ಹುಬ್ಬಳ್ಳಿ, ಫೆಬ್ರವರಿ 19: ಛತ್ರಪತಿ ಶಿವಾಜಿ ಮಹರಾಜರ (Chhatrapati Shivaji Maharaj) 36 ಬಾಡಿಗಾರ್ಡ್ಗಳಲ್ಲಿ 13 ಜನ ಮುಸ್ಲಿಂ ಬಾಡಿಗಾರ್ಡ್ಗಳಿದ್ದರು ಎಂದು ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ. ನಗರದ ಮರಾಠಾ ಗಲ್ಲಿಯಲ್ಲಿ ನಡೆದ ಶಿವಾಜಿ ಮಹರಾಜರ 397 ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಮಹರಾಜರು ಮುಸ್ಲಿಂ ವಿರೋಧಿ ಅಲ್ಲ. ಇತಿಹಾಸವನ್ನು ಇವತ್ತು ಯಾರ ಹೇಗೆಬೇಕಾದರೂ ಹೇಳಬಹುದು. 60 ಸಾವಿರ ಮುಸ್ಲಿಂರು ಶಿವಾಜಿ ಸೈನ್ಯದಲ್ಲಿ ಇದ್ದರು. ಭಗವಾ ಕಲರ್ ಶಿವಾಜಿ ಮಹರಾಜರದು. ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇರುವಾಗಲೇ ಭಗವಾ ಕಲರ್ ಯಾರದೂ ಅಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ನಾನೊಬ್ಬ ಮರಾಠಾ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ನನಗೆ ಬಸವಣ್ಣ ಬೇಕು, ರಾಮ ಬೇಕು, ರಹೀಮ್ ಬೇಕು. ಮರಾಠರು ಶೈಕ್ಷಣಿಕವಾಗಿ ಮುಂದೆ ಬರಬೇಕು. ಝಿರೋದಿಂದ ಇಂತಹ ಎಂಫೈರ್ ಕಟ್ಟಿದ್ದು ಶಿವಾಜಿ ಮಹರಾಜರು. ನಾವು ಛತ್ರಪತಿ ವಂಶದವರು. ಯಾರಿಗೆ ತೊಂದರೆ ಆದರೂ ನಾವ ಅವರ ಜೊತೆ ನಿಲ್ಲಬೇಕು ಎಂದಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಸೂಚಿಸಿದ ಸ್ಥಳದಲ್ಲಿ ರಾಮಮಂದಿರ ಕಟ್ಟಿಲ್ಲ: ಸಂತೋಷ್ ಲಾಡ್ ಹೇಳಿಕೆಗೆ ಈಶ್ವರಪ್ಪ ತಿರುಗೇಟು
ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ ಆದರೆ ಸುಪ್ರೀಂಕೋರ್ಟ್ ಸೂಚಿಸಿದ ಜಾಗದಲ್ಲಿ ಮಂದಿರ ಕಟ್ಟಿಲ್ಲ ಎಂದು ನಿನ್ನೆಯಷ್ಟೇ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿಕೊಂಡಿದ್ದರು. ಬಳಿಕ ಸುಪ್ರೀಂಕೋರ್ಟ್ ಕೊಟ್ಟಿರುವ ಜಾಗಕ್ಕಿಂತ ಹೆಚ್ಚುವರಿ ಜಾಗದಲ್ಲಿ ರಾಮ ಮಂದಿರ ಕಟ್ಟಿದ್ದಾರೆ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಹಿಂದವೀ ಸಮಾಜ ಸ್ಥಾಪನೆ ಮಾಡಿದ್ದು ಶಿವಾಜಿ. ಹಿಂದೂ ಸಮಾಜದ ಮೇಲೆ ಆಕ್ರಮಣ ನಡೆದಾಗ ಎಲ್ಲರನ್ನು ಒಟ್ಟಿಗೆ ಸೇರಿಸಿದ್ದು ಶಿವಾಜಿ. ತನ್ನದೆ ಒಂದು ಸೈನ್ಯ ನಿರ್ಮಾಣ ಮಾಡಿದವರು ಶಿವಾಜಿ ಮಹಾರಾಜರು. ಶೂನ್ಯದಿಂದ ಸೃಷ್ಟಿ ನಿರ್ಮಾಣ ಮಾಡಿದ್ದು ಶಿವಾಜಿ ಮಹರಾಜರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಸುಪ್ರೀಂಕೋರ್ಟ್ ಸೂಚಿಸಿದ ಸ್ಥಳದಲ್ಲಿ ರಾಮ ಮಂದಿರ ಕಟ್ಟಿಲ್ಲ’: ವಿವಾದದ ಬೆನ್ನಲ್ಲೇ ಸಂತೋಷ್ ಲಾಡ್ ಸ್ಪಷ್ಟನೆ
ಶಿವಾಜಿಯವರ ಕಾಲದಲ್ಲಿ ನ್ಯಾಯಕ್ಕೆ ಎಂದು ಕೊರತೆ ಇರಲಿಲ್ಲ. ಸ್ವಾಭಿಮಾನಕ್ಕೆ ಧರ್ಮಾಭಿಮಾನಕ್ಕೆ ಶಿವಾಜಿ ಮಹಾರಾಜರು ಸಾಕ್ಷಿ. ನಾನು ಶಿವಾಜಿ ಮಹಾರಾಜರ ಪುಸ್ತಕ ಓದಿದ್ದೇನೆ. ನನಗೆ ಶಿವಾಜಿ ಮಹರಾಜರೇ ಸ್ಫೂರ್ತಿ. ಪ್ರಧಾನಿ ಮೋದಿ ಅವರು ಶಿವಾಜಿ ಮಹಾರಾಜರ ಚರಿತ್ರೆ ಓದಲು ಹೇಳಿದ್ದರು. ನೌಕಾಪಡೆಯನ್ನು ಮೊದಲು ಸ್ಥಾಪಿಸಿದ್ದು ಶಿವಾಜಿ ಮಹರಾಜರು ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.