AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಚಿನ್ನದ ನಾಣ್ಯ ನೀಡಿ ವಂಚನೆ; ಚಿನ್ನದ ಆಸೆಗೆ ಬಿದ್ದು 7 ಲಕ್ಷ ಕಳೆದುಕೊಂಡ ಮುಂಬೈನ ಪಾನ್ ವಾಲಾ

ಕಡಿಮೆ ಬೆಲೆಗೆ ನಾಣ್ಯಗಳನ್ನು ತಂದು ಮುಂಬೈನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ಆಮಿಷ ಒಡ್ಡಿದ ಆರೋಪಿಗಳು 3600 ಚಿನ್ನದ ನಾಣ್ಯಗಳಿಗೆ 10 ಲಕ್ಷವಾಗುತ್ತದೆ. ನಾನು ಚೌಕಾಸಿ ಮಾಡಿ 7 ಲಕ್ಷಕ್ಕೆ ಕೊಡಿಸುತ್ತೇನೆ ಎಂದು ಗುಲಾಬ್ ಚಂದ್‌ ಅವರನ್ನು ನಂಬಿಸಿದ್ದಾರೆ.

ನಕಲಿ ಚಿನ್ನದ ನಾಣ್ಯ ನೀಡಿ ವಂಚನೆ; ಚಿನ್ನದ ಆಸೆಗೆ ಬಿದ್ದು 7 ಲಕ್ಷ ಕಳೆದುಕೊಂಡ ಮುಂಬೈನ ಪಾನ್ ವಾಲಾ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Aug 02, 2021 | 8:02 AM

Share

ದಾವಣಗೆರೆ: ಹಳೆಯ ಕಾಲದ ಪಾರಂಪರಿಕ ನಾಣ್ಯ ನೀಡುವುದಾಗಿ ನಂಬಿಸಿ ಮುಂಬೈನ ಪಾನ್ ಬೀಡಾ ಶಾಪ್ ಮಾಲೀಕನಿಗೆ ಎಳು ಲಕ್ಷ ವಂಚಿಸಿರುವ ಘಟನೆ ದಾವಣಗೆರೆ ನಗರದ ಲೋಕಿಕೆರೆ ರಸ್ತೆಯ ಅಯ್ಯಪ್ಪ ದೇವಾಲಯದ ಬಳಿ ನಡೆದಿದೆ. ಪೂರ್ವ ಮುಂಬೈನ ಗುಲಾಬ್ ಚಂದ್ ಶೀತಲ್ ಪ್ರಸಾದ್ ಗುಪ್ತಾ ಅವರಿಗೆ ಹರ್ಷದ್ ರಾಜ್ ಕುಮಾರ್ ಪಾಠಕ್, ಕರ್ನಾಟಕದ ರಮೇಶ್ ಹಾಗೂ ಮಹಾರಾಷ್ಟ್ರದ ನಾಸಿಕ್‌ನ ಅಮನ್ ಶೇಖ್ ಹಾಗೂ ಜೀಶಾನ್ ಶೇಖ್ ಚಿನ್ನದ ನಾಣ್ಯ ನೀಡುವುದಾಗಿ ಮೋಸ ಮಾಡಿದ್ದಾರೆ.

