AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾಕಾಶಿಯ ಶತಮಾನದ ಕಾಲೇಜಿನ ದುರಸ್ತಿಗೆ ಮುಂದಾಗದ ಅಧಿಕಾರಿಗಳು

ಧಾರವಾಡ: ವಿದ್ಯಾಕಾಶಿ ಧಾರವಾಡ ಅಂದ ಕೂಡಲೇ ಪ್ರಮುಖವಾಗಿ ಮನಸ್ಸಿಗೆ ಬರೋದು ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜು, ಕೃಷಿ ವಿಶ್ವವಿದ್ಯಾಲಯ! ಅಂಥವುಗಳ ಸಾಲಿಗೆ ಸೇರೋ ಮತ್ತೊಂದು ಅಂದರೆ ಅದು ಧಾರವಾಡ ತರಬೇತಿ ಕಾಲೇಜು. ಈ ಕಾಲೇಜು ಆರಂಭವಾಗಿ ಅದಾಗಲೇ ಒಂದು ಶತಮಾನ ದಾಟಿ ಹೋಗಿದೆ. 1913 ರಲ್ಲಿ ಆರಂಭವಾದ ಕಾಲೇಜು ಅದು. ಅದೀಗ ಶತಮಾನೋತ್ತರ ದಶಕದಲ್ಲಿ ಅಡಿ‌ ಇಟ್ಟಾಗಿದೆ. ಆದರೆ ಇಂಥ ಸುಂದರವಾದ ಕಾಲೇಜಿನ ಇವತ್ತಿನ ಪರಿಸ್ಥಿತಿ ನೋಡಿದರೆ ಎಂಥವರಿಗಾದರೂ ನೋವಾಗೋದು ಸಹಜ. ಏಕೆಂದರೆ ಇತ್ತೀಚೆಗೆ ಸುರಿದ ಭಾರೀ […]

ವಿದ್ಯಾಕಾಶಿಯ ಶತಮಾನದ ಕಾಲೇಜಿನ ದುರಸ್ತಿಗೆ ಮುಂದಾಗದ ಅಧಿಕಾರಿಗಳು
ಸಾಧು ಶ್ರೀನಾಥ್​
| Edited By: |

Updated on: Jun 07, 2020 | 6:21 PM

Share

ಧಾರವಾಡ: ವಿದ್ಯಾಕಾಶಿ ಧಾರವಾಡ ಅಂದ ಕೂಡಲೇ ಪ್ರಮುಖವಾಗಿ ಮನಸ್ಸಿಗೆ ಬರೋದು ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜು, ಕೃಷಿ ವಿಶ್ವವಿದ್ಯಾಲಯ! ಅಂಥವುಗಳ ಸಾಲಿಗೆ ಸೇರೋ ಮತ್ತೊಂದು ಅಂದರೆ ಅದು ಧಾರವಾಡ ತರಬೇತಿ ಕಾಲೇಜು. ಈ ಕಾಲೇಜು ಆರಂಭವಾಗಿ ಅದಾಗಲೇ ಒಂದು ಶತಮಾನ ದಾಟಿ ಹೋಗಿದೆ. 1913 ರಲ್ಲಿ ಆರಂಭವಾದ ಕಾಲೇಜು ಅದು. ಅದೀಗ ಶತಮಾನೋತ್ತರ ದಶಕದಲ್ಲಿ ಅಡಿ‌ ಇಟ್ಟಾಗಿದೆ.

ಆದರೆ ಇಂಥ ಸುಂದರವಾದ ಕಾಲೇಜಿನ ಇವತ್ತಿನ ಪರಿಸ್ಥಿತಿ ನೋಡಿದರೆ ಎಂಥವರಿಗಾದರೂ ನೋವಾಗೋದು ಸಹಜ. ಏಕೆಂದರೆ ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಬೀಸಿದ ಗಾಳಿಯಿಂದ ಕಟ್ಟಡದ ಮೇಲೆ ತಾರಸಿ ಹಂಚಿಗೆ ಹೊದಿಸಲಾಗಿದ್ದ ಶೀಟ್​ಗಳು‌ ಮತ್ತು ಆಧಾರವಾಗಿದ್ದ ಟ್ಯೂಬ್ ಮೇಲ್ಛಾವಣಿ ಹಾರಿ ಬಿದ್ದುಹೋಗಿವೆ.

ಧಾರವಾಡದ ಪಾರಂಪರಿಕ ಕಟ್ಟಡ:  ಇದು ಧಾರವಾಡದ ಪಾರಂಪರಿಕ ಕಟ್ಟಡಗಳ ಸಾಲಿಗೆ ಸೇರಬಹುದಾದ ಕಟ್ಟಡವೂ ಹೌದು. ಧಾರವಾಡ ನಗರದ ಸುಂದರ ನಿರ್ಮಿತಿಗಳಲ್ಲಿ‌ ಇದೂ ಒಂದು. ಧಾರವಾಡದ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯನ್ನು ಕೂಡ ಈ ಕಟ್ಟಡ ಹೊಂದಿದೆ.‌ 107 ವರ್ಷ ಕಳೆದರೂ ಅಲುಗಾಡದ ಕಟ್ಟಡದ ಅಭಿಯಾಂತ್ರಿಕತೆ, ನಿರ್ಮಿತಿ ಕೌಶಲ, ಒಳಾವರಣ ವಿನ್ಯಾಸ ಅಧ್ಯಯನ ಯೋಗ್ಯ.

ಆದರೆ, ಇತ್ತೀಚೆಗೆ ಕೈಗೊಂಡ ಈ ಮೇಲ್ಛಾವಣಿ ದುರಸ್ತಿ ಕಾಮಗಾರಿಯ ಗುಣಮಟ್ಟ ನೋಡಿದರೆ ಇಲ್ಲಿ ಯಾವ ರೀತಿ ಕೆಲಸ ನಿರ್ವಹಿಸಲಾಗಿದೆ ಅನ್ನೋದು ತಿಳಿದು ಬರುತ್ತದೆ. ಘಟನೆ ನಡೆದು 2 ವಾರ ಕಳೆದರೂ ಅದರ ದುರಸ್ತಿಗೆ ಯಾರೂ ಮುಂದಾಗುತ್ತಿಲ್ಲ. ಒಂದೆಡೆ ಇಲಾಖೆಯಲ್ಲಿ ಹಣದ ಕೊರತೆ ಇದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಹೀಗಾಗಿ ಅದರ ದುರಸ್ತಿ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಇತ್ತೀಚೆಗಷ್ಟೇ ಇದರ ಕೆಲಸ ಮಾಡಿದ್ದರೂ ಅಷ್ಟು ಬೇಗ ಹೇಗೆ ಈ ಸಮಸ್ಯೆ ಎದುರಾಯಿತು ಅನ್ನೋ ಮಾತು ಮತ್ತೊಂದು ಕಡೆ. ಇದೆಲ್ಲದರ ನಡುವೆ ಸದ್ಯಕ್ಕೆ ಸಮಾಧಾನದ ಸಂಗತಿ ಅಂದರೆ ಪ್ರಾಣ ಹಾನಿಯಾಗಿಲ್ಲ ಅನ್ನೋದು. ಒಟ್ಟಿನಲ್ಲಿ ಸುಂದರವಾದ ಕಟ್ಟಡವನ್ನು ಈ ರೀತಿಯಾಗಿ ನೋಡಬೇಕಾಗಿ ಬಂದಿದ್ದು ಧಾರವಾಡಿಗರ ದುರ್ದೈವೇ ಸರಿ.

Follow Us
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ
ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ
ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್
ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್