AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ವಂಚಿಸಿದ್ದ ಆರೋಪಿಗಳು ಅರೆಸ್ಟ್, 2 ಕೋಟಿ 68 ಲಕ್ಷ ಹಣ ರೈತರಿಗೆ ಕೊಡಿಸಿದ ಪೊಲೀಸರು

ಜಿಎಂಸಿ ಗ್ರೂಪ್ಸ್ ಅಂತಾ ಕಂಪನಿ ಮಾಡಿಕೊಂಡು ರೈತರಿಗೆ ಸಾಲ ಹಾಗೂ ರಸಗೊಬ್ಬರ ನೀಡುತ್ತಿದ್ದರು. 20 ರಿಂದ 30 ಲಕ್ಷ ರೂಪಾಯಿ ಬಂಡವಾಳ ಹಾಕಿ ಪ್ರತಿ ವರ್ಷ ಮೆಕ್ಕೆಜೋಳದ ಹಂಗಾಮಿನಲ್ಲಿ ರೈತರಿಗೆ ದುಡ್ಡು ಕೊಡದೇ ಮೆಕ್ಕೆಜೋಳ ಖರೀದಿಸುತ್ತಿದ್ದರು. ನಂತರ ದುಡ್ಡು ಬಂದಿಲ್ಲ ಎನ್ನುತ್ತಿದ್ದರು.

ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ವಂಚಿಸಿದ್ದ ಆರೋಪಿಗಳು ಅರೆಸ್ಟ್, 2 ಕೋಟಿ 68 ಲಕ್ಷ ಹಣ ರೈತರಿಗೆ ಕೊಡಿಸಿದ ಪೊಲೀಸರು
2 ಕೋಟಿ 68 ಲಕ್ಷ ಹಣ ರೈತರಿಗೆ ಕೊಡಿಸಿದ ಪೊಲೀಸರು
TV9 Web
| Edited By: |

Updated on: Jan 13, 2022 | 2:57 PM

Share

ದಾವಣಗೆರೆ: ಪರಿಶ್ರಮದ ದುಡ್ಡು ಎಲ್ಲೂ ಹೋಗಲ್ಲ ಎಂಬ ಮಾತಿನಂತೆಯೇ ಹೊಟ್ಟೆ ಮೇಲೆ ಹೊಡೆದು ರೈತರನ್ನು ಮೋಸ ಮಾಡಿ ನಾಪತ್ತೆ ಆಗಿದ್ದ ವಂಚಕರನ್ನು ಪೊಲೀಸರು ಅರೆಸ್ಟ್ ಮಾಡಿ ರೈತರಿಗೆ ಸಿಗಬೇಕಾದ ಹಣವನ್ನು ಹಿಂತಿರುಗಿಸಿದ್ದಾರೆ. ಸದ್ಯ ಬ್ಯಾಂಕ್ ಉದ್ಯೋಗಿ ಸೇರಿ ಆರು ಜನ ವಂಚಕರನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಸಿಕ್ಕ ಬರೋಬರಿ ಎರಡು ಕೋಟಿ 68 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.

ಮೆಕ್ಕೆಜೋಳ ಮಾರಾಟ ಮಾಡಿ ಹಣ ಕಳೆದು ಕೊಂಡ ರೈತರು ಇಂದು ನಿಜಕ್ಕೂ ಭಾವುಕರಾಗಿದ್ದರು. ಒಂದು ವರ್ಷದ ಹಿಂದೆ ವಂಚಿಸಿದ ಪ್ರಕರಣ ಪತ್ತೆ ಹಚ್ಚಿ 2.68 ಕೋಟಿ ರೂಪಾಯಿ ಆರೋಪಿಗಳಿಂದ ವಸೂಲಿ ಮಾಡಿ. ಇಂದು ರೈತರಿಗೆ ವಾಪಸ್ಸು ಮಾಡಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅವರು ಹಣ ಕಳೆದುಕೊಂಡ ರೈತರಿಗೆ ಹಣ ವಾಪಸ್ಸು ಮಾಡಿದರು.

ರೈತರಿಗೆ ತಮ್ಮ ಹಣ ಕೊಡಿಸಿದ ಖಾಕಿ ಶಿವಲಿಂಗಯ್ಯ, ಚೇತನ್, ವಾಗೀಶ್ ಚಂದ್ರು , ಮಹೇಶ್ವರಯ್ಯ ಹಾಗೂ ಕೆನರಾ ಬ್ಯಾಂಕ್ ಉದ್ಯೋಗಿ ಶಿವಕುಮಾರ್ ಬಂಧಿತರು. ಆರೋಪಿಗಳು ರೈತರ ಜಮೀನಿಗೆ ಹೋಗಿ ಅವರಿಂದ ಸಾವಿರಾರು ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಿ ಆ ಮೆಕ್ಕೆಜೋಳ ತಮಿಳುನಾಡಿಗೆ ಕಳುಹಿಸುತ್ತಿದ್ದರು. ಮೊದಲು ರೈತರ ಕೈಗೆ ಪುಡಿಗಾಸು ಕೊಟ್ಟು ನಂತರ ಹಣವೆ ಬಂದಿಲ್ಲ ಎಂದು ಮೋಸ ಮಾಡಿ ಹಣವನ್ನು ತಾವೇ ಇಟ್ಟುಕೊಳ್ಳುತ್ತಿದ್ದರು. ಹೀಗೆ ಸಾವಿರಾರು ರೈತರಿಗೆ ವಂಚನೆ ಮಾಡುವುದು ಇವರ ಕೆಲ್ಸಾ. ಇದಕ್ಕಾಗಿಯೇ ಇವರೊಂದು ಜಿಎಂಸಿ ಎಂದು ಕಂಪನಿ ಮಾಡಿಕೊಂಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 96 ಜನ ರೈತರ ಹಾಗೂ 29 ಜನ ವರ್ತಕರಿಂದ 125 ಜನರಿಂದ ಮೆಕ್ಕೆಜೋಳ ಖರೀದಿಸಿ ಕಳೆದ ಒಂದುವರೆ ವರ್ಷದಿಂದ ಹಣ ನೀಡದೇ ವಂಚಿಸಿ ತಲೆ ಮರೆಸಿಕೊಂಡಿದ್ದರು. ದಾವಣಗೆರೆ ಪೊಲೀಸರು ವಂಚಕರನ್ನು ಬಂಧಿಸಿ ರೈತರಿಗೆ ನ್ಯಾಯ ಕೊಡಿಸಿದ್ದಾರೆ. ಅವರಿಂದ ಬರೋಬರಿ 2,68,470 ರೂಪಾಯಿ ನಗದು ವಶ ಪಡಿಸಿಕೊಂಡಿದ್ದಾರೆ.

