ಚೀನಾದಲ್ಲಿ ಕೊವಿಡ್ ನಾವ್ ಬಿಟ್ಟಿದೀವಾ ಎಂದು ಡಿಕೆ ಶಿವಕುಮಾರ್​ಗೆ ಟಾಂಗ್ ಕೊಟ್ಟ ಸಚಿವ ಅಶ್ವಥ್ ನಾರಾಯಣ್

ಡಿಕೆ ಶಿವಕುಮಾರ್​ಗೆ ಅಧಿಕಾರದ ಹಾಹಾಕಾರ ಹಸಿವು ನಿರಂತರ ಕಾಡ್ತೀದೆ. ಡಿಕೆ ಶಿವಕುಮಾರ್ ಗೆ ರಾಜಕೀಯ ಇಲೆಕ್ಷನ್ ಬಿಟ್ಟು ಏನೂ ಇಲ್ಲ. ಸನ್ಮಾನ್ಯರಿಗೆ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

ಚೀನಾದಲ್ಲಿ ಕೊವಿಡ್ ನಾವ್ ಬಿಟ್ಟಿದೀವಾ ಎಂದು ಡಿಕೆ ಶಿವಕುಮಾರ್​ಗೆ ಟಾಂಗ್ ಕೊಟ್ಟ ಸಚಿವ ಅಶ್ವಥ್ ನಾರಾಯಣ್
ಸಚಿವ ಅಶ್ವಥ್ ನಾರಾಯಣ್
Follow us
| Updated By: ಆಯೇಷಾ ಬಾನು

Updated on:Dec 27, 2022 | 1:03 PM

ಹುಬ್ಬಳ್ಳಿ: ಅವಧಿಗೂ ಮುನ್ನ ಚುನಾವಣೆ ನಡೆಸಲು ಕೊರೊನಾ ಎಂಬ ಹುನ್ನಾರ ನಡೆಸಲಾಗುತ್ತಿದೆ ಎಂಬ ಡಿಕೆ ಶಿವಕುಮಾರ್(DK Shivakumar) ಹೇಳಿಕೆಗೆ ಸಚಿವ ಅಶ್ವಥ್ ನಾರಾಯಣ್(CN Ashwath Narayan) ತಿರುಗೇಟು ಕೊಟ್ಟಿದ್ದಾರೆ. ಚೀನಾದಲ್ಲಿ ಕೊವಿಡ್ ನಾವ್ ಬಿಟ್ಟಿದೀವಾ. ಇದೊಂದು ಸೋಂಕಿನ ಕಾಯಿಲೆ, ಹೊಸ ಹೊಸ ತಳಿ ಮೂಲಕ ಬರ್ತಿದೆ. ಇವರಿಗೆ ರಾಜಕೀಯ ಬಿಟ್ಟು ಬೇರೆ ಏನೂ ಇಲ್ಲ ಎಂದು ಡಿಕೆಶಿ ವಿರುದ್ಧ ಸಚಿವ ಅಶ್ವಥ್ ನಾರಾಯಣ್ ಗರಂ ಆಗಿದ್ದಾರೆ.

ಹುಬ್ಬಳ್ಳಿಯ ಗೋಕುಲ್ ರಸ್ತೆ ಕೈಗಾರಿಕಾ ಪ್ರದೇಶದಲ್ಲಿ ನೂತನ ಕೌಶ್ಯಲ್ಯ ಕೇಂದ್ರ ಉದ್ಘಾಟನೆ ಮಾಡಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಕೊವಿಡ್ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಹೌದು ಇದು ಸೋಂಕಿನ‌ ಕಾಯಿಲೆ. ನಾವು ಮುನ್ನೆಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ಡಿಕೆ ಶಿವಕುಮಾರ್​ಗೆ ಅಧಿಕಾರದ ಹಾಹಾಕಾರ ಹಸಿವು ನಿರಂತರ ಕಾಡ್ತೀದೆ. ಡಿಕೆ ಶಿವಕುಮಾರ್ ಗೆ ರಾಜಕೀಯ ಇಲೆಕ್ಷನ್ ಬಿಟ್ಟು ಏನೂ ಇಲ್ಲ. ಸನ್ಮಾನ್ಯರಿಗೆ ಜನರ ಬಗ್ಗೆ ಕಾಳಜಿ ಇಲ್ಲ, ನಾವು ಯಾವಾಗ ಅಧಿಕಾರಕ್ಕೆ ಬರ್ತೀವಿ ಅನ್ನೋ ಹಾಹಾಕಾರ. ಅಧಿಕಾರ ತಪ್ಪಿ ಹೋಗಿರೋದಕ್ಕೆ ಅವರಿಗೆ ಸಂಕಟ ಆಗ್ತಿದೆ. ಅಧಿಕಾರ ಪಡೆಯೋದಕ್ಕೆ ಕೋವಿಡ್ ನೆಪದಲ್ಲಿ ಅವಧಿಪೂರ್ವ ಚುನಾಚಣೆ ಅಂತ್ತಿದ್ದಾರೆ. ಅವರಿಗೆ ಅವರ ಅಭಿವೃದ್ಧಿ, ಕಾಂಗ್ರೆಸ್ ಅಭಿವೃದ್ಧಿ ಮುಖ್ಯ. ಕೊವಿಡ್ ಬಗ್ಗೆ ಸನ್ಮಾನ್ಯರು ಅನುಮಾನ ಪಡೋದು ಬೇಡ ಎಂದು ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಮಹಿಳೆಯ ಜೀವ ಉಳಿಸಿದ ಏರ್ ಇಂಡಿಯಾ ಸಿಬ್ಬಂದಿ ಮತ್ತು ಪ್ರಯಾಣಿಕರು

ಉದ್ಧವ್ ಠಾಕ್ರೆ ಗೆ ಅಶ್ವಥ್ ನಾರಾಯಣ್ ತಿರುಗೇಟು

ಇನ್ನು ಇದೇ ವೇಳೆ ಕೇಂದ್ರಾಡಳಿತ ಪ್ರದೇಶ ಮಾಡಬೇಕು ಅನ್ನೋ ಹೇಳಿಕೆಗೆ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ. ಮುಂಬೈನಲ್ಲಿ ಎಷ್ಟು ಮರಾಠಿಗರಿದ್ದಾರೆ ಎಂದು ಕೇಳಿದ್ರೆ ಅವರಿಗೆ ಸಮಸ್ಯೆ. ಅವರು ಮಾತಾಡೋವಾಗ ಸ್ವಲ್ಪ ಆಲೋಚನೆ ಮಾಡಬೇಕು. ಹೀಗೆ ಪದೇ ಪದೇ ಮಾತಾಡಿ ಜನರ ಭಾವನೆಗೆ ಧಕ್ಕೆ ತರೋ ಕೆಲಸ‌ ಮಾಡ್ತೀದಾರೆ. ಇದೆಲ್ಲ ರಾಜಕೀಯ ಪ್ರೇರಿತ. ಅಧಿಕಾರದಲ್ಲಿದ್ದಾಗ ಜನರಿಗೆ ಏನೂ ಮಾಡಲ್ಲ, ತಮ್ಮ ಸ್ವಾರ್ಥಕ್ಕೆ ಬೇಡವಾದ ಕೆಲಸ ಮಾಡ್ತಾರೆ. ಇವರೆಲ್ಲ ನಮ್ಮ ಸಮಾಜಕ್ಕೆ ಸಮಸ್ಯೆ. ಇವರು ತಿಳುವಳಿಕೆ ಹೆಚ್ಚಿಸಿಕೊಳ್ಳಬೇಕು ಎಂದ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ರು.

ಒಕ್ಕಲಿಗರ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅಶ್ವಥ್ ನಾರಾಯಣ್, ಇವರು ಅಧಿಕಾರದಲ್ಲಿ ಇದ್ದಾಗ ಯಾಕೆ ನೆನಪಾಗಲಿಲ್ಲ. ಅವರು ಮೂಗಿಗೆ ತುಪ್ಪ ಸವರೋ ಕೆಲಸ ಮಾಡಿದ್ರು. ನಾವು ಮೂಗಿಗೆ ತುಪ್ಪ ಸವರಲ್ಲ, ಬಾಯಿಗೆ ಕೊಡ್ತೀವಿ. ಮೋಸ ಮಾಡೋದು, ರಾಜಕೀಯ ಮಾಡೋದು, ತುಷ್ಟೀಕರಣ ಮಾಡೋದು ಕಾಂಗ್ರೆಸ್ ಸಂಸ್ಕೃತಿ. ನಾವು ಸಮಾಜದ ಅಭಿವೃದ್ಧಿ ಬಯಸೋರು ಎಂದ ಟಾಂಗ್ ಕೊಟ್ಟಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:03 pm, Tue, 27 December 22

‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