ಮೃತ PSI ಪರಶುರಾಮ್ ಹೆಂಡ್ತಿಗೆ ಹೆರಿಗೆ: ಪರಶುರಾಮನೇ ಮತ್ತೆ ಹುಟ್ಟಿ ಬಂದನೆಂದು ಫ್ಯಾಮಿಲಿ ಖುಷ್
ರಾಯಚೂರಿನ ಶ್ರೀ ದೇವಿಕಾ ಮೆಟರ್ನಿಟಿ ಆಸ್ಪತ್ರೆಯಲ್ಲಿ ಇಂದು ಮೃತ ಪಿಎಸ್ಐ ಪರಶುರಾಮ್ ಪತ್ನಿ ಶ್ವೇತಾಗೆ ಅವರಿಗೆ ಹೆರಿಗೆ ಆಗಿದೆ. ಆ ಮೂಲಕ ಅವರು ಗಂಡು ಮಗವಿಗೆ ಜನ್ಮ ನೀಡಿದ್ದಾರೆ. ಪರಶುರಾಮ ನಿಧನದಿಂದ ಇಡೀ ಕುಟುಂಬ ನೋವಿನಲ್ಲಿತ್ತು. ಇದೀಗ ಪರಶುರಾಮನೇ ಮತ್ತೆ ಹುಟ್ಟಿ ಬಂದಿದ್ದಾನೆಂದು ಕುಟುಂಬ ಖುಷಿಪಟ್ಟಿದೆ. ಸದ್ಯ ಆಸ್ಪತ್ರೆಯಲ್ಲಿ ತಾಯಿ-ಮಗು ಇಬ್ಬರೂ ಸಹ ಆರೋಗ್ಯವಾಗಿದ್ದಾರೆ.
ರಾಯಚೂರು, ಸೆಪ್ಟೆಂಬರ್ 02: ಯಾದಗಿರಿಯಲ್ಲಿ ಅನುಮಾನ್ಪದವಾಗಿ ಸಾವನ್ನಪ್ಪಿದ ಪಿಎಸ್ಐ ಪರಶುರಾಮ್ (PSI Parashuram) ಅವರ ಇಡೀ ಕುಟುಂಬಕ್ಕೆ ಇದೀಗ ಸಂತಸದ ದಿನ. ಏಕೆಂದರೆ ಮೃತ ಪರಶುರಾಮ್ ಪತ್ನಿ ಶ್ವೇತಾ ಅವರಿಗೆ ಹೆರಿಗೆ ಆಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಗಸ್ಟ್ 2ರಂದು ಪರಶುರಾಮ್ ಮೃತಪಟ್ಟಿದ್ದರೆ, ಸೆಪ್ಟೆಂಬರ್ 2ರಂದು ಅಂದರೆ ಅದೇ ದಿನಾಂಕದಂದು ಪತ್ನಿ ಶ್ವೇತಾ ಅವರು ಗಂಡು ಮಗುವಿಗೆ ಜನ್ಮ ನೀಡಿರುವುದು ಇನ್ನೊಂದು ವಿಶೇಷ. ಗಂಡು ಮಗುವಿನ ಆಗಮನದೊಂದಿಗೆ ಮತ್ತೆ ಪರಶುರಾಮನೇ ಹುಟ್ಟಿಬಂದಿದ್ದಾನೆಂದು ಇಡೀ ಕುಟುಂಬ ಖುಷಿಪಟ್ಟಿದೆ.
