ಇಬ್ಬರು ಹಾಗೂ ವಿಜಯಪುರ ಜಿಲ್ಲೆಯ ಓರ್ವ ರಸ್ತೆ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

1) ಮಲ್ಲನ ಗೌಡ (22) – ಕರದಕಲ್ ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ 2) ಸಂತೋಷ (21) – ಮಲಗಟ್ಟಿ ಗ್ರಾಮ, ಸುರಪುರ ತಾಲ್ಲೂಕು 3) ಸಂಜೀವ್ (20) – ಮಾವಿನಮಟ್ಟಿ, ಸುರಪುರ ತಾಲ್ಲೂಕು 4) ಜೈಬೀಮ್ (18 ) – ಹೂವಿನಹಳ್ಳಿ, ಸುರಪುರ ತಾಲ್ಲೂಕು 5) ರಾಘು (23) – ತಾಳಿಕೋಟೆ, ಬಿಜಾಪುರ ಜಿಲ್ಲೆ 6) ಸಿದ್ದೇಶ್( 20) – ಕೂಡ್ಲಗಿ, ವಿಜಯನಗರ ಜಿಲ್ಲೆ 7) ವೇದಮೂರ್ತಿ (18) – ಈಚಲಬೊಮ್ಮನಹಳ್ಳಿ, ಕೂಡ್ಲಗಿ ತಾಲ್ಲೂಕು

ಇದನ್ನೂ ಓದಿ: ಆರೋಪಿಯ ಬಂಧಿಸಲು ತಮ್ಮ ಕಾರು ಕೊಟ್ಟಿದ್ದೇಕೆ ಜಿಲ್ಲೆಯ ನಂ. 1 ಪೊಲೀಸ್​ ಅಧಿಕಾರಿ? ಇದರಲ್ಲಿ ಇನ್ಸ್​ಪೆಕ್ಟರ್​ ಸಾಹೇಬ ಹಕೀಕತ್ತು, ಹಿಕ್ಮತ್ತು ಏನು?

Published On - 7:23 am, Fri, 14 January 22

Click on your DTH Provider to Add TV9 Kannada