AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್ ಆರಂಭದಲ್ಲೇ ಸಿಡಿದ ಡೆಡ್‌ಲೈನ್ ಬಾಂಬ್: ಕಾಂಗ್ರೆಸ್​ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ ಡೆಡ್‌ಲೈನ್!

ಕಾಂಗ್ರೆಸ್ ಮನೆಯಿಂದ ದಿನಕ್ಕೊಂದು ಬೆಳವಣಿಗೆಗಳು ವರದಿಯಾಗುತ್ತಿದ್ದು ಕ್ರಾಂತಿ ಕಿಚ್ಚನ್ನು ಹೆಚ್ಚಿಸುತ್ತಿವೆ. ನವೆಂಬರ್ ಶುರುವಾಗಿದ್ದು, ಆರಂಭದಲ್ಲೇ ಪದಗ್ರಹಣ ಮತ್ತು ಡೆಡ್ ಲೈನ್ ಎಂಬ ವಿಚಾರ ಭಾರೀ ಸದ್ದು ಮಾಡುತ್ತಿದೆ. ಇದೇ ವಿಚಾರಕ್ಕೆ ಸಿಎಂ ಕೂಡಾ ಗರಂ ಆಗಿದ್ದಾರೆ. ಆದರೆ, ಡೆಡ್ ಲೈನ್ ತಲೆಕೆಡಿಸಿಕೊಳ್ಳದ ಸಿಎಂ ಬಣ, ನೋ ಕ್ರಾಂತಿ ಎನ್ನುತ್ತಿದೆ.

ನವೆಂಬರ್ ಆರಂಭದಲ್ಲೇ ಸಿಡಿದ ಡೆಡ್‌ಲೈನ್ ಬಾಂಬ್: ಕಾಂಗ್ರೆಸ್​ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ ಡೆಡ್‌ಲೈನ್!
ಕಾಂಗ್ರೆಸ್​ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ ಡೆಡ್‌ಲೈನ್!
ಪ್ರಸನ್ನ ಗಾಂವ್ಕರ್​
| Updated By: Ganapathi Sharma|

Updated on: Nov 01, 2025 | 7:03 AM

Share

ಬೆಂಗಳೂರು, ನವೆಂಬರ್ 1: ಕಾಂಗ್ರೆಸ್ (Congress) ಕೋಟೆಯ ಕುರ್ಚಿ ಕಂಪಿಸುತ್ತಿದೆ. ಅಕ್ಟೋಬರ್ ಮುಗಿದು ನವೆಂಬರ್ ಆರಂಭವಾಗಿದೆ. ಇಂದು ರಾಜ್ಯೋತ್ಸವದ ಸಂಭ್ರಮ ಬೇರೆ. ನವೆಂಬರ್​ನಲ್ಲಿಯೇ, ಕರ್ನಾಟಕ ಕಾಂಗ್ರೆಸ್​ ಪಾಳೆಯದಲ್ಲಿ ಕ್ರಾಂತಿಯಾಗುತ್ತದೆಯಾ ಎಂಬ ಕುತೂಹಲ ಗರಿಗೆದರಿದೆ. ಇಂಥಾ ಹೊತ್ತಲ್ಲೇ ನಾಯಕತ್ವ ಬದಲಾವಣೆ ವಿಚಾರದಲ್ಲಿ ಮತ್ತೊಂದು ಬಿರುಗಾಳಿ ಎದ್ದಿದೆ. ಸಿಎಂ ಆಗಿ ಪದಗ್ರಹಣ ಮಾಡೋದಕ್ಕೆ ಡಿಕೆ ಡೆಡ್​ಲೈನ್ ಕೊಟ್ಟಿದ್ದಾರೆಂಬ ಊಹಾಪೋಹ ಹರಿದಾಡುತ್ತಿದೆ. ಹೀಗೊಂದು ವದಂತಿ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದಾಗ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

