ಮೋದಿ ತಮ್ಮ 10 ವರ್ಷದ ಸಾಧನೆ ಹೇಳಿದ್ರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುವೆ: ಸಿದ್ದರಾಮಯ್ಯ
ನನ್ನ ಕಂಡ ತಕ್ಷಣವೇ ಮೋದಿ ಮೋದಿ ಎಂದು ಕೂಗುತ್ತಾರೆ ಯುವಕರು, ಅವರಿಗೆ ಕೆಲಸ ಕೊಟ್ಟಿಲ್ಲ ಎಂಬುದು ಅವರಿಗೆ ಗೊತ್ತಾಗಿದೆ. ಯಡಿಯೂರಪ್ಪ ನಾನು ಕೊಟ್ಟ ಎಳು ಕೆಜಿ ಅಕ್ಕಿನ ಐದು ಕೆಜಿಗೆ ಇಳಿಸಿ, ಬಡವರ ಹೊಟ್ಟೆ ಮೇಲೆ ಹೊಡೆದರು. ಇದು ಅದಾನಿ ಅಂಬಾನಿ ದೇಶ ಅಲ್ಲ, 140 ಕೋಟಿ ಜನ ಬದುಕುತ್ತಿರುವ ದೇಶ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ದಾವಣಗೆರೆ, ಮೇ.05: ‘ನರೇಂದ್ರ ಮೋದಿ ಹತ್ತು ವರ್ಷದಲ್ಲಿ ಹತ್ತು ಸಾಧನೆ ಹೇಳಿದ್ರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಪ್ರಧಾನಿಗೆ ಸವಾಲ್ ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ‘ನಾನು ಪ್ರಮಾಣ ವಚನ ಸ್ವೀಕರಿದ ತಕ್ಷಣ ಐದು ಗ್ಯಾರಂಟಿ ಜಾರಿಗೆ ಆದೇಶ ಮಾಡಿದ್ದೇವು. ನಾಲ್ಕು ಸಲ ಗೆದ್ದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ಸಾಧನೆ ಎನು?, ಇವರನ್ನ ಸಚಿವ ಸ್ಥಾನದಲ್ಲಿ ಇರಲು ಅಸಮರ್ಥ ಎಂದು ತೆಗೆದು ಹಾಕಲಾಯಿತು. ಇದು ಬಿಜೆಪಿಯ ಸುಳ್ಳು, ಕಾಂಗ್ರೆಸ್ನ ಸತ್ಯದ ನಡುವಿನ ಚುನಾವಣೆ. ಈ ಸಲ ಸೋಲುವುದು ಖಚಿತವಾಗಿ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಟಿಕೆಟ್ ಕೊಡಿಸಿದ್ದಾರೆ ಎಂದರು.
ಬಿಜೆಪಿ ಎಂಪಿಗಳು ಕೊಲೆ ಬಸವ ಇದ್ದಂತೆ. ರಾಜ್ಯದಲ್ಲಿ ಭೀಕರ ಬರವಿದ್ದರೂ ಬಿಜೆಪಿ ಸಂಸದರು ಪರಿಹಾರ ಕೇಳಲಿಲ್ಲ. ರಾಜ್ಯಕ್ಕೆ 14,690 ಕೋಟಿ ರೂಪಾಯಿ ಕೇಂದ್ರ ಅನುದಾನ ನೀಡಲಿಲ್ಲ, ಭದ್ರಾ ಮೇಲ್ಡಂಡ 5,300 ಕೋಟಿ ಹಣ ನೀಡಲೇ ಇಲ್ಲ. ಬರಗಾಲ ಹಿನ್ನೆಲೆ 18 ಸಾವಿರ ಕೋಟಿ ಪರಿಹಾರ ಕೊಟ್ಟಿಲ್ಲ. ಎಂಪಿಗಳು ಆಯ್ಕೆ ಆಗಿ ಹೋಗುವುದು ಟಿಎ, ಡಿಎ ತೆಗೆದುಕೊಳ್ಳಲಿಕ್ಕಾ?, ಕೈ ಮುಗಿದು ಕೇಳಿದ ಬಿಜೆಪಿಗೆ ಮತ ನೀಡಬೇಡಿ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:‘ಮುಖ್ಯಮಂತ್ರಿಯಾಗಲು ಶಿವಕುಮಾರ್ ಏನಾದರೂ ಮಾಡಬಲ್ಲರು, ಸಿದ್ದರಾಮಯ್ಯ ಎಚ್ಚರದಿಂದಿರಬೇಕು: ರಾಜುಗೌಡ, ಮಾಜಿ ಶಾಸಕ
‘ನನ್ನ ಕಂಡ ತಕ್ಷಣವೇ ಮೋದಿ ಮೋದಿ ಎಂದು ಕೂಗುತ್ತಾರೆ ಯುವಕರು, ಅವರಿಗೆ ಕೆಲಸ ಕೊಟ್ಟಿಲ್ಲ ಎಂಬುದು ಅವರಿಗೆ ಗೊತ್ತಾಗಿದೆ. ಯಡಿಯೂರಪ್ಪ ನಾನು ಕೊಟ್ಟ ಎಳು ಕೆಜಿ ಅಕ್ಕಿನ ಐದು ಕೆಜಿಗೆ ಇಳಿಸಿ, ಬಡವರ ಹೊಟ್ಟೆ ಮೇಲೆ ಹೊಡೆದರು. ಇದು ಅದಾನಿ ಅಂಬಾನಿ ದೇಶ ಅಲ್ಲ, 140 ಕೋಟಿ ಜನ ಬದುಕುತ್ತಿರುವ ದೇಶ. ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ ಅಕ್ಕಿಕೊಡಲಿಲ್ಲ. 1.18 ಕೋಟಿ ಕುಟುಂಬಗಳಿಗೆ ಅಕ್ಕಿ ಕೊಡಲಾಗುತ್ತಿದೆ. 1.60 ಕೋಟಿ ಕುಟುಂಬಗಳು ವಿದ್ಯುತ್ ಬಿಲ್ ಕಟ್ಟುತ್ತಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:45 pm, Sun, 5 May 24