dvg cheat

2 ಕೋಟಿ 68 ಲಕ್ಷ ಹಣ ರೈತರಿಗೆ ಕೊಡಿಸಿದ ಪೊಲೀಸರು

ತಾವು ಕಳೆದುಕೊಂಡ ಹಣಕ್ಕಾಗಿ ರೈತರು ಹತ್ತಾರು ಸಲ ಹೋರಾಟ ಮಾಡಿದ್ದರು. ಪ್ರಮುಖ ಆರೋಪಿ ಶಿವಲಿಂಗಯ್ಯ ಅವರ ಮನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದರು. ಕೆಲ ಸಲ ಹಲ್ಲೆಗೂ ರೈತರು ಮುಂದಾಗಿದ್ದರು. ಇದರಲ್ಲಿ ದಾವಣಗೆರೆ ಹಾಗೂ ಪಕ್ಕದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರೈತರೇ ಹೆಚ್ಚಾಗಿದ್ದರು. ಇದರಲ್ಲಿ ಸಂತೋಷ ಅಂತ ಓರ್ವ ರೈತ ಎಲ್ಲರನ್ನನ ಸೇರಿಸಿ ದಾವಣಗೆರೆ ನಗರದ ಆರ್ ಎಂಸಿ ಪೊಲೀಸ್ ಠಾಣೆಗೆ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದ. ಎಸ್ಪಿ ರಿಷ್ಯಂತ್, ಡಿಸಿಆರ್ ಬಿ ವಿಭಾಗದ ಡಿವೈಎಸ್ಪ್ ಬಸವರಾಜ್ ಅವರ ನೇತ್ರತ್ವದಲ್ಲಿ ತಂಡ ರಚನೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಪೊಲೀಸರು ಬೀಸಿದ ಬಲೆಗೆ ಕಿಲಾಡಿ ವಂಚಕರ ಗ್ಯಾಂಗ್ ಸಿಕ್ಕಿ ಬಿದ್ದಿದೆ.

ಜಿಎಂಸಿ ಗ್ರೂಪ್ಸ್ ಅಂತಾ ಕಂಪನಿ ಮಾಡಿಕೊಂಡು ರೈತರಿಗೆ ಸಾಲ ಹಾಗೂ ರಸಗೊಬ್ಬರ ನೀಡುತ್ತಿದ್ದರು. 20 ರಿಂದ 30 ಲಕ್ಷ ರೂಪಾಯಿ ಬಂಡವಾಳ ಹಾಕಿ ಪ್ರತಿ ವರ್ಷ ಮೆಕ್ಕೆಜೋಳದ ಹಂಗಾಮಿನಲ್ಲಿ ರೈತರಿಗೆ ದುಡ್ಡು ಕೊಡದೇ ಮೆಕ್ಕೆಜೋಳ ಖರೀದಿಸುತ್ತಿದ್ದರು. ನಂತರ ದುಡ್ಡು ಬಂದಿಲ್ಲ ಎನ್ನುತ್ತಿದ್ದರು. ತೀವ್ರ ಒತ್ತಡ ಹಾಕಿದವರಿಗೆ ಅಲ್ಪ ಸ್ವಲ್ಪ ಹಣ ಕೊಟ್ಟು ಸುಮ್ಮನಾಗುತ್ತಿದ್ದರು. ಇದೇ ವಂಚನೆ ನಿರಂತರ ಮಾಡಿಕೊಂಡು ಬಂದಿದ್ದರು. ಈಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇನ್ನಷ್ಟು ಜನ ರೈತರಿಗೆ ಹಾಗೂ ವರ್ತಕರಿಗೆ ವಂಚಿಸಿದ ಶಂಕೆ ಇದೆ. ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ dvg cheat

ಇದನ್ನೂ ಓದಿ: Video: ಚೀನಾದಲ್ಲಿ ಝೀರೋ ಕೊವಿಡ್ ನಿಯಮ; ಲೋಹದ ಪೆಟ್ಟಿಗೆಯೊಳಗಿರಬೇಕು ಕೊವಿಡ್ ರೋಗಿಗಳು