ಧಾರವಾಡ: ಹಿಂದೂ ಯುವತಿಯರಿಗೆ ಮೆಸೇಜ್ ಮಾಡುತ್ತಿದ್ದ ಮುಸ್ಲಿಂ ಯುವಕ; ಬಜರಂಗದಳ ಕಾರ್ಯಕರ್ತರಿಂದ ದಾಳಿ
ರಿಲಾಯನ್ಸ್ ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯರಿಗೆ ಮೆಸೇಜ್ ಮಾಡಿ ಪೀಡಿಸುತ್ತಿದ್ದ ವಿಚಾರ ತಿಳಿದ ಬಜರಂಗದಳದ ಕಾರ್ಯಕರ್ತರು ಕಚೇರಿಗೆ ನುಗ್ಗಿ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಿಲಾಯನ್ಸ್ ಡಿಜಿಟಲ್‌ಗೆ ಸಿಮ್ ಕೊಳ್ಳುವಾಗ ನಂಬರ್ ನೀಡಲಾಗುತ್ತದೆ. ಇದರಲ್ಲಿ ಹಿಂದೂ ಯುವತಿಯರ ನಂಬರ್ ತೆಗೆದು ಮೆಸೇಜ್ ಮಾಡುತ್ತಿದ್ದನು.
ಧಾರವಾಡ, ಜ.16: ಹಿಂದೂ ಯುವತಿಯರಿಗೆ ಮಸೇಜ್ ಮಾಡಿ ಕಾಡಿಸುತ್ತಿದ್ದ ಮುಸ್ಲಿಂ ಯುವಕನನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ. ಮುಸ್ಲಿಂ ಯುವಕ ಫಯಾಜ್ ಜ್ಯುಬಿಲಿ ಸರ್ಕಲ್ನಲ್ಲಿರುವ ರಿಲಾಯನ್ಸ್ ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದ.
ರಿಲಾಯನ್ಸ್ ಡಿಜಿಟಲ್ನಲ್ಲಿ ಕೊಟ್ಟ ಕೆಲಸವನ್ನು ಮಾಡಿ ಸಂಬಳ ಪಡೆದು ಜೀವನ ಸಾಗಿಸುವುದು ಬಿಟ್ಟು ಹಿಂದೂ ಯುವತಿಯರು ಹಾಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಫಯಾಜ್, ಯುವತಿಯರಿಗೆ ಮೆಸೇಜ್ ಮಾಡಿ ಸಲುಗೆ ಬೆಳೆಸಿ ಬಳಿಕ ವಿಡಿಯೋ ಕಾಲ್ ಮೂಲಕ ಅಂಗಾಂಗಗಳನ್ನು ತೋರಿಸುವಂತೆ ಒತ್ತಾಯಿಸಿ ಅದರ ಸ್ಕ್ರೀನ್ಶಾಟ್ ತೆಗೆದು ಬಳಿಕ ಬ್ಲ್ಯಾಕ್ಮೇಲ್ ಮಾಡುತ್ತಿದ್ದನು.
ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಸುತ್ತಾಟ; ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ರಿಲಾಯನ್ಸ್ ಡಿಜಿಟಲ್‌ಗೆ ಬರುತ್ತಿದ್ದ ಗ್ರಾಹಕರು ಖರೀದಿಸುವಾಗ ಮೊಬೈಲ್ ನಂಬರ್ ನೀಡುತ್ತಾರೆ. ಅದರಲ್ಲಿನ ಹಿಂದೂ ಯುವತಿ ಹಾಗೂ ಮಹಿಳೆಯರ ನಂಬರ್ ಹೆಕ್ಕಿ ತೆಗದು ಸಂಪರ್ಕಿಸುತ್ತಿದ್ದ ಆರೋಪಿ ಫಯಾಜ್, ಅವರೊಂದಿಗೆ ನಯವಾಗಿ ವರ್ತಿಸಿ ಸ್ನೇಹ ಬೆಳೆಸುತ್ತಿದ್ದ. ವಿಡಿಯೋ ಕಾಲ್ನಲ್ಲಿ ದೃಶ್ಯ ಸೆರೆಹಿಡಿದು ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು.
ಈ ವಿಚಾರ ತಿಳಿದ ಬಜರಂಗದಳದ ಕಾರ್ಯಕರ್ತರು, ರಿಲಾಯನ್ಸ್ ಡಿಜಿಟಲ್‌ಗೆ ನುಗ್ಗಿ ಫಯಾಜ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅದರಂತೆ ಉಪನಗರ ಠಾಣಾ ಪೊಲೀಸರು ಫಯಾಜ್ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ, ಪೊಲೀಸರಿಗೆ ಮಾಹಿತಿ ನೀಡಿದೆ ನೈತಿಕವಾಗಿ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡರು. ಏನೇ ಇದ್ದರೂ ತಮಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Tue, 16 January 24