ಡಿಪಾಸಿಟ್ ವೇಳೆ ಎಡವಟ್ಟು, 52 ಸಾವಿರ ರೂ. ಹಣ ದೋಚಿದ ಅನಾಮಿಕ ವ್ಯಕ್ತಿ
ಡಿಪಾಸಿಟ್ ಮಿಷನ್ನಲ್ಲಿ ಮಾಹಿತಿ ಭರ್ತಿ ಮಾಡಿ ಡಿಪಾಸಿಟ್ ಬಟನ್ ಒತ್ತುವುದನ್ನು ಮರೆತ ಹಿನ್ನೆಲೆ 52 ಸಾವಿರ ರೂ. ಮಿಷನ್ನಲ್ಲೇ ಉಳಿದಿದೆ. ಯಾರೂ ಇಲ್ಲದ್ದನ್ನ ನೋಡಿದ ಅನಾಮಿಕ ವ್ಯಕ್ತಿ ಹಣ ದೋಚಿ ಪರಾರಿಯಾಗಿದ್ದಾನೆ.
ದಾವಣಗೆರೆ: ಹಣ ಡಿಪಾಸಿಟ್ ಮಿಷನ್ನಿಂದ ಅನಾಮಿಕ ವ್ಯಕ್ತಿ ನಗದು (money) ದೋಚಿರುವಂತಹ ಘಟನೆ ನಗರದ ಪಿ.ಬಿ.ರೋಡ್ ರಿಲಯನ್ಸ್ ಮಾರ್ಟ್ ಎದುರಿಗಿರುವ ಐಸಿಐಸಿಐ ಬ್ಯಾಂಕ್ನಲ್ಲಿ ನಡೆದಿದೆ. ವಿಜಯ್ ಎಂಬುವರು 52 ಸಾವಿರ ರೂ. ಹಣ ಡಿಪಾಸಿಟ್ ಮಾಡಲು ಬ್ಯಾಂಕ್ಗೆ ಬಂದಿದ್ದರು. ಈ ವೇಳೆ ಡಿಪಾಸಿಟ್ ಮಿಷನ್ ಮೂಲಕ ಹಣ ಹಾಕಲು ಸಹಾಯಕ ರಾಘವೇಂದ್ರನಿಗೆ ಹೇಳಿದ್ದಾರೆ.
ಅಂಗಡಿ ಸಿಬ್ಬಂದಿ ರಾಂಘವೇಂದ್ರ ಡಿಪಾಸಿಟ್ ಮಿಷನ್ನಲ್ಲಿ ಮಾಹಿತಿ ಭರ್ತಿ ಮಾಡಿ ಡಿಪಾಸಿಟ್ ಬಟನ್ ಒತ್ತುವುದನ್ನು ಮರೆತ್ತಿದ್ದಾರೆ. ಹಾಗಾಗಿ 52 ಸಾವಿರ ರೂ. ಮಿಷನ್ನಲ್ಲೇ ಉಳಿದಿದೆ. ಹಣ ಡಿಪಾಸಿಟ್ ಆಗಿದೆ ಎಂದು ವಿಜಯ್, ರಾಘವೇಂದ್ರ ಹೊರಗೆ ಬಂದಿದ್ದಾರೆ. ಅದೇ ವೇಳೆಗೆ ಹಣ ಡ್ರಾ ಮಾಡಲು ಹೋದ ವ್ಯಕ್ತಿ ಕಣ್ಣಿಗೆ 52 ಸಾವಿರ ಹಣ ಇರುವುದು ಕಂಡಿದೆ.
ಇದನ್ನೂ ಓದಿ: ಕೊಡಗು: ವಿದ್ಯುತ್ ಬಿಲ್‌ನಲ್ಲಿ ವ್ಯತ್ಯಾಸ, ಬಿಲ್ ಕಲೆಕ್ಟರ್ಗೆ ಚಾಕು ಇರಿತ
ಯಾರೂ ಇಲ್ಲದ್ದನ್ನ ನೋಡಿದ ವ್ಯಕ್ತಿ 52 ಸಾವಿರ ರೂ. ದೋಚಿ ಪರಾರಿಯಾಗಿದ್ದಾನೆ. ಅನಾಮಿಕ ವ್ಯಕ್ತಿ ಹಣ ದೋಚುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಕೆಟಿಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ 15 ದಿನ ಕಳೆದರೂ ಪೊಲೀಸರು ಹಾಗೂ ಬ್ಯಾಂಕ್ ಸಿಬ್ಬಂದಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ವಿಜಯ್ ಹೇಳಿದ್ದಾರೆ.
ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ: ಪರಾರಿ
ಕೋಲಾರ: ನಗರದ ಪಿ.ಸಿ. ಬಡಾವಣೆಯ ಎಸ್ಬಿಐ ಎಟಿಎಂನಲ್ಲಿ ದರೋಡೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಶೆಟ್ಡರ್ ಮುರಿದು ಒಳನುಗ್ಗಿದ ಕಳ್ಳರು ಎಟಿಎಂ ಹಣ ಕಳ್ಳತನದ ವಿಫಲ ಯತ್ನದಿಂದಾಗಿ ಪರಾರಿ ಆಗಿದ್ದಾರೆ.
ಸ್ಥಳಕ್ಕೆ ನಗರಠಾಣೆ ಸರ್ಕಲ್ ಇನ್ಸ್ಪೆಕ್ಟರ್, ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಕಳೆದ ರಾತ್ರಿ ಎರಡು ಎಟಿಎಂನಲ್ಲಿ 30 ಲಕ್ಷ ರೂ. ದೋಚಲಾಗಿದೆ. ಕಳ್ಳರ ಬೇಟೆಗೆ ಕೋಲಾರ ನಗರದಲ್ಲಿ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಸಭೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:54 pm, Thu, 13 July 23