ಪಿಎಸ್ಐ ಪರಶುರಾಮ ನಿಗೂಢ ಸಾವು ಕೇಸ್: ಯಾದಗಿರಿಗೆ ಎಂಟ್ರಿಕೊಟ್ಟ ಸಿಐಡಿ ತಂಡ, ಇಂಚಿಂಚು ಮಾಹಿತಿ ಕಲೆ

ಯಾದಗಿರಿ ಪಿಎಸ್ಐ ಪರಶುರಾಮ ನಿಗೂಢ ಸಾವು ನಡೆದು ಇಂದಿಗೆ ಸುಮಾರು ದಿನಗಳು ಕಳೆದಿವೆ. ಪ್ರಕರಣ ತನಿಖೆಯ ಜವಾಬ್ದಾರಿಯನ್ನ ಹೊತ್ತ ಸಿಐಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕು ಮಾಡಿದ್ದಾರೆ. ಹೀಗಾಗಿ ಯಾದಗಿರಿಗೆ ಭೇಟಿ ನೀಡಿರುವ ಎಡಿಜಿಪಿ ನೇತೃತ್ವದ ಸಿಐಡಿ ತಂಡ ಪರಶುರಾಮ ಘಟನೆ ಬಗ್ಗೆ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಪಿಎಸ್ಐ ಪರಶುರಾಮ ನಿಗೂಢ ಸಾವು ಕೇಸ್: ಯಾದಗಿರಿಗೆ ಎಂಟ್ರಿಕೊಟ್ಟ ಸಿಐಡಿ ತಂಡ, ಇಂಚಿಂಚು ಮಾಹಿತಿ ಕಲೆ
ಪಿಎಸ್ಐ ಪರಶುರಾಮ ನಿಗೂಢ ಸಾವು ಕೇಸ್: ಯಾದಗಿರಿಗೆ ಎಂಟ್ರಿಕೊಟ್ಟ ಸಿಐಡಿ ತಂಡ, ಇಂಚಿಂಚು ಮಾಹಿತಿ ಕಲೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 17, 2024 | 6:02 PM

ಯಾದಗಿರಿ, ಆಗಸ್ಟ್​ 17: ಪಿಎಸ್ಐ ಪರಶುರಾಮ (PSI Parashuram) ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಸದ್ಯ ಸಿಐಡಿ (cid) ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ತಂಡ​ ಯಾದಗಿರಿಗೆ ಭೇಟಿ ನೀಡಿದ್ದು, ಪರಶುರಾಮ ಸಾವಿನ ಬಗ್ಗೆ ಇಂಚಿಂಚು ಮಾಹಿತಿ ಪಡೆಯುತ್ತಿದ್ದಾರೆ. ನಗರದ ಎಸ್​ಪಿ ಕಚೇರಿ ಹಿಂಭಾಗದ ಪೊಲೀಸ್ ವಸತಿ ಗೃಹದಲ್ಲಿರುವ ಪರಶುರಾಮ ಮನೆಯನ್ನು ಪರಿಶೀಲನೆ ಮಾಡಿದ್ದಾರೆ.

ಪರಶುರಾಮ ಮಾವ ವೆಂಕಟಸ್ವಾಮಿರಿಂದ ಮಾಹಿತಿ ಪಡೆದ ಸಿಐಡಿ

ಪರಶುರಾಮ ಮನೆಯ ಯಾವ ಕೊಣೆಯಲ್ಲಿ ಮೃತಪಟ್ಟಿದ್ದ ಸೇರಿ ಅಗತ್ಯ ಮಾಹಿತಿಯನ್ನು ಮಾವ ವೆಂಕಟಸ್ವಾಮಿಯಿಂದ ಪಡೆದುಕೊಂಡಿದ್ದಾರೆ. ಮನೆಯ ಎಲ್ಲಾ ಕೊಣೆ ಪರಿಶೀಲನೆ ಮಾಡಿದ್ದಾರೆ. ನಂತರ ಎಸ್​​​ಪಿ ಕಚೇರಿಗೆ ತೆರಳಿ ಪರಿಶೀಲಿಸಿದ್ದಾರೆ. ಸಾಯುವ ಮುನ್ನ ಪರಶುರಾಮ ಯಾರನ್ನು ಭೇಟಿ ಮಾಡಿದ್ದರು ಎಂಬ ಹಲವು ವಿಚಾರಗಳ ಬಗ್ಗೆ ಸಿಐಡಿ ತನಿಖಾಧಿಕಾರಿಗಳು ಹಾಗೂ ಯಾದಗಿರಿ ಪೊಲೀಸ್ ಅಧಿಕಾರಿಗಳಿಂದ ಎಡಿಜಿಪಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕಚೇರಿಯಲ್ಲಿ ಸಿಐಡಿ ತಲಾಶ್, ಪಿಎಸ್​ಐ ಪರಶುರಾಮ್ ಭೇಟಿ ಬಗ್ಗೆ ಮಾಹಿತಿ ಸಂಗ್ರಹ

ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಪರಶುರಾಮ ಮಾವ ವೆಂಕಟಸ್ವಾಮಿ, ಬೆಳಗ್ಗೆ ಸಿಐಡಿ ಅಧಿಕಾರಿಗಳು ಫೋನ್ ಮಾಡಿ ಬರಲು ಹೇಳಿದ್ದರು. ಅವರು ಏನು ಕೇಳಿದ್ದಾರೆ ಎಲ್ಲಾ ಹೇಳಿದ್ದೇನೆ ಎಂದಿದ್ದಾರೆ.

ಇತ್ತೀಚೆಗೆ ಯಾದಗಿರಿ ನಗರದ ಲಾಲ್ ಬಹದ್ದೂರ ಶಾಸ್ತ್ರಿ ವೃತ್ತದ ಬಳಿ ಇರುವ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕಚೇರಿಗೆ ಸಿಐಡಿ ಡಿವೈಎಸ್ಪಿ ಪುನೀತ್ ನೇತೃತ್ವದ ತನಿಖಾ ತಂಡ ಭೇಟಿ ನೀಡಿ ಇಡೀ ಕಚೇರಿಯನ್ನು ಪರಿಶೀಲನೆ ಮಾಡಿದ್ದರು.

ಇದನ್ನೂ ಓದಿ: PSI ಪರಶುರಾಮ ಸಾವು ಕೇಸ್​: ಶಾಸಕ ಚೆನ್ನಾರೆಡ್ಡಿ ವಿರುದ್ಧ ಕ್ರಮಕ್ಕೆ ಪೊಲೀಸರ ಹಿಂದೇಟು!

ಪಿಎಸ್‌ಐ ನಿಗೂಢ ಸಾವಿಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪಂಪಣ್ಣಗೌಡ ಕಾರಣ ಅಂತಾ ಪಿಎಸ್‌ಐ ಪತ್ನಿ ಕೇಸ್‌ ದಾಖಲಿಸಿದ್ದಾರೆ. ಕೇಸ್‌ ದಾಖಲಾಗುತ್ತಿದ್ದಂತೆ ಮೊಬೈಲ್‌ ಸ್ವಿಚ್ಡ್ ಆಫ್‌ ಮಾಡಿಕೊಂಡು ನಾಪತ್ತೆ ಆಗಿರುವ ತಂದೆ ಮಗ ಪತ್ತೆ ಆಗಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.