Covid variant BF.7 : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಕ್​ ಡ್ರಿಲ್​: ಹುಬ್ಬಳ್ಳಿಯ ಕಿಮ್ಸ್​ಗೆ ಸುಧಾಕರ್​ ಭೇಟಿ

ರಾಜ್ಯದಲ್ಲಿ ಒಮಿಕ್ರಾನ್​ ರೂಪಾಂತರಿ ತಳಿಯನ್ನು BF.7 ಸಮರ್ಥವಾಗಿ ಎದುರಿಸಲು ಆರೋಗ್ಯ ಇಲಾಖೆ ಇಂದು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಿದೆ.

Covid variant BF.7 : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಕ್​ ಡ್ರಿಲ್​: ಹುಬ್ಬಳ್ಳಿಯ ಕಿಮ್ಸ್​ಗೆ ಸುಧಾಕರ್​ ಭೇಟಿ
ಆರೋಗ್ಯ ಸಚಿವ ಸುಧಾಕರ್​
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 27, 2022 | 5:50 PM

ಧಾರವಾಡ: ರಾಜ್ಯದಲ್ಲಿ ಒಮಿಕ್ರಾನ್​ ರೂಪಾಂತರಿ ತಳಿ BF.7 ಭೀತಿ ಉಂಟುಮಾಡಿದೆ. ಈ ರೂಪಾಂತರಿ ತಳಿಯನ್ನು ಎದುರಿಸಲು ಆರೋಗ್ಯ ಇಲಾಖೆ ಇಂದು (ಡಿ. 27) ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ (Karnataka Government Hospitals) ಮಾಕ್ ಡ್ರಿಲ್ (Mock Drile) ನಡೆಸಿದೆ. ಈ ಸಂಬಂಧ ಆರೋಗ್ಯ ಸಚಿವ ಡಾ. ಕೆ ಸುಧಾಕರ (K. Sudhakar) ಇಂದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (KIMS) ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕೊರೊನಾ ರೋಗಿಗಳಿಗಾಗಿ ಕಿಮ್ಸ್​​ನಲ್ಲಿ ಸುಮಾರು 60 ಹಾಸಿಗೆ ಮೀಸಲಿಡಲಾಗಿದೆ. ಸುಮಾರು 200 ವೆಂಟಿಲೇಟರ್ ಇದೆ. ಔಷಧಿ ದಾಸ್ತಾನು ಇದೆ. 40 ಕೆ.ಎಲ್​ನ ಆಕ್ಸಿಜನ್ ಪ್ಲಾಂಟ್ ಇಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಹಾಗೆ ಕಿಮ್ಸ್​​ನಲ್ಲಿ ದೊಡ್ಡ ವೈದ್ಯ ಸಮೂಹ ಇದೆ. ಮೊದಲ ಅಲೆಗಳಲ್ಲಿ ಹುಬ್ಬಳ್ಳಿ ಕಿಮ್ಸ್ ಆರೋಗ್ಯ ಸಂಜೀವಿನಿಯಾಗಿದೆ. ಕಿಮ್ಸ್ ವ್ಯವಸ್ಥೆ ನನಗೆ ಸಮಾಧಾನ ತಂದಿದೆ. ನಮ್ಮ ಜನ ಆತಂಕ ಪಡುವ ಅವಶ್ತಕತೆ ಇಲ್ಲ. ಸರ್ಕಾರ ಸಕಲ ರೀತಿಯಲ್ಲಿ ಸರ್ವ ಸಿದ್ದತೆ ಮಾಡಿಕೊಂಡಿದೆ. ಇದರ ಹೊರತಾಗಿ BF.7 ನಮಗೆ ತೊಂದರೆ ಕೊಟ್ಟರೆ, ನಾವು ಸರಿಯಾದ ಚಿಕಿತ್ಸೆ ಕೊಡುತ್ತೇವೆ ಎಂದರು.

