Bigamy: ದಾವಣಗೆರೆಯ ಖಿಲಾಡಿ ಆಸಾಮಿ 4 ಮದುವೆಯಾಗಿ ಬೌಂಡರಿ ಬಾರಿಸಿದ್ದಾನೆ, ಅದಕ್ಕೆ ಇಬ್ಬರು ಹೆಂಡತಿಯರು ಅವನಿಗೆ ಬಾರಿಸಿದ್ದಾರೆ!

Davanagere: ಫೋಟೋದಲ್ಲಿರುವ ವ್ಯಕ್ತಿ ವಾಸಿಂ ಜಾಫರ್ ಆಲಿಯಾಸ್ ಸನ್ಮಾನ್ ಅಂತಾ, ದಾವಣಗೆರೆ ವಾಸಿ. ಇವನು ನೋಡಕ್ಕೆ ಬಹಳ ಸಭ್ಯಸ್ಥನ ಹಾಗೆ ಕಾಣಿಸಿಕೊಂಡರೂ ಬಹಳ ಖಿಲಾಡಿ ಅಸಾಮಿ. 4 ಮದುವೆಯಾಗಿ ಬೌಂಡರಿ ಬಾರಿಸಿದ್ದಾನೆ.

Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​

Updated on:Aug 02, 2023 | 11:59 AM

ದಾವಣಗೆರೆ, ಆಗಸ್ಟ್​ 1: ದುಬಾರಿ ಕಾಲದಲ್ಲಿ ಒಂದು ಮದುವೆ ಆಗಿ ಸಂಸಾರ ಮಾಡುವುದು ಬಹಳ ಕಷ್ಟಯಿದೆ. ಅದರೆ ಇಲ್ಲೊಬ್ಬ ಆಸಾಮಿ ಒಂದಲ್ಲ; ಎರಡೂ ಅಲ್ಲ – ಬರೋಬ್ಬರಿ ನಾಲ್ಕು ಮದುವೆಯಾಗಿ (Bigamy) ಬೌಂಡರಿ ಬಾರಿಸಿದ್ದಾನೆ. ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ಅಂತಾ ಮಾಡಿಕೊಂಡು ಮಹಿಳೆಯರಿಗೆ (women) ಸಾಮಾಜಿಕ ನ್ಯಾಯ ಮತು ಸಬಲೀಕರಣ ಅಂತಹ ಅವರನ್ನು ಕೌನ್ಸಲಿಂಗ್ ಅಂತಹ ಕರೆಯಿಸಿಕೊಂಡು, ಅವರಿಗೆ ಮರುಳು ಮಾಡಿ ಬುಟ್ಟಿಗೆ ಹಾಕಿಕೊಂಡು ಪ್ರೀತಿ ಪ್ರೇಮ ಅಂತ ಮಾಡಿ ನಂಬಿಸಿ, ನಾಲ್ಕು ಮಹಿಳೆಯರನ್ನು ಮದುವೆ ಮಾಡಿಕೊಂಡು ದೋಖಾ ಮಾಡಿದ್ದಾನೆ. ಅದರೆ ನಿನ್ನೆ ಮಂಗಳವಾರ ಅವನ ಇಬ್ಬರು ಹೆಂಡತಿಯರು ಹಿಡಿದು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ. ಏನದು ಆ ನಾಲ್ಕು ಮದುವೆಯ ಗುಟ್ಟು… ರಟ್ಟು? ಯಾರು ಅ ಮಹಾನ್ ವಂಚಕ? ಈ ವರದಿ ನೋಡಿ.

ಫೋಟೋದಲ್ಲಿರುವ ವ್ಯಕ್ತಿಯ ಹೆಸರು ವಾಸಿಂ ಜಾಫರ್ ಆಲಿಯಾಸ್ ಸನ್ಮಾನ್. ವಯಸ್ಸು 35, ದಾವಣಗೆರೆಯ (Davanagere) ಆಜಾದ್​ ನಗರದ ನಿವಾಸಿ. ಇವನು ನೋಡಕ್ಕೆ ಬಹಳ ಸಭ್ಯಸ್ಥನ ಹಾಗೆ ಕಾಣಿಸಿಕೊಂಡರೂ ಬಹಳ ಖಿಲಾಡಿ ಅಸಾಮಿ. ಇವನು ದಾವಣಗೆರೆಯ ಮದೀನಾ ಲೇಔಟ್ ನಲ್ಲಿ ಬಂಧೆ ನವಾಜ್ ಮಸೀದಿ ಹತ್ತಿರ ಭಾರತೀಯ ಮಾನವ ಹಕ್ಕುಗಳ ಸಂಸ್ಥೆಯೊಂದನ್ನು ಮಾಡಿಕೊಂಡಿದ್ದಾನೆ. ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಇರುತ್ತಾನೆ.

