ನನ್ನ ಮೇಲಿನ ದ್ವೇಷದಿಂದ ಪುತ್ರ ಚಂದ್ರಶೇಖರ್‌ನನ್ನು ಬಲಿ ಪಡೆದಿದ್ದಾರೆ: ಶಾಸಕ ಎಂ.ಪಿ.ರೇಣುಕಾಚಾರ್ಯ ಗಂಭೀರ ಆರೋಪ
ನನ್ನ ಮೇಲಿನ ದ್ವೇಷದಿಂದ ಪುತ್ರ ಚಂದ್ರಶೇಖರ್‌ನನ್ನು ಬಲಿ ಪಡೆದಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆ: ನನ್ನ ಮೇಲಿನ ದ್ವೇಷದಿಂದ ಪುತ್ರ ಚಂದ್ರಶೇಖರ್‌ನನ್ನು ಬಲಿ ಪಡೆದಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ (MP Renukacharya) ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮನೆ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ನನ್ನ ಮೇಲಿನ ದ್ವೇಷದಿಂದ ಮಗನ ಬಲಿ ಪಡೆದಿದ್ದಾರೆ. ಅವರಿಗೆ ದ್ವೇಷ ಇದ್ದಿದ್ದರೆ ನನ್ನ ಬಲಿ ಪಡೆಯಬೇಕಿತ್ತು. ಈಗ ನನ್ನ ಮಗನ ಕೊಲೆಮಾಡಿದ್ದಾರೆ, ನನಗೆ ತುಂಬಾ ನೋವಿದೆ. ಚಂದ್ರಶೇಖರ್ ಹೋಗುವಾಗ ಕೇಸರಿ ಶಾಲ್ ಹಾಕಿಕೊಂಡು ಹೋಗಿದ್ದ. ನಾನು ಆರಂಭದಿಂದಲೂ ಹೇಳುತ್ತಿದ್ದೆ ಇದೊಂದು ಕಿಡ್ನಾಪ ಪ್ರಕರಣ ಅಂತ. ಇದೊಂದು ವ್ಯವಸ್ಥಿತ ಕೊಲೆಯಾಗಿದೆ. ಅವನನ್ನ ಪೋನ್ ಮಾಡಿ ಕರೆಸಿಕೊಂಡಿದ್ದಾರೆ. ಗೌರಿಗದ್ದೆ ಹೋಗುತ್ತೇನೆಂದು ಅವರ ಕುಟುಂಬಸ್ಥರಿಗೆ ಹೇಳಿ ಹೋಗಿದ್ದ. ಆತ ತುಂಬಾ ಸಭ್ಯ. ಆತನಿಗೆ ಯಾವುದೇ ಶತ್ರುಗಳಿಲ್ಲ. ಯಾರಿಗೂ ಕೂಡ ದೊಡ್ಡ ದನಿಯಲ್ಲಿ ಮಾತನಾಡದ ಮೃದು ಸ್ವಭಾವ. ಮನೆಯ ದೀಪ ಆರಿದೆ. ಮುಖ್ಯಮಂತ್ರಿ, ಗೃಹ ಸಚಿವರು ಈ ಘಟನೆಯ ಬಗ್ಗೆ ತನಿಖೆ ನಡೆಸಲಿ ಎಂದು ರೇಣುಕಾಚಾರ್ಯ ಹೇಳಿದರು.
ಇದೊಂದು ಕೊಲೆ: ಚಂದ್ರಶೇಖರ್ ದೊಡ್ಡಪ್ಪ ವಿಶ್ವರಾಧ್ಯ
ಈ ಕುರಿತಾಗಿ ಟಿವಿ9 ಜೊತೆ ಚಂದ್ರಶೇಖರ್ ದೊಡ್ಡಪ್ಪ ವಿಶ್ವರಾಧ್ಯ ಮಾತನಾಡಿದ್ದು, ಇದೊಂದು ಕೊಲೆ, ನಮಗೆ ಆರಂಭದಿಂದಲೂ ಅನುಮಾನವಿತ್ತು ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ರೇಣುಕಾಚಾರ್ಯರ ಮೇಲಿನ ರಾಜಕೀಯ ದ್ವೇಷದಿಂದ ಕೊಲೆ ಮಾಡಲಾಗಿದೆ. ಚಂದ್ರಶೇಖರ್ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ ಎಂದು ಒತ್ತಾಯಿಸಿದರು. ನಾಪತ್ತೆಯಾದ ಬಳಿಕ ಚಂದ್ರಶೇಖರ್ ಶವ ಪತ್ತೆಯಾಗಿದೆ. ಅದರಲ್ಲೂ ಚಂದ್ರಶೇಖರ್ ಶವ ಹಿಂದಿನ ಸೀಟ್ಲ್ಲಿ ಪತ್ತೆಯಾಗಿದೆ. ಹೀಗಾಗಿ ಇದೊಂದು ಕೊಲೆ. ಮರಣೋತ್ತರ ಪರೀಕ್ಷಯಿಂದ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದರು.
ಓರ್ವ ವಶಕ್ಕೆ:
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಪರಿಶೀಲನೆ ಮಾಡಿದ ಪೊಲೀಸ್ ಕಿರಣ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾಣೆ ಆರಂಭಿಸಿದ್ದಾರೆ. ಅಕ್ಟೋಬರ್ 30 ಚಂದ್ರಶೇಖರ್ ಚಿಕ್ಕಮಗಳೂರಿನ ಗೌರಿ ಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಹೋಗಿದ್ದಾನೆ. ಗೌರಿ ಗದ್ದೆಯಲ್ಲಿ ಪೂಜೆಗೆ ಹೋಗಿದ್ದ ಚಂದ್ರಶೇಖರ್, ಪೂಜೆ ಮುಗಿದ ನಂತರ ಭಕ್ತರಿಗೆ ಊಟ ಬಡಿಸಿದ್ದಾರೆ. ಈ ವೇಳೆ ಕಿರಣ್ ಎಂಬ ಯುವಕ ಚಂದ್ರಶೇಖರ್ ಜೊತೆಗಿರುವುದು ತಿಳಿದುಬಂದಿದೆ. ಕಿರಣ್ ಚಂದ್ರಶೇಖರ್ ಜೊತೆಗೆ ಇದ್ದಿದ್ದಲ್ಲದೆ ಒಟ್ಟಿಗೆ ವಾಪಸ್ ಆಗಿದ್ದಾನೆ. ಆದರೆ ಕಿರಣ್ ಶಿವಮೊಗ್ಗದಲ್ಲೇ ಇಳಿದಿದ್ದಾನೆ. ನ್ಯಾಮತಿಯ ಬಳಿ ಸಿಕ್ಕಿರುವ ಸಿಸಿಟಿವಿಯಲ್ಲಿ ಚಂದ್ರಶೇಖರ್ ಮಾತ್ರ ಇದ್ದ. ಹೆಚ್ಚಿನ ತನಿಖೆಗಾಗಿ ಕಿರಣ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:16 pm, Thu, 3 November 22