ಹೊಸ ವರ್ಷಕ್ಕೆ ಟಫ್ ರೂಲ್ಸ್​ಗಿಂತ ಟಫ್‌ ಮೈಂಡ್ ಆಗಬೇಕು

ಹೊಸ ವರ್ಷಕ್ಕೆ ಟಫ್ ರೂಲ್ಸ್​ಗಿಂತ ಜನ ಟಫ್‌ ಮೈಂಡೆಡ್​ ಆಗಬೇಕು. ನಮ್ಮ ಜನ ಇದನ್ನು ಎದುರಿಸಿತ್ತೇವೆ ಅನ್ನುವ ಧೃಡ ಸಂಕಲ್ಪ ಮಾಡಬೇಕು. ಜನ ಮುನ್ನೆಚ್ಚರಿಕೆ ವಹಿಸೋಕೆ ಧೃಡ ಸಂಕಲ್ಪ ಮಾಡಬೇಕು. ಅಂತಾರಾಷ್ಟ್ರೀಯ ವಿಮಾನದಲ್ಲಿ ಬರುವವರಿಗೆ ಖಂಡಿತವಾಗಿ ಟೆಸ್ಟ್ ಮಾಡಲಾಗುವುದು‌. ಹೆಚ್ಚು ಪ್ರಕರಣಗಳು ಕಂಡುಬಂದ ದೇಶಗಳಿಂದ ಬರುವವರಿಗೆ ಪರೀಕ್ಷೆ ಮಾಡುತ್ತೇವೆ. ಸಂಖ್ಯೆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಕೆಲವು ಕಡೆ ಸೋಂಕಿತರ ಸಂಖ್ಯೆ ಕೊಡೋದೆ ಇಲ್ಲ. ಆದರೆ ಭಾರತದಲ್ಲಿ ಸಂಖ್ಯೆ ಕೊಡುತ್ತಿದ್ದೇವೆ. ವ್ಯಾಕ್ಸಿನೇಷನ್‌ ಸಮಸ್ಯೆ ಇಲ್ಲ. ಎಲ್ಲರು ಲಸಿಕೆ ಹಾಕಿಸಿಕೊಳ್ಳಬೇಕು. 8.50 ಲಕ್ಷ ಡೋಸ್ ವ್ಯಾಕ್ಸಿನೇಷನ್‌ ಇದೆ ಎಲ್ಲರೂ ಲಸಿಕೆ ತಗೆದುಕೊಳ್ಳಿ ಎಂದು ಮನವಿ ಮಾಡಿದರು.

ಹಾವೇರಿ ಜಿಲ್ಲೆಯಲ್ಲಿ 737 ಆಕ್ಸಿಜನ್ ಬೆಡಗಳು

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ. ಈಗಾಗಲೇ ಜಿಲ್ಲೆಯಲ್ಲಿ 60 ಕಡೆ ಕೋವಿಡ್ ತಪಾಸಣೆ ಕೇಂದ್ರಗಳನ್ನ ಪ್ರಾರಂಭ ಮಾಡಲಾಗಿವೆ. ಜಿಲ್ಲೆಯಲ್ಲಿ 47 ಸಾವಿರ RTPCR, 42 ಸಾವಿರ ರ್ಯಟ್ ತಪಾಸಣೆಯ ಕಿಟ್​ಗಳು ಲಭ್ಯವಿದೆ. ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ಸಕಲ ಸಿದ್ದತೆ ಮಾಡಿಕೊಂಡಿದೆ.

441 ಸಾರ್ವಜನಿಕ ಆಸ್ಪತ್ರೆಗಳಿವೆ. 737 ಆಕ್ಸಿಜನ್ ಬೆಡಗಳು, 71 ಐಸಿಯು ಬೆಡಗಳು, 67 ವೆಂಟಿಲೇಟರ್ ಬೆಡ್​ಗಳು, 123 ಚಿಕ್ಕಮಕ್ಕಳ ಬೆಡ್, 17 ಎನ್.ಐ.ಸಿ.ಯು, 18 ಪಿ.ಐ.ಸಿ.ಯು ಬೆಡಗಳು ಲಭ್ಯವಿದೆ. ಹಾವೇರಿ ಜಿಲ್ಲಾಡಳಿವು ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲಾ ಆಸ್ಪತ್ರೆಯಲ್ಲಿ ಕೊರೋನಾ ತಡೆಗಟ್ಟಲು, ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ಸಿದ್ದತೆ ಮಾಡಿಕೊಂಡಿದೆ.

