25 ವರ್ಷಗಳಿಂದ ಗೃಹ ಬಂಧನ; ಮಗನ ಚಿಕಿತ್ಸೆಗೆ ಸಹಾಯ ಮಾಡುವಂತೆ ಕುಟುಂಬಸ್ಥರಿಂದ ಮನವಿ
ಆದರೆ ಪಿಯುಸಿ ಓದುತ್ತಿದ್ದಾಗ ಮಾನಸಿಕ ಅಸ್ವಸ್ಥತೆಗೆ ತುತ್ತಾಗಿದ್ದ ನಾಗರಾಜ್, ನಾಗರಿಕರ ಮೇಲೆ ದಾಳಿ ಮಾಡುತ್ತಿದ್ದ. ಇದೇ ಕಾರಣಕ್ಕಾಗಿ ಮನೆಯವರು 25 ವರ್ಷದಿಂದ ಗೃಹ ಬಂಧನದಲ್ಲಿಟ್ಟಿದ್ದಾರೆ.
ದಾವಣಗೆರೆ: ಒಂದು ಎರಡು ದಿನ ಮನೆ ಒಳಗೆ ಕುಳಿತರೆ ಮೂರನೇ ದಿನಕ್ಕೆ ಮನೆಯಿಂದ ಹೊರ ಹೋಗಬೇಕು ಎನಿಸುವುದು ಎಲ್ಲರ ಮನಸ್ಥಿತಿ. ಆದರೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಂಚಿಗನಾಳು ತಾಂಡ ನಿವಾಸಿಯೊಬ್ಬರು ಒಂದಲ್ಲ ಎರಡಲ್ಲ ಬರೋಬ್ಬರಿ 25 ವರ್ಷಗಳಿಂದ ಗೃಹ ಬಂಧನದಲ್ಲಿದ್ದಾರೆ. ಮನೆ ಕಿಂಡಿಯಿಂದ ನೋಡಿದಾಗ ಮಾತ್ರ ಸೂರ್ಯನ ದರ್ಶನವಾಗುತ್ತದೆ. ಅದು ಕೂಡ ಅಪರೂಪ. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಲು ಆರಂಭಿಸಿದ ವ್ಯಕ್ತಿಯ ವಿಚಿತ್ರವಾದ ವರ್ತನೆಗೆ ಬೇಸತ ಬಡ ಕುಟುಂಬ ತೆಗೆದುಕೊಂಡ ನಿರ್ಧಾರವಿದು. ಆಸ್ಪತ್ರೆಗೆಂದು ಸುತ್ತಾಡಿ ದುಡ್ಡಿಲ್ಲದ ಮಗನನ್ನೆ ಮನೆಯಲ್ಲಿ ಬೀಗ ಹಾಕಿ ಕೂಡಿಟ್ಟಿದ್ದಾರೆ. ಹೀಗೆ ಮನೆಯಿಂದ ಹೊರ ಬಾರದ ವ್ಯಕ್ತಿಯ ಈಗಿನ ಸ್ಥಿತಿ ಹೇಗಿದೆ ಗೊತ್ತಾ? ಈ ವರದಿ ನೋಡಿ.
ಯುವಕನಾಗಿದ್ದಾಗ ಮನೆ ಕೊಠಡಿ ಸೇರಿದ್ದ ನಾಗರಾಜ್ ನಾಯ್ಕ ಅವರಿಗೆ ಈಗ 44 ವರ್ಷ. 1993ರಲ್ಲಿ ಉತ್ತಮ ದರ್ಜೆಯಲ್ಲಿ ಎಸ್ಎಸ್ಎಲ್ಸಿ ಪಾಸ್ ಆಗಿ ಪಿಯುಸಿ ಸೇರಿದ್ದರು. ಪಿಯುಸಿಯಲ್ಲಿದ್ದಾಗ ಮನೆ ಸೇರಿದಾತ ಇನ್ನೂ ಹೊರಗೆ ಬಂದಿಲ್ಲ. ಕಳೆದ 25 ವರ್ಷದಿಂದ ಮಾನಸಿಕ ಅಸ್ವಸ್ಥತೆ ಹಿನ್ನೆಲೆ ನಾಗರಾಜ್ ಗೃಹ ಬಂಧನದಲ್ಲಿದ್ದಾರೆ. ನಾಗರಾಜ್ಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗದೇ ಕುಟುಂಬ ಸದಸ್ಯರು ಪರದಾಡುತ್ತಿದ್ದಾರೆ.
