AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ಇಂದು ಶಾಮನೂರು ಅಂತಿಮ ದರ್ಶನ: ಪತ್ನಿ ಸಮಾಧಿ ಪಕ್ಕದಲ್ಲೇ ಚಿರನಿದ್ರೆಗೆ ಶಾಮನೂರು ಶಿವಶಂಕರಪ್ಪ

ಹಿರಿಯ ರಾಜಕಾರಣಿ ಹಾಗೂ ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಲಿಂಗೈಕ್ಯರಾಗಿದ್ದಾರೆ. ದಾವಣಗೆರೆಗೆ ವಿದ್ಯಾಕಾಶಿ ಎಂಬ ಇನ್ನೊಂದು ತಂದು ಕೊಟ್ಟವರು ಶಾಮನೂರ ಶಿವಶಂಕರಪ್ಪ. ಇಂತಹ ಶಾಮನೂರ ಶಿವಶಂಕರಪ್ಪ ಇನ್ನು ನೆನಪು ಮಾತ್ರ. ಅವರ ಅಂತಿಮ ದರ್ಶನಕ್ಕೆ ಜನ ಸಾಗರವೇ ಹರಿದು ಬರುತ್ತಿದೆ. ಇಂದು ಸಂಜೆಯೇ ಶಾಮನೂರು ಶಿವಶಂಕರಪ್ಪ ಪತ್ನಿ ಸಮಾಧಿ ಪಕ್ಕದಲ್ಲೇ ಚಿರನಿದ್ರೆಗೆ ಜಾರಲಿದ್ದಾರೆ.

ದಾವಣಗೆರೆಯಲ್ಲಿ ಇಂದು ಶಾಮನೂರು ಅಂತಿಮ ದರ್ಶನ: ಪತ್ನಿ ಸಮಾಧಿ ಪಕ್ಕದಲ್ಲೇ ಚಿರನಿದ್ರೆಗೆ ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: Ganapathi Sharma|

Updated on: Dec 15, 2025 | 6:27 AM

Share

ದಾವಣಗೆರೆ, ಡಿಸೆಂಬರ್ 15: ಕಾಂಗ್ರೆಸ್​​ನ ಹಿರಿಯ ಮುತ್ಸದ್ದಿ ನಾಯಕ, ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) (Shamanuru Shivashankarappa) ವಯೋಸಹಜ ಅನಾರೋಗ್ಯದಿಂದ ಭಾನುವಾರ ಲಿಂಗೈಕ್ಯರಾಗಿದ್ದು, ಅವರ ಅಂತ್ಯಸಂಸ್ಕಾರ ದಾವಣಗೆರೆಯಲ್ಲಿ ಇಂದು ಸಂಜೆ ನಡೆಯಲಿದೆ. ಬೆಂಗಳೂರಿನಿಂದ ನಸುಕಿನ ಜಾವ ಶಾಮನೂರರ ಪಾರ್ಥಿವ ಶರೀರ ದಾವಣಗೆರೆಗೆ ಆಗಮಿಸಿದೆ.

ಬೆಳಗ್ಗೆ 7 ರಿಂದ 12 ರ ವರೆಗೆ ಶಾಮನೂರ ಪುತ್ರ ಸಚಿವ ಎಸ್​​ಎಸ್​​ ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಪಾರ್ಥಿವ ಶರೀರ ಇರಲಿದೆ. ಇಲ್ಲಿ ಕುಟುಂಬ ಸದಸ್ಯರಷ್ಟೆ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಪೂಜೆ ಸಲ್ಲಿಸಲಿದ್ದು, ಇಲ್ಲಿ ವಿವಿಐಪಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶವಿರಲಿದೆ. ಬಳಿಕ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಗರದ ಹೃದಯ ಭಾಗವಾದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. ಅಲ್ಲಿಂದ ಮೆರವಣಿಗೆ ಮೂಲಕ‌ ಪಾರ್ಥಿವ ಶರೀರವನ್ನು ಆನೆಕೊಂಡದ ಶಾಮನೂರ ಮನೆತನದ ಕಲ್ಲೇಶ್ವರ ರೈಸ್ ಮಿಲ್ ಜಾಗಕ್ಕೆ ಕರೆತರಲಾಗುತ್ತದೆ. ಸಂಜೆ 5:30 ಸೂರ್ಯ ಮುಳುಗುವುದರ ಒಳಗಾಗಿ, ವೀರಶೈವ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ.

ಪತ್ನಿ ಸಮಾಧಿ ಪಕ್ಕದಲ್ಲೇ ಚಿರನಿದ್ರೆಗೆ ಶಾಮನೂರು ಶಿವಶಂಕರಪ್ಪ

ಶಾಮನೂರು ಶಿವಶಂಕರಪ್ಪರ ಅಂತ್ಯಸಂಸ್ಕಾರಕ್ಕೆ ಕಲ್ಲೇಶ್ವರ ಮಿಲ್​ನಲ್ಲಿ ಸಿದ್ಧತೆ ನಡೆದಿದೆ. ರಾತ್ರಿಯಿಂದಲೇ ಜೆಸಿಬಿಯಿಂದ ಸಮಾಧಿ ಗುಂಡಿ ತೆಗೆಯಲಾಗಿದೆ. ಶಾಮನೂರು ಶಿವಶಂಕರಪ್ಪ ತಂದೆ, ತಾಯಿ, ಸಹೋದರರು ಹಾಗೂ ಧರ್ಮಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಶಿವಶಂಕರಪ್ಪ ಅಂತ್ಯಸಂಸ್ಕಾರ ನಡೆಯಲಿದೆ.

ಇನ್ನು ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ನೂರಕ್ಕೂ ಹೆಚ್ಚು ವಿವಿಐಪಿಗಳು ಆಗಮಿಸಲಿದ್ದಾರೆ. ಒಂದು ನೂರಕ್ಕೂ ಹೆಚ್ಚು ಪಂಚಪೀಠ ಮತ್ತು ವಿರಕ್ತಮಠಗಳ ಸ್ವಾಮೀಜಿಗಳು ಭಾಗಿ ಆಗಲಿದ್ದಾರೆ‌. ಹೀಗಾಗಿ, ಎಂಬಿಎ ಕಾಲೇಜ್, ಐಟಿಐ ಕಾಲೇಜ್ ಐದು ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಭಾರತದಲ್ಲೇ ಹಿರಿಯ ಶಾಸಕ ಎನ್ನಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ರಾಜಕೀಯ ಹೇಗಿತ್ತು ನೋಡಿ

ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್​​ಗೆ ನಿಯೋಜಿಸಲಾಗಿದೆ. ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂತಿಮ ದರ್ಶನಕ್ಕೆ ಸುಮಾರು ಒಂದೂವರೆ ಲಕ್ಷ ಜ‌ನ ಸೇರುವ ನಿರೀಕ್ಷೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