AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ MLA​ ಪುತ್ರನಿಗೆ ಡಿಕೆ ಶಿವಕುಮಾರ್ ಹೆಸರು: ನಾಮಕರಣ ಮಾಡಿದ್ದೇ ಡಿಕೆಶಿ

ಕಾಂಗ್ರೆಸ್ ಶಾಸಕರೊಬ್ಬರ ಪುತ್ರನಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಸರನ್ನೇ ಇಡಲಾಗಿದೆ. ಹೌದು...ಕುಡಚಿ ಕಾಂಗ್ರೆಸ್‌ ಶಾಸಕರ ಮಹೇಂದ್ರ ತಮ್ಮಣ್ಣನವರ್ ತಮ್ಮ ಮಗನಿಗೆ ಇಂದು (ಅಕ್ಟೋಬರ್ 31) ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ನಾಮಕರಣ ಮಾಡಿಸಿದ್ದು, ಮಗನಿಗೂ ʻಶಿವಕುಮಾರ್ʼ ಅಂತಲೇ ನಾಮಕರಣ ಮಾಡಿಸಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಅವರು ಪಾಪುವಿಗೆ ತಮ್ಮ ಹೆಸರನ್ನೇ ನಾಮಕಾರಣ ಮಾಡಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ರಮೇಶ್ ಬಿ. ಜವಳಗೇರಾ
|

Updated on:Oct 31, 2025 | 10:19 PM

Share
ಕುಡಚಿ  ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣನವರ್ ತಮ್ಮ ಮಗನಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೆಸರನ್ನೇ ಇಟ್ಟಿದ್ದಾರೆ. ಅದರಲ್ಲೂ ಡಿಕೆ ಶಿವಕುಮಾರ್ ಅವರಿಂದಲೇ ಹೆಸರು ನಾಮಕರಣ ಮಾಡಿಸಿದ್ದು ವಿಶೇಷವಾಗಿದೆ.

1 / 6
ಇಂದು (ಅಕ್ಟೋಬರ್ 31) ಬೆಂಗಳೂರಿನ ಡಿಕೆ ಶಿವಕುಮಾರ್ ಅವರ  ಗೃಹ ಕಚೇರಿಯಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ಕೈ ಶಾಸಕನ ಮಗುವಿಗೆ ಡಿಕೆಶಿ 'ಶಿವಕುಮಾರ್' ಎಂದು ಎಂದು ನಾಮಕರಣ ಮಾಡಿದ್ದಾರೆ. ಬಳಿಕ ತಮ್ಮ ಹೆಸರಿಟ್ಟ ಮಗುವಿಗೆ ಶುಭ ಹಾರೈಸಿದ್ದಾರೆ.

2 / 6
ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ್ ಅವರು ತನ್ನ ಪುತ್ರನಿಗೆ ಡಿಕೆ ಶಿವಕುಮಾರ್ ಅವರ ಹೆಸರು ಇಡಬೇಂಬ ಆಸೆ ಹೊಂದಿದ್ದರು. ಹೀಗಾಗಿ ಅವರೇ ಕುಟುಂಬ ಸಮೇತ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿ ಅವರಿಂದಲೇ ನಾಮಕರಣ ಮಾಡಿಸಿದ್ದಾರೆ.

3 / 6
ಮಗುವಿಗೆ ತಮ್ಮ ಹೆಸರು ಇಟ್ಟಿರುವ ಖುಷಿಯನ್ನು ಡಿಕೆ ಶಿವಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪಾಪು ಶಿವಕುಮಾರ್​​ಗೆ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ನತುಂಬಿ ಹಾರೈಸಿದ್ದಾರೆ.

4 / 6
ಈ ಬಗ್ಗೆ ಡಿಕೆ ಶಿವಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡು, "ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ! ನನ್ನ ಗೃಹಕಚೇರಿಯಲ್ಲಿಂದು ಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣನವರ್ ಅವರ ಮಗನಿಗೆ "ಶಿವಕುಮಾರ್" ಎಂದು ನಾಮಕರಣ ಮಾಡುವ ಭಾಗ್ಯ ನನ್ನದಾಯಿತು. ನನ್ನ ಹೆಸರನ್ನು ಮಗುವಿಗೆ ಇಡಲು ನಿರ್ಧರಿಸಿದ ಶಾಸಕರ ಈ ನಡೆಗೆ ನಾನು ಧನ್ಯ! " ಎಂದು ಬರೆದುಕೊಂಡಿದ್ದಾರೆ.

5 / 6
ಮುಂದಿನ ದಿನಗಳಲ್ಲಿ ಈ ಮುದ್ದಾದ ಮಗು ನನಗಿಂತಲೂ ಎತ್ತರಕ್ಕೆ ಬೆಳೆಯಲಿ, ತಂದೆ-ತಾಯಿಗಳಿಗೆ ಒಳ್ಳೆಯ ಹೆಸರು ತರುವಂತಾಗಲಿ ಎಂದು ಶುಭಹಾರೈಸಿದೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಈ “ಶಿವಕುಮಾರ” ಕರುನಾಡ ಬೆಳಗುವ ಕುವರನಾಗಲಿ ಎಂದು ಮನತುಂಬಿ ಹಾರೈಸುವೆ " ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

6 / 6

Published On - 9:46 pm, Fri, 31 October 25