ಕಂಚಿಗನಾಳು ತಾಂಡದ ನಿವಾಸಿ ಹೇಮ್ಲಾ ನಾಯ್ಕ-ಅಲಿಬಾಯಿ ದಂಪತಿ ಹಿರಿಯ ಮಗ ನಾಗರಾಜ್. ದಂಪತಿಗೆ ಇಬ್ಬರು ಪುತ್ರರು, ಒಂದು ಪುತ್ರಿ. ಪ್ರತಿಭಾವಂತ ನಾಗರಾಜ 1993 ಎಸ್ಎಸ್ಎಲ್ಸಿ ಪೂರ್ಣಗೊಳಿಸಿದ್ದರು. ಆದರೆ ಪಿಯುಸಿ ಓದುತ್ತಿದ್ದಾಗ ಮಾನಸಿಕ ಅಸ್ವಸ್ಥತೆಗೆ ತುತ್ತಾಗಿದ್ದ ನಾಗರಾಜ್, ನಾಗರಿಕರ ಮೇಲೆ ದಾಳಿ ಮಾಡುತ್ತಿದ್ದ. ಇದೇ ಕಾರಣಕ್ಕಾಗಿ ಮನೆಯವರು ಗೃಹ ಬಂಧನದಲ್ಲಿಟ್ಟಿದ್ದಾರೆ.
ಆರ್ಥಿಕ ಸಮಸ್ಯೆ ಹಿನ್ನೆಲೆ ಗೃಹ ಬಂಧನದಲ್ಲಿ ಇರುವುದು ಅನಿವಾರ್ಯವಾಗಿತ್ತು. ಆತನ ಆರೈಕೆ ಮಾಡುತ್ತಿರುವ ತಾಯಿ ಅಲಿಬಾಯಿ ಕೂಡಾ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಇಂತಹ ಮಗನ ಸ್ಥಿತಿಗೆ ನಾನೇ ಕಾರಣ ಎಂಬ ಚಿಂತೆ ಶುರುವಾಗಿದೆ. ಹೀಗಾಗಿ ನಾಗರಾಜನ ಆರೈಕೆ ಹಾಗೂ ಚಿಕಿತ್ಸೆಗಾಗಿ ಸಹಾಯ ಮಾಡಿ ಎಂದು ನಾಗರಾಜ್ ನಾಯ್ಕ ಹೇಮ್ಲಾ ಮನವಿ ಮಾಡಿದ್ದಾರೆ.
ಕತ್ತಲಲ್ಲಿಯೇ ಕಳೆದ ನಾಗರಾಜನ ಮುಂದಿನ ಬದುಕು ಹೇಗೆ. ತಾಯಿ ಆರೋಗ್ಯ ಹಾಳಾಗಿದೆ. ಆತನಿಗೆ ಅನ್ನ ನೀರು ಕೊಡುವವರು ಯಾರು. ಇಂತಹ ವ್ಯಕ್ತಿಗೆ ಯಾರಾದರೂ ಸಹಾಯ ಮಾಡಿ. ಯಾವುದಾದರು ಸಂಘ -ಸಂಸ್ಥೆಗಳು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿ ಎಂದು ನಾಗರಾಜ್ ನಾಯ್ಕ ಹೇಮ್ಲಾ ಮನವಿ ಮಾಡಿದ್ದಾರೆ.
ಸಹಾಯ ಮಾಡಲು ಇಚ್ಛಿಸುವವರು ಈ ನಂಬರ್ಗೆ ಕರೆ ಮಾಡಿ ಚಂದ್ರ ಹಂಚಗಾನಹಳ್ಳಿ, ಗ್ರಾಮಸ್ಥ: 9481192224 ತಿಪ್ಪಣ್ಣ, ರೈತ ಮುಖಂಡ : 9148943580
ವರದಿ: ಬಸವರಾಜ್ ದೊಡ್ಮನಿ
ಇದನ್ನೂ ಓದಿ: Shocking News: ಮೂರು ತಿಂಗಳಿಂದ ತಂದೆಯ ಶವದೊಟ್ಟಿಗೇ ವಾಸ ಮಾಡುತ್ತಿದ್ದ ಪುತ್ರ !
Pakistan: ಪಾಳುಬಿದ್ದ ಮನೆಯಲ್ಲಿ ಸಿಕ್ಕ 11 ವರ್ಷದ ಹಿಂದು ಬಾಲಕನ ಶವ; ಲೈಂಗಿಕ ದೌರ್ಜನ್ಯ ಎಸಗಿ ಕೊಲೆ
Published On - 12:02 pm, Wed, 24 November 21