ಅದರೆ ಇಲ್ಲಿಗೆ ಬರುವ ಹೆಣ್ಣು ಮಕ್ಕಳ ಬಳಿ ಪ್ರೀತಿ ಪ್ರೇಮ ಅಂತ ನಾಟಕ ಮಾಡಿ ಅವರನ್ನು ಮದುವೆ ಮಾಡಿಕೊಂಡಿಕೊಳ್ಳತ್ತಾನೆ. ಹರಿಹರದ ಹಷ್ಮತ್ ಎಂಬ ಮಹಿಳೆ ಮೊದಲ ಹೆಂಡತಿಯಾಗಿದ್ದರೆ, ಎರಡನೆಯವರು ನೈಮುಸಿ -ದಾವಣಗೆರೆಯ ವೆಂಕೋಬಾ ಕಾಲೋನಿ ನಿವಾಸಿ. ಇನ್ನು ಮೂರನೆಯವರು ಜುಬೇದು ಬಾನು- ಇವರು ದಾವಣಗೆರೆಯ ವಿನೋಬನಗರದ ನಿವಾಸಿಯಾಗಿದ್ದಾರೆ.

ವೃತ್ತಿಯಲ್ಲಿ ಹೋಂಗಾರ್ಡ್ ಆಗಿದ್ದು ಅವರಿಗೆ ಒಂದು ಹೆಣ್ಣು ಆಗಿದೆ. ನಾಲ್ಕನೆಯ ಹೆಂಡತಿಯಾಗಿ ಬಂದಿರುವುದು ಹರಿಹರ ತಾಲೂಕಿನ ಮೆಲೆಬೆನ್ನೂರು ಗ್ರಾಮದ ರೂಹಿನಬಾನು. ಇವರನ್ನೆಲ್ಲ ಈ ಖದೀಮ ನಂಬಿಸಿ ಮದುವೆ ಆಗಿದ್ದಾನೆ. ಈ ಹಿಂದೆ ಇವನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಅದರೆ ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ ಎಂಬುದು ಇವನಿಂದ ಮೋಸ ಹೋದ ಮಹಿಳೆಯ ಆರೋಪವಾಗಿದೆ.

ವಾಸಿಂ ಜಾಫರ್ ಆಲಿಯಾಸ್ ಸನ್ಮಾನ್ ಇವನು ಸುಮಾರು ನಾಲ್ಕು ಮದುವೆ ಆಗಿದ್ದಾನೆ. ಅದರೆ ಇವನು ಯಾರೊಟ್ಟಿಗೂ ಸರಿಯಾಗಿ ಸಂಸಾರ ಮಾಡುವುದಿಲ್ಲ. ಯಾಕೆಂದರೆ ಇವನಿಗೆ ಮದುವೆ ಅಂದರೆ ಆಟ ಆಡುವುದೇ ಆಗಿದೆ. ಇವನು ಮದುವೆ ಮಾಡಿಕೊಳ್ಳುವುದು ಸಂಸಾರ ಮಾಡುವುದಕ್ಕೆ ಅಲ್ಲ. ಬದಲಿಗೆ, ಅವರ ಹತ್ತಿರ ಇರುವ ಬಂಗಾರ-ಹಣಕ್ಕೆ ಮಾತ್ರ ಮದುವೆ ಮಾಡಿಕೊಳ್ಳುತ್ತಾನೆ ಎಂದು ಈ ಮಹಿಳೆಯರು ಆರೋಪ ಮಾಡಿದ್ದಾರೆ.

ಇವನನ್ನು ಮದುವೆಯಾದ ಮಹಿಳೆಯರು ಪೊಲೀಸ್ ಠಾಣೆಗೆ ಯಾರಾದರೂ ದೂರು ನೀಡಲು ಹೋದರೆ ಅವರಿಗೆ ಕೊಲೆ ಬೆದರಿಕೆ ಹಾಕುತ್ತಾನೆ ಎಂದು ಇವರು ಆರೋಪ ಮಾಡಿದ್ದಾರೆ. ಅಲ್ಲದೇ ಆಜಾದ್ ನಗರದಲ್ಲಿ ನಾಲ್ಕು ಕೇಸ್ ದಾಖಲು ಮಾಡಿದ್ದಾರೆ. ಅದರೆ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾನೂ ಇವರು ಆರೋಪಿಸುತ್ತಾರೆ.

Also Read: ಆ ಸಭ್ಯಸ್ಥ ಯುವಕನನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ, ಸ್ವಿಫ್ಟ್ ಕಾರಿನಲ್ಲಿ ಹಿಂಬಾಲಿಸಿ ಹತ್ಯೆಗೈದರು: ಕಾರಣವೇನು?

ಅದರೆ ನಿನ್ನೆ ಮಂಗಳವಾರ ನಗರದ ಆರ್ ಟಿ ಓ ಕಚೇರಿ ಬಳಿಗೆ ಬರುವ ಸಮಯದಲ್ಲಿ ಹಿಡಿದು ಜಿಲ್ಲಾ ರಕ್ಷಣಾಧಿಕಾರಗಳ ಕಚೇರಿಗೆ ಕರೆತರಲಾಯಿತು. ಅನಂತರ ಪೊಲೀಸರಿಗೆ ಒಪ್ಪಿಸಿಲಾಯಿತು. ಅವನಿಗೆ ತಕ್ಕ ಶಿಕ್ಷೆ ಆಗಬೇಕೆಂದು ಸದರಿ ಮಹಿಳೆಯರು ಒತ್ತಾಯಿಸಿದ್ದಾರೆ.

ದಾವಣಗೆರೆ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:40 am, Wed, 2 August 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