Guinness world record: ಗಿನ್ನಿಸ್ ದಾಖಲೆಗೆ ಸಜ್ಜಾಗುತ್ತಿದ್ದಾನೆ ದಾವಣಗೆರೆಯ ಮೂರು ವರ್ಷದ ಬಾಲಕ

ಅರಸು ಬುಕ್ ಇಂಡಿಯಾ ಪ್ರಚಂಡ ಬಾಲಕ ವಿಭಾಗದಲ್ಲಿ ಗೆದ್ದಿದ್ದಾನೆ. ಹೀಗೆ ಅತಿ ಬುದ್ಧಿವಂತ ಮಕ್ಕಳ ವಿಭಾಗದಲ್ಲಿ ಗೆದ್ದ ಹಿನ್ನೆಲೆಯಲ್ಲಿ ಈಗ ಗಿನ್ನಿಸ್ ದಾಖಲೆಗೆ ಪ್ರವೇಶ ಪಡೆದಿದ್ದಾನೆ. ಇದಕ್ಕಾಗಿ ತರಬೇತಿ ಶುರುವಾಗಿದೆ.

Guinness world record: ಗಿನ್ನಿಸ್ ದಾಖಲೆಗೆ ಸಜ್ಜಾಗುತ್ತಿದ್ದಾನೆ ದಾವಣಗೆರೆಯ ಮೂರು ವರ್ಷದ ಬಾಲಕ
ಅರಸು
Follow us
TV9 Web
| Updated By: preethi shettigar

Updated on: Jul 06, 2021 | 11:39 AM

ದಾವಣಗೆರೆ: ಸಾಮಾನ್ಯವಾಗಿ ಬಾಲ್ಯದಲ್ಲಿ ಮಕ್ಕಳು ಮಾತನಾಡುವುದೇ ಮನೆಯವರಿಗೆ ಮಕ್ಕಳು ಮಾಡಿದ ದೊಡ್ಡ ಸಾಧನೆ. ಆದರೆ ದಾವಣಗೆರೆ ಜಿಲ್ಲೆಯ ಶಿವಕುಮಾರ ಬಡಾವಣೆಯ 3 ವರ್ಷದ ಬಾಲಕ ಗಿನ್ನಿಸ್ ದಾಖಲೆಗೆ ಸಜ್ಜಾಗುತ್ತಿದ್ದಾನೆ. ನೂರಾರು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರ ಹೇಳುವುದು, ವಚನ ಹೇಳುವುದು ಹೀಗೆ ಸಣ್ಣ ವಯಸ್ಸಿನಲ್ಲೇ ಸಾಕಷ್ಟು ವಿಷಯಗಳಲ್ಲಿ ಜ್ಞಾನ ಸಂಪಾದನೆ ಮಾಡಿದ್ದಾನೆ. ಶಿವಕುಮಾರ ಬಡಾವಣೆಯ ನಿವಾಸಿ ಪ್ರದೀಪ್​ ಹಾಗೂ ಮಮತಾ ದಂಪತಿಗಳ ಹಿರಿಯ ಪುತ್ರ ಅರಸು ಸಾಧನೆಯ ಮೆಟ್ಟಿಲೇರಲು ಸಿದ್ಧನಾಗಿದ್ದಾನೆ.

ಅರಳು ಹುರಿದಂತೆ ಮಾತನಾಡುವ ಅರಸು, ತಂದೆ ಪ್ರದೀಪ್ ಸಿವಿಲ್ ಇಂಜಿನೀಯರ್ ಹಾಗೂ ತಾಯಿ ಮಮತಾ ಗೃಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಅರಸುಗೆ ಸದ್ಯ ಮೂರು ವರ್ಷ ಎರಡು ತಿಂಗಳ ವಯಸ್ಸು. ಇತ ಎರಡು ವರ್ಷದವನಿದ್ದಾಗಲೇ ಸಾಧನೆ ಮಾಡಲು ಶುರು ಮಾಡಿದ. ಅಂದರೆ ಯಾವುದೇ ವಿಚಾರ ಬಾಲಕನ ಮುಂದೆ ನಡೆದರೆ ಅದನ್ನು ಮರೆಯುತ್ತಲೇ ಇರಲಿಲ್ಲ. ಬಹುದಿನಗಳ ನಂತರ ಭೇಟಿಯಾದ ವ್ಯಕ್ತಿ ಹೆಸರು, ಸ್ಥಳ ಹೇಳುತ್ತಿದ್ದ. ಇದನ್ನು ಗಮನಿಸಿದ ತಂದೆ ಪ್ರದೀಪ್ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಸಾಮಾನ್ಯ ವಿಷಯಗಳನ್ನು ಹೇಳಿಕೊಡಲು ಮುಂದಾಗಿದ್ದಾರೆ.

