ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕಚೇರಿಯಲ್ಲಿ ಸಿಐಡಿ ತಲಾಶ್, ಪಿಎಸ್​ಐ ಪರಶುರಾಮ್ ಭೇಟಿ ಬಗ್ಗೆ ಮಾಹಿತಿ ಸಂಗ್ರಹ

ಯಾದಗಿರಿ ನಗರದ ಲಾಲ್ ಬಹದ್ದೂರ ಶಾಸ್ತ್ರಿ ವೃತ್ತದ ಬಳಿ ಇರುವ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕಚೇರಿಗೆ ಸಿಐಡಿ ಡಿವೈಎಸ್ಪಿ ಪುನೀತ್ ನೇತೃತ್ವದ ತನಿಖಾ ತಂಡ ಭೇಟಿ ನೀಡಿ ಇಡೀ ಕಚೇರಿಯನ್ನು ಪರಿಶೀಲನೆ ನಡೆಸಿದ್ದಾರೆ. ಯಾವ ವಿಚಾರಕ್ಕೆ ಭೇಟಿಯಾಗಿರಬಹುದು ಸೇರಿ ಹಲವು ವಿಷಯಗಳ ಬಗ್ಗೆ ತಂಡ ಮಾಹಿತಿ ಪಡೆಯುತ್ತಿದೆ.

ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕಚೇರಿಯಲ್ಲಿ ಸಿಐಡಿ ತಲಾಶ್, ಪಿಎಸ್​ಐ ಪರಶುರಾಮ್ ಭೇಟಿ ಬಗ್ಗೆ ಮಾಹಿತಿ ಸಂಗ್ರಹ
ಮೃತ ಪಿಎಸ್ಐ ಪರಶುರಾಮ
Follow us
ಅಮೀನ್​ ಸಾಬ್​
| Updated By: ಆಯೇಷಾ ಬಾನು

Updated on: Aug 10, 2024 | 11:52 AM

ಯಾದಗಿರಿ, ಆಗಸ್ಟ್​.10: ಪಿಎಸ್ಐ ಪರಶುರಾಮ (Yadgiri PSI Parshuram) ಅನುಮಾನಾಸ್ಪದ ಸಾವು ಪ್ರಕರಣದ ತನಿಖೆ ಚುರುಕುಗೊಡಿದೆ. ಇತ್ತೀಚೆಗೆ ಸಿಐಡಿ ಅಧಿಕಾರಿಗಳು ಪೊಲೀಸ್​ ವಸತಿ ಗೃಹದ ಪರಶುರಾಮ ಮನೆಗೆ ತೆರಳಿ ಸ್ಥಳ ಮಹಜರು ನಡೆಸಿದ್ದರು. ಈ ವೇಳೆ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್ (Channareddy Patil) ಹೆಸರಿನ ಲೆಟರ್​ ಹೆಡ್​ ಪತ್ತೆಯಾಗಿತ್ತು. ಸದ್ಯ ಇದೀಗ ಮಹತ್ತರ ಮಾಹಿತಿ ಕಲೆ ಹಾಕಲು ಸಿಐಡಿ ಟೀಂ ಮುಂದಾಗಿದೆ. ಇದರಿಂದ ಶಾಸಕ ಚೆನ್ನಾರೆಡ್ಡಿ ಪಾಟೀಲ್​ಗೆ ಟೆನ್ಷನ್ ಹೆಚ್ಚಾಗಿದೆ.

ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಆತನ ಪುತ್ರ ಪಂಪನಗೌಡ ಬಗ್ಗೆ ಸಿಐಡಿ ಮಾಹಿತಿ ಕಲೆ ಹಾಕುತ್ತಿದೆ. ಯಾದಗಿರಿ ನಗರದ ಲಾಲ್ ಬಹದ್ದೂರ ಶಾಸ್ತ್ರಿ ವೃತ್ತದ ಬಳಿ ಇರುವ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕಚೇರಿಗೆ ಸಿಐಡಿ ಡಿವೈಎಸ್ಪಿ ಪುನೀತ್ ನೇತೃತ್ವದ ತನಿಖಾ ತಂಡ ಭೇಟಿ ನೀಡಿ ಇಡೀ ಕಚೇರಿಯನ್ನು ಪರಿಶೀಲನೆ ನಡೆಸಿದ್ದಾರೆ. ಪೊಸ್ಟಿಂಗ್ ವಿಚಾರವಾಗಿ ಪಿಎಸ್ಐ ಪರಶುರಾಮ ಶಾಸಕ ಚೆನ್ನಾರೆಡ್ಡಿ ಅವರನ್ನು ಭೇಟಿಯಾಗಿದ್ದರು. ಇದೇ ಶಾಸಕರ ಕಚೇರಿಯಲ್ಲಿ ಚೆನ್ನಾರೆಡ್ಡಿ ಅವರನ್ನು ಭೇಟಿಯಾಗಿದ್ದರು. ಹಾಗಾದ್ರೆ ಎಷ್ಟು ಬಾರಿ ಪಿಎಸ್ಐ ಪರಶುರಾಮ, ಶಾಸಕ ಚೆನ್ನಾರೆಡ್ಡಿ ಭೇಟಿಯಾಗಿದ್ದರು? ಯಾವ ವಿಚಾರಕ್ಕೆ ಭೇಟಿಯಾಗಿರಬಹುದು ಸೇರಿ ಹಲವು ವಿಷಯಗಳ ಬಗ್ಗೆ ತಂಡ ಮಾಹಿತಿ ಪಡೆಯುತ್ತಿದೆ.

ಇದನ್ನೂ ಓದಿ: ಡೆಂಗ್ಯೂ ಕಂಟ್ರೋಲ್​ಗೆ ಮುಂಬೈ ಮಾದರಿ ಫಾಲೋ ಮಾಡಲು ಮುಂದಾದ ಬಿಬಿಎಂಪಿ; ಇಕೋ ಬಯೋ ಟ್ರ್ಯಾಪ್‌ ಬಳಕೆಗೆ ಪ್ಲಾನ್

ಶಾಸಕ ಚೆನ್ನಾರೆಡ್ಡಿ, ಪಿಎಸ್ಐ ಪರಶುರಾಮ ಭೇಟಿಯ ವಿಡಿಯೋ ಕಲೆ ಹಾಕಲು ಸಿಐಡಿ ಮುಂದಾಗಿದೆ. ಶಾಸಕ ಚೆನ್ನಾರೆಡ್ಡಿ ಸ್ಥಳೀಯವಾಗಿ ಇದೇ ಕಚೇರಿಯಲ್ಲಿ ಜನರಿಗೆ ಸಿಗುತ್ತಿದ್ರು. ಹೀಗೆ ಹಲವು ಆಯಾಮಗಳಲ್ಲಿ ಕಚೇರಿಗೆ ಭೇಟಿ ನೀಡಿ ಸಿಐಡಿ ತನಿಖಾ ತಂಡ ಮಾಹಿತಿ ಪಡೆದಿದೆ. ಜೊತೆಗೆ ಕಚೇರಿ ಭೇಟಿ ವೇಳೆ ಶಾಸಕನ ಪುತ್ರ ಪಂಪನಗೌಡ ಬಗ್ಗೆಯು ಮಾಹಿತಿ ಕಲೆ ಹಾಕಿಲಾಗಿದೆ. ಈಗಾಗಲೇ ಶಾಸಕ ಚೆನ್ನಾರೆಡ್ಡಿ ಹಾಗೂ ಆತನ ಪುತ್ರ ಪಂಪನಗೌಡ ವಿರುದ್ದ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಕ್ಕೆ ಪುಷ್ಟಿ ನೀಡುವಂತೆ ಪಿಎಸ್ಐ ಪರಶುರಾಮ ಮನೆಯಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಖಾಲಿ ಲೇಟರ್ ಹೇಡ್ ಪತ್ತೆಯಾಗಿದೆ. ಇದರಿಂದ ಮತ್ತಷ್ಟು ತೀವ್ರವಾಗಿ ಸಿಐಡಿ ಟೀಂ ತನಿಖೆಗಿಳಿದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