ಬೆಂಗಳೂರು: ನಾಳೆ ನಗರಕ್ಕೆ ರಕ್ಷಣಾ ಇಲಾಖೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ.
ದೊಡ್ಡ ನೆಕ್ಕುಂದಿ ರಸ್ತೆಯಲ್ಲಿರುವ ಎಲ್ಸಿಎ ತೇಜಸ್ ಡಿವಿಷನ್ ಪ್ಲಾಂಟ್- 2ಗೆ ಭೇಟಿ ನೀಡಲಿರುವ ರಾಜನಾಥ್ ಸಿಂಗ್, ಸೆಕೆಂಡ್ ಎಲ್ಸಿಎ ಪ್ರೊಡಕ್ಷನ್ ಲೈನ್ ಅನ್ನು ಉದ್ಘಾಟಿಸಲಿದ್ದಾರೆ. ಲಘು/ಹಗುರವಾದ ಯುದ್ದ ವಿಮಾನಗಳನ್ನು ಎಲ್ಸಿಎ ತೇಜಸ್ ಡಿವಿಷನ್ ಪ್ಲಾಂಟ್- 2ನಲ್ಲಿ ತಯಾರಿಸಲಾಗುತ್ತದೆ.
HAL ನಿರ್ಮಿತ 83 ತೇಜಸ್ ಲಘು ಯುದ್ಧವಿಮಾನ ಖರೀದಿಗೆ ಕೇಂದ್ರದ ಅನುಮೋದನೆ
Published On - 11:54 am, Mon, 1 February 21