ತುಮಕೂರು: ಹರಾಜು ಮೂಲಕ ಆಯ್ಕೆಯಾದ ಗ್ರಾಮ ಪಂಚಾಯತಿ 9 ಸದಸ್ಯರ ವಿರುದ್ಧ ದೂರು ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಟಿವಿ9 ಗೆ ತಿಳಿಸಿದ್ದಾರೆ.
ಬಂಧಿತರು ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಒಂದು ಲಕ್ಷದಿಂದ 40 ಲಕ್ಷದವರೆಗೆ ಹರಾಜು ಪ್ರಕ್ರಿಯೆ ನಡೆಸಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಹರಾಜು ನಡೆಸಿ ಅದರಿಂದ ಬಂದ ಹಣದಿಂದ ಗ್ರಾಮಗಳಲ್ಲಿನ ದೇವಾಲಯಗಳ ಅಭಿವೃದ್ಧಿಗೆ ಉಪಯೋಗಿಸಿಕೊಳ್ಳಲಾಗುತ್ತಿದೆಯಂತೆ.
ಈ ಬಗ್ಗೆ ಸಾಕಷ್ಟು ದೂರು ಹಾಗೂ ಆಡಿಯೋ, ವಿಡಿಯೋಗಳು ದೊರೆತಿದ್ದು, ಸದಸ್ಯರನ್ನು ಇಂದು ಮತ್ತು ನಾಳೆ ಜಿಲ್ಲೆಯಿಂದ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣ ಸಂಬಂಧ ಕುಣಿಗಲ್, ತುರುವೇಕೆರೆ, ಚೇಳೂರು, ತಿಪಟೂರು, ನೊಣವಿನಕೆರೆ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಹರಾಜು ಪ್ರಕ್ರಿಯೆ
ಚುನಾವಣಾ ಆಯೋಗಕ್ಕೆ ಡೋಂಟ್ ಕೇರ್! ಗ್ರಾ. ಪಂ. ಸದಸ್ಯ ಸ್ಥಾನ ಹರಾಜು, ಪ್ರಜಾಪ್ರಭುತ್ವದ ಮಾನವೂ ಹರಾಜು