ದಾವಣಗೆರೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 95 ಮಕ್ಕಳು ಅಸ್ವಸ್ಥ; ಆಸ್ಪತ್ರೆಯಲ್ಲಿ ಚಿಕಿತ್ಸೆ
Davanagere News: ದಾವಣಗೆರೆಯ ವಸತಿ ಶಾಲೆಗೆ ತಹಶೀಲ್ದಾರ್, ಟಿಹೆಚ್ಒ, ಮಕ್ಕಳ ತಜ್ಞರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳು ಸೇವಿಸಿದ್ದ ಆಹಾರವನ್ನು ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿದ್ದಾರೆ.
ದಾವಣಗೆರೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 95 ಮಕ್ಕಳು ಅಸ್ವಸ್ಥರಾದ ಘಟನೆ ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿರುವ ಅಲ್ಪಸಂಖ್ಯಾತರ ಶಾಲೆಯಲ್ಲಿ ನಡೆದಿದೆ. ರಾತ್ರಿ ಅನ್ನ ಸಾಂಬಾರ್, ಬೆಳಗ್ಗೆ ಚಿತ್ರಾನ್ನ ಸೇವಿಸಿದ್ದ ಮಕ್ಕಳು ವಾಂತಿ, ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. 95 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡ 50 ವಿದ್ಯಾರ್ಥಿಗಳಿಗೆ ಜಗಳೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೊರಾರ್ಜಿ ವಸತಿ ಶಾಲೆಯಲ್ಲೇ 45 ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ವಸತಿ ಶಾಲೆಗೆ ತಹಶೀಲ್ದಾರ್, ಟಿಹೆಚ್ಒ, ಮಕ್ಕಳ ತಜ್ಞರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳು ಸೇವಿಸಿದ್ದ ಆಹಾರವನ್ನು ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಉಸಿರಾಡಲು ಶುದ್ಧ ಮತ್ತು ನಿರ್ಮಲ ಹವೆಯಿರುವ ಭಾರತದ ಮೊದಲ ಐದು ನಗರಗಳಲ್ಲಿ ದಾವಣಗೆರೆಯೂ ಸೇರಿದೆ!
ಇದನ್ನೂ ಓದಿ: ದಾವಣಗೆರೆ: ಶಿಕ್ಷಕ ಪ್ರಕಾಶ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿದ್ಯಾರ್ಥಿಗಳು