‘‘ನಿನಗೆ ಹೇಗೆ ಗೊತ್ತು?’’ ಎಂದು ಸಿದ್ದರಾಮಯ್ಯ ಪತ್ರಕರ್ತರನ್ನು ಗದರಿದ್ದಾರೆ. ಪತ್ರಿಕೆ ವಿಚಾರ ಹೇಳಿದಾಗ ಯಾವ ಪೇಪರ್‌ನಲ್ಲಿ? ನಾನು ಎಲ್ಲ ಪತ್ರಿಕೆಯನ್ನು ಒದುತ್ತೇನೆ. ಎಲ್ಲೂ ನೋಡಿಲ್ಲ ಎಂದಿದ್ದಾರೆ.

ಡಿಕೆ ಶಿವಕುಮಾರ್ ಡೆಡ್‌ಲೈನ್ ನೀಡಿದ್ದಾರಂತೆ ಎಂಬ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಮಹದೇವಪ್ಪ, ಅದು ದೊಡ್ಡವರ ವಿಷ್ಯ. ನಮಗೆ ಹೇಗೆ ಗೊತ್ತಾಗುತ್ತೆ ಎಂದರು.

ಈ ನಡುವೆ ಸಚಿವ ಜಮೀರ್ ಅಹ್ಮದ್, ಡಿಕೆ ಶಿವಕುಮಾರ್​​ಗೆ ಸಿಎಂ ಆಗಬೇಕು ಎಂಬ ಆಸೆ ಇದೆ. ಆದರೆ, ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಅವರೇ 5ವರ್ಷ ಸಿಎಂ ಎಂದು ಹೇಳಿದ್ದಾರೆ. ಸಚಿವರೆಲ್ಲರೂ ಯಾವುದೇ ಕ್ರಾಂತಿ ಇಲ್ಲ ಎಂದಿದ್ದಾರೆ.

ನಾಯಕತ್ವ ಬದಲಾವಣೆ ಚರ್ಚೆ ಹೊತ್ತಿನಲ್ಲೇ ಹೋದಲ್ಲಿ ಬಂದಲ್ಲಿ ಮುಂದಿನ ಸಿಎಂ ಘೋಷಣೆಗಳು ಮೊಳಗುತ್ತಿವೆ. ಇದೀಗ ಚಿತ್ರದುರ್ಗದಲ್ಲಿ ಮುಂದಿನ ಡಿಸಿಎಂ ಜಮೀರ್ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಭಿತ್ತಿಪತ್ರ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ನವೆಂಬರ್ ಕೌತುಕ: ರಾಜಣ್ಣ ನಿವಾಸದಲ್ಲಿ ಸಿಎಂಗೆ ಔತಣಕೂಟ, ಸಿದ್ದರಾಮಯ್ಯ ಪಟ್ಟ ಉಳಿಸಲು ಬೆಂಬಲಿಗರ ಆಟ

ಮೇಲ್ನೋಟಕ್ಕೆ ಕಾಂಗ್ರೆಸ್​​ನಲ್ಲಿ ಏನಾಗುತ್ತಿಲ್ಲ ಎಂಬಂತೆ ಬಿಂಬಿಸಲು ಯತ್ನಿಸಿದರೂ, ಒಳಗೊಳಗೆ ನಡೆಯುತ್ತಿರುವ ಬೆಳವಣಿಗೆ, ನಾಯಕರ ಬಾಯಿಂದ ಹೊರ ಬರುತ್ತಿರುವ ಮಾತುಗಳು, ಚರ್ಚೆಗೀಡು ಮಾಡಿವೆ. ಈ ನಡುವೆ ಇಂದಿನಿಂದ ನವೆಂಬರ್ ಬೇರೆ ಶುರುವಾಗಿದೆ. ಕ್ರಾಂತಿನಾ? ಇಲ್ಲ ಬರೀ ಭ್ರಾಂತಿನಾ ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