ತಾಯಿ ಕೂಡ ಈ ಬಗ್ಗೆ ತರಬೇತಿ ನೀಡಿದ್ದು, ಇದರಿಂದ ಅರಸು ಬುಕ್ ಇಂಡಿಯಾ ಪ್ರಚಂಡ ಬಾಲಕ ವಿಭಾಗದಲ್ಲಿ ಗೆದ್ದಿದ್ದಾನೆ. ಹೀಗೆ ಅತಿ ಬುದ್ಧಿವಂತ ಮಕ್ಕಳ ವಿಭಾಗದಲ್ಲಿ ಗೆದ್ದ ಹಿನ್ನೆಲೆಯಲ್ಲಿ ಈಗ ಗಿನ್ನಿಸ್ ದಾಖಲೆಗೆ ಪ್ರವೇಶ ಪಡೆದಿದ್ದಾನೆ. ಇದಕ್ಕಾಗಿ ತರಬೇತಿ ಶುರುವಾಗಿದೆ. ಈ ಸ್ಪರ್ಧೆ ಇರುವುದು ಇನ್ನೊಂದು ವರ್ಷ ಬಿಟ್ಟು, ಹೀಗಾಗಿ ಗಿನ್ನಿಸ್ ದಾಖಲೆಗೆ ಅರಸುವನ್ನು ಸಜ್ಜುಗೊಳಿಸುವಲ್ಲಿ, ಬಾಲಕನ ತಂದೆ-ತಾಯಿ ಪ್ರಯತ್ನಿಸುತ್ತಿದ್ದಾರೆ.

ಭಾರತದ ನಕ್ಷೆ ತೊರಿಸಿದರೇ ಯಾವುದೇ ರಾಜ್ಯದ ಹೆಸರು ಗುರುತಿಸುತ್ತಾನೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು, ಅವರ ಪೋಟೋ ಗುರುತಿಸುತ್ತಾನೆ. ಪ್ರಪಂಚದ ವಿವಿಧ ವಿಚಾರಗಳ ಬಗ್ಗೆ ಸದ್ಯ ನೂರಾರು ಪ್ರಶ್ನೆಗಳಿಗೆ ಥಟ್​ ಅಂತಾ ಉತ್ತರ ಹೇಳುತ್ತಾನೆ. ಇದನ್ನೆ ನೋಡಿ ಇತನಿಗೆ ಗಿನ್ನಿಸ್ ದಾಖಲೆಯಲ್ಲಿ ಪಾಲ್ಗೊಳ್ಳಲು, ದಾಖಲೆ ಸಂಸ್ಥೆಯವರು ಅರ್ಜಿ ಕಳುಹಿಸಿಕೊಟ್ಟಿದ್ದಾರೆ ಎಂದು ಅರಸು ತಾಯಿ ಮಮತಾ ಸಂತೋಷ ವ್ಯಕ್ತಪಡಿಸಿದ್ದಾರೆ.

ಗಿನ್ನಿಸ್ ದಾಖಲೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಭಾರತದ ಕೆಲವೇ ಬಾಲಕರಲ್ಲಿ ಇತನೂ ಒಬ್ಬ. ಈಗಾಗಲೇ ಇಂತಹ ಸಾಧನೆ ಮಾಡಿದ ಬಾಲಕರೆಲ್ಲ 7 ರಿಂದ 10 ವರ್ಷದ ವಯಸ್ಸಿನವರು. ಆದರೆ ಅರಸು ಮಾತ್ರ ಈಗ ಮೂರು ವರ್ಷ ಎರಡು ತಿಂಗಳ ವಯಸ್ಸಿನವನು ಎನ್ನುವುದು ವಿಶೇಷವಾದ ಕುತೂಹಲ ಹುಟ್ಟಿಸಿದೆ. . ಒಟ್ಟಾರೆ ಅರಸು ಗಿನ್ನಿಸ್​ ದಾಖಲೆಯ ಸ್ಪರ್ಧೆಯಲ್ಲಿ ಸಾಧನೆ ಮಾಡಲಿ ಎನ್ನುವುದು ನಮ್ಮ ಆಶಯ.

ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಹಾವೇರಿಯ ಬಾಲಕಿ ಹೆಸರು ಸೇರ್ಪಡೆ

ಒಂದು ಕೆಜಿ ನವಣೆಯಲ್ಲಿ ಎಷ್ಟು ಕಾಳುಗಳಿವೆ? ಶಿವಮೊಗ್ಗದ ಯುವಕನೋರ್ವ ಎಣಿಸಿಯೇಬಿಟ್ಟ!

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