ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಕೊಚ್ಚಿ ಹೋದ ಯುವಕ, 24 ಗಂಟೆ ಕಳೆದರೂ ಪತ್ತೆಯಾಗದ ಶವ

ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳವನ್ನು ದಾಟಲು ಮುಂದಾಗಿದ್ದ ಯುವಕ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಕಳೆದ 24 ಗಂಟೆಗಳಿಂದ ಹಳ್ಳಕ್ಕೆ ಬಲೆ ಹಾಕಿ ಶವಕ್ಕೆ ಸಂಬಂಧಿಕರು ಹುಡುಕಾಟ ನಡೆಸುತ್ತಿದ್ದಾರೆ.

ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಕೊಚ್ಚಿ ಹೋದ ಯುವಕ, 24 ಗಂಟೆ ಕಳೆದರೂ ಪತ್ತೆಯಾಗದ ಶವ
ಶಿವರಾಜ್ ನೀರು ಪಾಲದ ಯುವಕ
Follow us
TV9 Web
| Updated By: ಆಯೇಷಾ ಬಾನು

Updated on: Oct 29, 2021 | 7:35 AM

ದಾವಣಗೆರೆ: ಜಿಲ್ಲೆಯಲ್ಲಾದ ಭಾರಿ ಮಳೆಗೆ ಚಿರಡೋಣಿ ಹಾಗೂ ದೊಡ್ಡಘಟ್ಟ ಗ್ರಾಮಗಳ ನಡುವಿನ ಹಳ್ಳ ತುಂಬಿ ಹರಿಯುತ್ತಿದೆ. ಈ ಹಳ್ಳದಾಟಲು ಹೋಗಿ ಯುವಕ ಕೊಚ್ಚಿ ಹೋದ ಘಟನೆ ದಾವಣಗೆರೆಯಲ್ಲಿ ಸಂಭವಿಸಿದೆ. ಶಿವರಾಜ್ (23) ನೀರು ಪಾಲದ ಯುವಕ. ಘಟನೆ ಸಂಭವಿಸಿ 24 ಗಂಟೆ ಕಳೆದರೂ ಯುವಕನ ಶವ ಪತ್ತೆಯಾಗಿಲ್ಲ.

ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳವನ್ನು ದಾಟಲು ಮುಂದಾಗಿದ್ದ ಯುವಕ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಕಳೆದ 24 ಗಂಟೆಗಳಿಂದ ಹಳ್ಳಕ್ಕೆ ಬಲೆ ಹಾಕಿ ಶವಕ್ಕೆ ಸಂಬಂಧಿಕರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಆಗ್ನಿ ಶಾಮಕ ದಳ ಹಾಗೂ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದು ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಠ ಕೇಳಲು ಹೋದ ಮಕ್ಕಳಿಗೆ ಜೀವಭಯ ವಾರದ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆಯಾಗಿದೆ. ಜಿಲ್ಲೆಯ ಇತಿಹಾಸದಲ್ಲೇ ಈ ಬಾರಿ ಕಂಡು ಕೇಳರಿಯದ ಮಳೆ ಸುರಿದಿದೆ. ಇದ್ರಿಂದ ಜಿಲ್ಲೆಯ ಬಹುತೇಕ ಶಾಲಾ ಕಾಲೇಜುಗಳ ಕಟ್ಟಡಗಳಿಗೆ ಹಾನಿಯಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಾದ್ಯಂತ 300ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕಟ್ಟಡಗಳಿದ್ದು, ಈ ಪೈಕಿ 562 ಕೊಠಡಿಗಳು ಮಳೆಯಿಂದ ಹಾನಿಯಾಗಿ ಬೀಳುವ ಹಂತದಲ್ಲಿವೆ. ಇಂಥಾ ಕಟ್ಟಡಗಳಲ್ಲೇ ಮಕ್ಕಳು ಪಾಠ ಕೇಳುವಂತಾಗಿದೆ.

ಇನ್ನು, ಶಿಕ್ಷಣ ಇಲಾಖೆ ಮಾಹಿತಿ ಆಧಾರದ ಮೇಲೆ ಟಿವಿ9 ಟೀಂ, ಕುಪ್ಪಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡ್ತು. ಅಲ್ಲಿನ ವಾಸ್ತವ ಚಿತ್ರಣ ವೀಕ್ಷಿಸಿದಾಗ, ಕೆಲವು ಕೊಠಡಿಗಳಿಂದ ನೀರು ಜಿನುಗುತ್ತಿತ್ತು. ಮತ್ತೆ ಕೆಲವು ಗೋಡೆಗಳು ಬಿರುಕು ಬಿಟ್ಟಿವೆ. ಇನ್ನೂ ಕೆಲವು ಶಾಲೆಗಳ ಮೇಲ್ಚಾವಣಿ ಕುಸಿದು ಬೀಳ್ತಿದೆ. ಹೀಗಾಗಿ, 562 ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ನಿಲ್ಲಿಸಿ ಪರ್ಯಾಯ ಕೊಠಡಿಗಳ ವ್ಯವಸ್ಥೆ ಮಾಡ್ಲಾಗಿದೆ. ಸದ್ಯಕ್ಕೆ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಶಾಲೆಗೆ ಬರ್ತಿದ್ದಾರೆ. ಸ್ಟೂಡೆಂಟ್ಸ್ ಸಂಖ್ಯೆಯಲ್ಲಿ ಹೆಚ್ಚಳವಾದ್ರೆ, ಪಾಠಕ್ಕೆ ತೊಂದ್ರೆ ಆಗಲಿದೆ. ಹೀಗಾಗಿ, ಶಾಲೆಗಳ ದುರಸ್ಥಿತಿಗೆ 7 ಕೋಟಿ ಅನುದಾನ ನೀಡುವಂತೆ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿದೆ.

ಇದನ್ನೂ ಓದಿ: ನರಕ ಚತುರ್ದಶಿ ದಿನ ಹನುಮ ಜಯಂತಿ: ಭಕ್ತರು ವಿಶೇಷವಾಗಿ ವಾಯುಪುತ್ರನನ್ನು ಆರಾಧಿಸಿದರೆ ಸಂಕಷ್ಟಗಳೆಲ್ಲ ದೂರ

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