ಗುಲಾಬ್ ಚಂದ್ ಹಾಗೂ ಹರ್ಷದ್‌ ರಾಜ್‌ಕುಮಾರ್ ಪಾಠಕ್ ಅಕ್ಕಪಕ್ಕದ ಮನೆಯವರಾಗಿದ್ದು, ಆರೋಪಿ ಹರ್ಷದ್ ರಾಜ್ ಕುಮಾರ್ ಪಾಠಕ್, ಅಮನ್ ಶೇಖ್ ಹಾಗೂ ಜೀಶನ್ ಶೇಖ್ ಅವರನ್ನು ಗುಲಾಬ್‌ ಚಂದ್‌ಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಈ ವೇಳೆ ಅಮನ್ ಶೇಖ್ ಎಂಬಾತ ಕರ್ನಾಟಕದಲ್ಲಿ ನನ್ನ ಸ್ನೇಹಿತ ರಮೇಶ್ 5 ಕೆಜಿ ಪಾರಂಪರಿಕ ನಾಣ್ಯವನ್ನು ಇಟ್ಟಿದ್ದು, ಹಣಕಾಸಿನ ಸಮಸ್ಯೆಯಿಂದಾಗಿ ಕಡಿಮೆ ಬೆಲೆಗೆ ನಾಣ್ಯಗಳನ್ನು ಮಾರಾಟ ಮಾಡುತ್ತಿದ್ದಾನೆ. ಹುಬ್ಬಳ್ಳಿಯ ಚೆಕ್‌ ಪೋಸ್ಟ್ ಬಳಿ ನನ್ನ ಸಹೋದರ ಜೀಶನ್‌ ಬಳಿ ಈ ನಾಣ್ಯಗಳನ್ನು ನೋಡಿದ್ದೇನೆ ಎಂದು ಗುಲಾಬ್ ಚಂದ್‌ಗೆ ತಿಳಿಸಿದ್ದಾನೆ.

ಕಡಿಮೆ ಬೆಲೆಗೆ ನಾಣ್ಯಗಳನ್ನು ತಂದು ಮುಂಬೈನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ಆಮಿಷ ಒಡ್ಡಿದ ಆರೋಪಿಗಳು 3600 ಚಿನ್ನದ ನಾಣ್ಯಗಳಿಗೆ 10 ಲಕ್ಷವಾಗುತ್ತದೆ. ನಾನು ಚೌಕಾಸಿ ಮಾಡಿ 7 ಲಕ್ಷಕ್ಕೆ ಕೊಡಿಸುತ್ತೇನೆ ಎಂದು ಗುಲಾಬ್ ಚಂದ್‌ ಅವರನ್ನು ನಂಬಿಸಿದ್ದಾರೆ.

ಇದನ್ನೆಲ್ಲಾ ನಂಬಿದ ಗುಲಾಬ್ ಚಂದ್, ತಮ್ಮ ಪತ್ನಿ ಹಾಗೂ ಹರ್ಷದ್ ರಾಜ್ ಕುಮಾರ್ ಜತೆ ಹುಬ್ಬಳ್ಳಿಗೆ ಹೊರಟು ಬಂದಿದ್ದಾರೆ. ಆದರೆ ಆರೋಪಿಗಳು ಲೋಕಿಕೆರೆ ರಸ್ತೆಯ ಅಯ್ಯಪ್ಪ ದೇವಾಲಯದ ಬಳಿ ಬರಲು ಹೇಳಿದ್ದಾರೆ. ಅದರಂತೆಯೇ ಲೋಕಿಕೆರೆಗೆ ಬಂದ ಗುಲಾಬ್‌ ಚಂದ್ ಕುಟುಂಬಕ್ಕೆ ರಮೇಶ್ ಎಂಬಾತ ನನ್ನ ಬಳಿ 3600 ಪಾರಂಪರಿಕ ನಾಣ್ಯಗಳು ಇವೆ ಎಂದು ಹೇಳಿ ಕುಂಕುಮ ಲೇಪಿಸಿರುವ ನಾಣ್ಯಗಳನ್ನು ನೀಡಿದ್ದಾನೆ. ಆದರೆ ಮುಂಬೈನಲ್ಲಿ ಹೋಗಿ ಈ ನಾಣ್ಯವನ್ನು ಪರೀಕ್ಷಿಸಿದಾಗ ತಾಮ್ರಲೇಪಿತ ನಾಣ್ಯಗಳು ಎಂದು ತಿಳಿದುಬಂದಿದೆ. ಸದ್ಯ ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಶುರುವಾದ ನಕಲಿ ಚಿನ್ನದ ದಂಧೆ; 4.80 ಲಕ್ಷ ರೂಪಾಯಿ ವಂಚಿಸಿದ ಓರ್ವನ ಬಂಧನ

ವಂಚನೆ ಆರೋಪ; ಸ್ಯಾಂಡಲ್​ವುಡ್​ ನಿರ್ಮಾಪಕನಿಗೆ 5 ಕೋಟಿ ದಂಡ, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​

2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