ಮೈಸೂರಿನಲ್ಲೂ ಕೋವಿಡ್ ಎದುರಿಸಲು ಸಿದ್ದತೆ

ಮೈಸೂರು: ಮೇಟಗಳ್ಳಿಯ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅಮರನಾಥ್‌ರಿಂದ ಸಿದ್ದತೆ ಪರಿಶೀಲನೆ ಮಾಡಿದರು. ಕೊರೊನಾಕ್ಕಾಗಿ ಪ್ರತ್ಯೇಕ ಬೆಡ್ ಮೀಸಲಿಡಲಾಗಿದೆ. ಒಟ್ಟು ಆಮ್ಲಜನಕ ಸಹಿತ ಬೆಡ್‌ಗಳು ಸಿದ್ದವಾಗಿವೆ. ಲ್ಯಾಬ್, ಇಂಜೆಕ್ಷನ್, ಔಷಧಿಗಳನ್ನು ವೈದ್ಯರು ಸಿದ್ಧಪಡಿಸಿದ್ದಾರೆ. ಎರಡು ಆಂಬುಲೆನ್ಸ್ ಲಿಕ್ವಿಡ್ ಆಕ್ಸಿಜ‌ನ್ ಸಂಗ್ರಹ ಟ್ಯಾಂಕ್, ಎರಡು ಆಕ್ಸಿಜನ್ ಜನರೇಷನ್ ಪ್ಲಾಂಟ್ ಸಹಾ ಸಿದ್ದವಿದೆ ಎಂದು ಡಾ ಅಮರನಾಥ್ ಮಾಹಿತಿ ನೀಡಿದರು.

BF.7ಗೆ ಬ್ರೇಕ್ ಹಾಕಲು ಸಿದ್ಧರಾದ ವಿಜಯಪುರದ ವೈದ್ಯರ ತಂಡ

ವಿಜಯಪುರ: ವೈದ್ಯಾಧಿಕಾರಿಗಳು ಇಂದು ಜಿಲ್ಲಾ ಆಸ್ಪತ್ರೆಯಲ್ಲಿಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಎಸ್ ಎಲ್ ಲಕ್ಕಣ್ಣನವರ ನೇತೃತ್ವದಲ್ಲಿ ಮಾಕ್ ಡ್ರಿಲ್ ನಡೆಸಿದರು. ಜಿಲ್ಲಾಸ್ಪತ್ರೆಗಳಲ್ಲಿನ ಬೆಡ್, ವೆಂಟಿಲೇಟರ್, ಐಸಿಯು, ಎನ್ಐಸಿಯು, ಆಕ್ಸಿಜನ್ ಪ್ಲಾಂಟ್, ವೈದ್ಯರ ಹಾಗೂ ಶುಶ್ರೂಷಕರ ಲಭ್ಯತೆ ಪರಿಶೀಲನೆ ಮಾಡಿದರು. ಅಧಿಕಾರಿಗಳು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಕೋಲಾರದಲ್ಲಿ ಐಸಿಯು ಹಾಗೂ ಆಕ್ಸಿಜನ್ ಬೆಡ್​ಗಳ ಪರಿಶೀಲನೆ

ಕೋಲಾರ: ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಅಧಿಕಾರಿಗಳಿಂದ ಮಾಕ್ ಡ್ರಿಲ್ ನಡೆಯಿತು. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ 40 ಐಸಿಯು ಹಾಗೂ 10 NICU ಬೆಡ್​ಗಳು ಸಿದ್ದವಾಗಿವೆ. 250 ಆಕ್ಸಿಜನ್ ಬೆಡ್ ಗಳಿಗಾಗಿ ಸಿದ್ದತೆ ನಡೆಯುತ್ತಿದೆ.

