ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಕಳಪೆ ಅಕ್ಕಿ ವಿತರಣೆ ಆರೋಪ; ರಬ್ಬರ್ನಂಥ ಅನ್ನ: ತಹಶೀಲ್ದಾರ್ಗೆ ದೂರು
ಅನ್ನ ರಬ್ಬರ್ನಂತೆ ಆಗಿರುವ ಹಿನ್ನೆಲೆ ಜಗಳೂರು ತಹಶೀಲ್ದಾರ್ ಸಂತೋಷ್ಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಸ್ಥಳಕ್ಕೆ ತೆರಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗೆ ಸೂಚನೆ ಕೊಟ್ಟಿದ್ದಾರೆ. ಜಗಳೂರು ತಹಶೀಲ್ದಾರ್ ಸಂತೋಷ್ ಸೂಚನೆ ನೀಡಿದ್ದಾರೆ.
ದಾವಣಗೆರೆ: ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಕಳಪೆ ಅಕ್ಕಿ ವಿತರಣೆ ಮಾಡಿರುವ ಆರೋಪ ಕೇಳಿಬಂದಿದೆ. ಬೇಯಿಸಿದರೆ ಅನ್ನ ರಬ್ಬರ್ನಂತೆ ಆಗುವ ಅಕ್ಕಿ ಇದೆ. ಗೌಡ ಗುಂಡನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳಪೆ ಅಕ್ಕಿ ವಿತರಣೆ ಮಾಡಲಾಗಿದೆ. ಬಿಸಿಯೂಟದ ಬದಲು ಅಕ್ಕಿಯನ್ನ ಶಿಕ್ಷಣ ಇಲಾಖೆ ವಿತರಿಸಿತ್ತು. ಆದರೆ, ಮನೆಯಲ್ಲಿ ಅಕ್ಕಿಯನ್ನ ಬೇಯಿಸಿದಾಗ ಅನ್ನ ರಬ್ಬರ್ನಂತಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗ್ರಾಮದಲ್ಲಿ ಘಟನೆ ನಡೆದಿದೆ.
ಅನ್ನ ರಬ್ಬರ್ನಂತೆ ಆಗಿರುವ ಹಿನ್ನೆಲೆ ಜಗಳೂರು ತಹಶೀಲ್ದಾರ್ ಸಂತೋಷ್ಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಸ್ಥಳಕ್ಕೆ ತೆರಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗೆ ಸೂಚನೆ ಕೊಟ್ಟಿದ್ದಾರೆ. ಜಗಳೂರು ತಹಶೀಲ್ದಾರ್ ಸಂತೋಷ್ ಸೂಚನೆ ನೀಡಿದ್ದಾರೆ.
ಮತ್ತೊಂದೆಡೆ ದಾವಣಗೆರೆ ತಾಲೂಕಿನ ಗೋಣಿವಾಡ ಕ್ಯಾಂಪ್ ಶಾಲೆಯಲ್ಲಿ ಶೌಚಾಲಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮಕ್ಕಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಗಿದೆ. 3 ತಿಂಗಳಿಂದ ಮನವಿ ಸಲ್ಲಿಸಿದ್ದರೂ ಸ್ಪಂದಿಸದ ಹಿನ್ನೆಲೆ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯ ಇಲ್ಲದೆ ತೊಂದರೆ ಆಗುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮ ಪಂಚಾಯತಿಗೆ ಶೌಚಾಲಯ ನಿರ್ಮಿಸಲು ಹಣ ಮಂಜೂರು ಆಗಿದೆ. ಆದ್ರೆ ಪಂಚಾಯತಿಯವರು ಶೌಚಾಲಯ ನಿರ್ಮಿಸುತ್ತಿಲ್ಲ ಎಂದು ಶಾಲಾ ಮಕ್ಕಳು ಆರೋಪಿಸಿದ್ದಾರೆ.
ವಿಜಯಪುರ: ಮುಖ್ಯ ಶಿಕ್ಷಕಿ ವಿರುದ್ಧ ಕಿರುಕುಳ ಆರೋಪ
ವಿದ್ಯಾರ್ಥಿಗಳಿಗೆ ಹಾಗೂ ಸಹ ಶಿಕ್ಷಕರಿಗೆ ಶಾಲಾ ಮುಖ್ಯ ಶಿಕ್ಷಕಿ ಕಿರುಕುಳ ಆರೋಪದಲ್ಲಿ ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಗಿದೆ. ಮುಖ್ಯ ಶಿಕ್ಷಕಿ ಪದ್ಮಾವತಿಯನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ಕಲಕೇರಿ- ಸಿಂದಗಿ ರಾಜ್ಯ ಹೆದ್ದಾರಿ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲಾಗಿದೆ.
ಇದನ್ನೂ ಓದಿ: ದಾವಣಗೆರೆ: ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ರಾತ್ರಿ ಊಟ ಸೇವಿಸಿದ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ!
ಇದನ್ನೂ ಓದಿ: ಮತಕ್ಕಾಗಿ ಜನರ ದಾರಿ ತಪ್ಪಿಸಬೇಡಿ: ಸಿದ್ದರಾಮಯ್ಯಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿರುಗೇಟು