ನನ್ನ ಮಗನಿಗೆ ಹೃದಯಾಘಾತ ಆಗಿಲ್ಲ, ಇದು ಕೊಲೆ?: ಬಾಬಾಜಾನ್ ಸಾವಿಗೆ ಬಿಗ್ ಟ್ವಿಸ್ಟ್, ಹೂತಿದ್ದ ಶವವನ್ನು ಹೊರತೆಗೆದ ಅಧಿಕಾರಿಗಳು
2025 ನವೆಂಬರ್ 11 ರಂದು ಹೃದಯಾಘಾತದಿಂದ ಸಾವನ್ನಪ್ಪಿದ ಬಾಬಾಜಾನ್ ಚಿನ್ನೂರು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೋಷಕರು ಸೊಸೆಯ ವಿರುದ್ಧ ಕೊಲೆಯ ಆರೋಪ ಮಾಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಭದ್ರಾಪುರದಲ್ಲಿ ಹೂತಿದ್ದ ಶವವನ್ನು ಹೊರತೆಗೆಯಲಾಗಿದೆ. ಮರಣೋತ್ತರ ವರದಿ ಬಂದ ನಂತರ ಇದು ಕೊಲೆಯೋ ಅಥವಾ ಹೃದಯಾಘಾತವೋ ಎಂಬುದು ಬಹಿರಂಗವಾಗಲಿದ್ದು, ಸತ್ಯ ತಿಳಿಯಲು ತನಿಖೆ ಮುಂದುವರಿದಿದೆ.

ಧಾರವಾಡ, ಜ.21: 2025 ನವೆಂಬರ್ 11 ರಂದು ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರದಲ್ಲಿ ಬಾಬಾಜಾನ್ (Baba Jan )ಚಿನ್ನೂರು(51) ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಯವರು ಇದು ಹೃದಯಾಘಾತವಲ್ಲ, ಕೊಲೆ ಎಂದು ಹೇಳಿದರು. ಇದೀಗ ಹೂತಿದ್ದ ಬಾಬಾಜಾನ್ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಮುಚ್ಚಿ ಹೋಗಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
NWKSRTC (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಯಲ್ಲಿ ಡ್ರೈವರ್ ಆಗಿದ್ದ ಬಾಬಾಜಾನ್ ಅವರು, ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆಗೆ ಸಂತೋಷದ ಜೀವನ ನಡೆಸುತ್ತಿದ್ದರು. ನವೆಂಬರ್ 11ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಾಬಾಜಾನ್ ಅವರ ಮೃತ ದೇಹವನ್ನು ಸ್ವಗ್ರಾಮ ಭದ್ರಾಪುರಕ್ಕೆ ತಂದು ಕುಟುಂಬ ತರಾತುರಿಯಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಅದಾದ ಬಳಿಕ ಸೊಸೆಯೇ ತಮ್ಮ ಮಗನ್ನು ಹತ್ಯೆ ಮಾಡಿದ್ದಾಳೆ ಎಂದು ಬಾಬಾಜಾನ್ ಅವರ ಪೋಷಕರು ದೂರಿದ್ದಾರೆ. ಯಾವುದೋ ದುರುದ್ದೇಶದಿಂದ ಮಗನ ಹತ್ಯೆ ಆಗಿದೆ ಎಂದು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮದ್ವೆಗೂ ಮುಂಚೆ ಪ್ರಗ್ನೆಂಟ್, ಹುಟ್ಟಿದಾಕ್ಷಣ ಹಸುಗೂಸು ಸಾವು:ಸಾವಿನ ಸುತ್ತ ಅನುಮಾನದ ಹುತ್ತ
ನಮ್ಮ ಮಗ ಸತ್ತ ನಂತರ ಅವನ ಮರಣೋತ್ತರ ಪರೀಕ್ಷೆ ಮಾಡಿಲ್ಲ, ಯಾವ ಕಾರಣಕ್ಕೆ ಮಾಡಿಲ್ಲ ಎಂಬುದು ತಿಳಿಯಬೇಕು. ಅವನಿಗೆ ನಿಜವಾಗಿಯೂ ಹೃದಯಾಘಾತ ಆಗಿದ್ದೀಯಾ? ಎಂಬುದು ತಿಳಿಯಬೇಕು. ಇದರ ಹಿಂದೆ ನಮ್ಮ ಸೊಸೆಯ ಕೈವಾಡ ಇದೆ ಎಂದು ಬಾಬಾಜಾನ್ ಅವರ ಹೆತ್ತವರ ಆರೋಪವಾಗಿದೆ. ಈ ಕಾರಣದಿಂದ ಎಸ್ಪಿಗೆ ದೂರು ನೀಡಿದ್ದಾರೆ. ಇದೀಗ ತಹಶೀಲ್ದಾರ್ ನೇತೃತ್ವದಲ್ಲಿ ಮತ್ತೆ ಮರಣೋತ್ತರ ಪರೀಕ್ಷೆಗಾಗಿ ಭದ್ರಾಪುರದ ಸ್ಮಶಾನದಲ್ಲಿ ಹೂತಿದ್ದ ಬಾಬಾಜಾನ್ ಶವವನ್ನು ಹೊರತೆಗೆಯಲಾಗಿದೆ. ಈ ಪರೀಕ್ಷೆಯ ನಂತರ ಇದು ಕೊಲೆಯೋ ಅಥವಾ ಹೃದಯಾಘಾತವೋ ಎಂಬುದು ತಿಳಿಯಲಿದೆ. ಮರಣೋತ್ತರ ನಂತರ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಹೂತಿದ್ದ ಬಾಬಾಜಾನ್ ಶವವನ್ನು ಹೊರತೆಗೆಯುವ ಪ್ರಕ್ರಿಯೆಗಳು ಈಗಾಗಲೇ ಮುಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿಲಾಗಿದೆ ಎಂದು ಹೇಳಲಾಗಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