ಕೊರೊನಾ ಕಾಟ ಎದುರಿಸಲು ಉತ್ತರಕನ್ನಡ ಜಿಲ್ಲೆ ಸನ್ನದ್ಧ

ಕಾರವಾರ: ಪ್ರಾರಂಭಿಕ ಹಂತದಲ್ಲಿ 12 ಬೆಡ್‌ಗಳ ಪ್ರತ್ಯೇಕ ಕೊಠಡಿ ಸಿದ್ಧವಾಗಿವೆ. ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಹೊಂದಿರುವ ಕೊಠಡಿ ಆಸ್ಪತ್ರೆ ಆವರಣದಲ್ಲಿ ಸಿದ್ಧ ಪಡಿಸಿಲಾಗಿದೆ. ಜಿಲ್ಲಾಸ್ಪತ್ರೆಯ ಹಿಂಬದಿಯಿರುವ ಮೆಡಿಕಲ್ ಕಾಲೇಜಿನಲ್ಲೂ ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ. 450 ಬೆಡ್‌ಗಳ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 300ಕ್ಕೂ ಹೆಚ್ಚು ಬೆಡ್‌ಗಳು ಕೊರೊನಾ ರೋಗಿಗಳಿಗಾಗಿ ಲಭ್ಯ ವಾಗಿದೆ.

ಮುಂದಿನ‌ ದಿನಗಳಲ್ಲಿ ಹೆಚ್ಚಿನ ಸೋಂಕಿತರು ಕಾಣಿಸಿಕೊಂಡಲ್ಲಿ ಮೆಡಿಕಲ್ ಕಾಲೇಜಿನ ಬೆಡ್‌ಗಳಿಗೆ ಕೊರೊನಾ ಸೋಂಕಿತರನ್ನು ಶಿಫ್ಟ್ ಮಾಡಲಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸೇವೆಗೆ 329ಕ್ಕೂ ಅಧಿಕ ವೈದ್ಯ ಸಿಬ್ಬಂದಿಗಳಿದ್ದಾರೆ. ಒಂದು ಬಾರಿಗೆ 100 ಐಸಿಯು ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿದೆ ವ್ಯವಸ್ಥೆ. ಜ್ವರದ ಲಕ್ಷಣಗಳಿರುವವರಿಗೆ ಕೊರೊನಾ‌ ಟೆಸ್ಟ್ ನಡೆಸುತ್ತಿರುವ ಆರೋಗ್ಯ ಇಲಾಖೆ. ದಿನವೊಂದಕ್ಕೆ ಪ್ರಸ್ತುತ 100 ಪರೀಕ್ಷೆ ನಡೆಸಲಾಗುತ್ತಿದ್ದರೂ, ಕಳೆದ 15 ದಿನಗಳಲ್ಲಿ ಯಾವುದೇ ಪಾಸಿಟಿವ್ ಬಂದಿಲ್ಲ.

ಆರೋಗ್ಯ ಇಲಾಖೆ SARI, ILI ಲಕ್ಷಣ ಇರುವವರಿಗೂ ಆರ್‌ಟಿಪಿಸಿಆರ್ ಟೆಸ್ಟ್ ಮಾಡುತ್ತಿದೆ. ಕೊರೊನಾ ಎದುರಿಸಲು ಆಸ್ಪತ್ರೆಯಲ್ಲಿ 150 ರೆಮ್‌ಡಿಸಿವಿಯರ್ ಔಷಧಿ, ಆಕ್ಸಿಜನ್ ಕಿಟ್‌ಗಳು ಹಾಗೂ ಇತರ ಔಷಧಿಗಳು ಸಂಗ್ರಹವಿದೆ. ಆಕ್ಸಿಜನ್‌ ಪೂರೈಕೆಗೆ ಆಸ್ಪತ್ರೆ ಆವರಣದಲ್ಲೇ 6KL ಆಕ್ಸಿಜನ್ ಟ್ಯಾಂಕ್ ಹಾಗೂ ಆಕ್ಸಿಜನ್ ಪ್ಲ್ಯಾಂಟ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಆಕ್ಸಿಜನ್ ಬೇಡಿಕೆ ಬಂದಲ್ಲಿ ಕುಮಟಾ ಪ್ಲ್ಯಾಂಟ್‌ನಿಂದ ಪೂರೈಕೆಯಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Tue, 27 December 22

Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?