ಶ್ರೀ ದೇವಿಕಾ ಮೆಟರ್ನಿಟಿ ಆಸ್ಪತ್ರೆಯಲ್ಲಿ ಇಂದು ಶ್ವೇತಾಗೆ ಹೆರಿಗೆ ಆಗಿದೆ. ಪಿಎಸ್ಐ ಪರಶುರಾಮ್ ಮೃತಪಟ್ಟು ಇಂದಿಗೆ ಒಂದು ತಿಂಗಳಾಗಿದೆ. ಪರಶುರಾಮ ನಿಧನದಿಂದ ಇಡೀ ಕುಟುಂಬ ನೋವಿನಲ್ಲಿತ್ತು. ಇದೀಗ ಪರಶುರಾಮನೇ ಮತ್ತೆ ಹುಟ್ಟಿ ಬಂದಿದ್ದಾನೆಂದು ಕುಟುಂಬ ಖುಷಿಯಾಗಿದೆ. ಸದ್ಯ ಆಸ್ಪತ್ರೆಯಲ್ಲಿ ತಾಯಿ-ಮಗು ಇಬ್ಬರೂ ಸಹ ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ: ಪಿಎಸ್ಐ ಪರಶುರಾಮ ನಿಗೂಢ ಸಾವು ಕೇಸ್: ಯಾದಗಿರಿಗೆ ಎಂಟ್ರಿಕೊಟ್ಟ ಸಿಐಡಿ ತಂಡ, ಇಂಚಿಂಚು ಮಾಹಿತಿ ಕಲೆ
ಮೃತ ಪರಶುರಾಮ್ ಸಾವು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಸಾವಿಗೂ ಮುನ್ನ 2 ದಿನಗಳ ಹಿಂದೆ ವರ್ಗಾವಣೆ ಆಗಿದ್ದ ಪರಶುರಾಮ ತಮ್ಮ ನಿವಾಸದಲ್ಲಿ ಮಲಗಿದ್ದಲ್ಲಿಯೇ ಶವವಾಗಿ ಪತ್ತೆಯಾಗಿದ್ದರು. ಪ್ರಕರಣ ಬೆಳಕಿಗೆ ಬರ್ತಿದ್ದಂತೆಯೇ ಇದರಲ್ಲಿ ಸ್ಥಳೀಯ ಶಾಸಕ ಚೆನ್ನಾರೆಡ್ಡಿಯ ಹೆಸರು ಕೇಳಿಬಂದಿತ್ತು. ಯಾದಗಿರಿ ಕಾಂಗ್ರೆಸ್ ಶಾಸಕರೇ ಸಾವಿಗೆ ಕಾರಣ ಅಂತಾ ಕುಟುಂಬಸ್ಥರು ಗಂಭೀರ ಆರೋಪವನ್ನು ಮಾಡಿದ್ದರು.
ಇದನ್ನೂ ಓದಿ: ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕಚೇರಿಯಲ್ಲಿ ಸಿಐಡಿ ತಲಾಶ್, ಪಿಎಸ್ಐ ಪರಶುರಾಮ್ ಭೇಟಿ ಬಗ್ಗೆ ಮಾಹಿತಿ ಸಂಗ್ರಹ
ಘಟನೆ ನಡೆದು 17 ಗಂಟೆಯ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಯಾದಗಿರಿ ನಗರದಲ್ಲಿ ಪತ್ನಿ ಶ್ವೇತ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಪುತ್ರ ಪಂಪನಗೌಡ ವಿರುದ್ಧ ದೂರು ದಾಖಲಾಗಿತ್ತು. ಇದರ ಜೊತೆಗೆ ಜಾತಿ ನಿಂದನೆಯ ಕೇಸ್ ಕೂಡ ದಾಖಲಾಗಿತ್ತು. ಯಾದಗಿರಿಯ ಎಸ್ಪಿ ಸಂಗೀತಾಗೆ ಪರಶುರಾಮ ಪತ್ನಿ ಶ್ವೇತಾ ದೂರು ನೀಡಿದ್ದರು. ಪೋಸ್ಟಿಂಗ್ಗಾಗಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಬಳಿಕ ಪರಶುರಾಮ ಸಾವಿನ ತನಿಖೆಯ ಹೊಣೆ ಸಿಐಡಿ ಹೆಗಲಿಗೆ ಹಾಕಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.