ಕಡಂದಲೆ ಸುಬ್ರಹ್ಮಣ್ಯ ದೇಗುಲದಲ್ಲಿ ಪಂಕ್ತಿಭೇದ ಆರೋಪ: ಅರ್ಚಕರ ನಡೆಗೆ ಭಕ್ತರ ಆಕ್ರೋಶ

ಬ್ರಾಹ್ಮಣರು ಊಟ ಮಾಡಿದ ಬಳಿಕ ಉಳಿದ ಜಾತಿಗೆ ಸೇರಿದವರ ಊಟಕ್ಕೆ ಅವಕಾಶ ನೀಡಿದ್ದನ್ನು ಭಕ್ತರು ವಿರೋಧಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಭಕ್ತರಿಗೆ ಸಮಾಧಾನ ಮಾಡಿದರು.

ಕಡಂದಲೆ ಸುಬ್ರಹ್ಮಣ್ಯ ದೇಗುಲದಲ್ಲಿ ಪಂಕ್ತಿಭೇದ ಆರೋಪ: ಅರ್ಚಕರ ನಡೆಗೆ ಭಕ್ತರ ಆಕ್ರೋಶ
ಅರ್ಚಕರ ವಿರುದ್ಧ ಆರೋಪ, ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ
Edited By:

Updated on: Dec 20, 2020 | 6:06 PM

ಮಂಗಳೂರು: ಕಡಂದಲೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಬಳಿಕ ಬ್ರಾಹ್ಮಣ ಸಮುದಾಯಕ್ಕೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿದ್ದರಿಂದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ತಾಲೂಕಿನ ಕಡಂದಲೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಹಪಂಕ್ತಿ ಭೋಜನ ವ್ಯವಸ್ಥೆಯನ್ನು ಪಾಲಿಸಿಲ್ಲ. ಬ್ರಾಹ್ಮಣರು ಊಟ ಮಾಡಿದ ಬಳಿಕ ಉಳಿದ ಜಾತಿಗೆ ಸೇರಿದವರ ಊಟಕ್ಕೆ ಅವಕಾಶ ನೀಡಿದ್ದನ್ನು ಭಕ್ತರು ವಿರೋಧಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಭಕ್ತರಿಗೆ ಸಮಾಧಾನ ಮಾಡಿದರು.

ಕಳೆದ ಬಾರಿಯು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕಡಂದಲೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅವಮಾನ ಮಾಡಿ, ಹೊರಗೆ ಕಳುಹಿಸಿದ್ದನ್ನು ಇಲ್ಲಿ ನೆನೆಯಬಹುದು.

ಮಂಗಳಾರತಿಗೆಂದು ಬಂದು.. ಅರ್ಚಕರ ಚಿನ್ನದ ಸರವನ್ನೇ ಕದ್ದೊಯ್ದ ಭಕ್ತ ಮಹಾಶಯ!