ಧಾರವಾಡ: 15 ದಿನಗಳಲ್ಲಿ ಎಸ್​ಡಿಎಮ್​ ಆಸ್ಪತ್ರೆಗೆ ಹೋಗಿ ಬಂದವರಿಗೆ ಕೊರೊನಾ ಪರೀಕ್ಷೆ ಮಾಡಲು ನಿರ್ಧಾರ

ಗದಗ ಜಿಲ್ಲೆಯ ರೋಗಿಗಳ ಪಟ್ಟಿಯನ್ನು ನೀಡುವಂತೆ ಮನವಿ ಮಾಡಲಾಗಿದೆ. ಮಾಹಿತಿ ಬಂದ ತಕ್ಷಣ ರೋಗಿಗಳ ಸಂಬಂಧಿಕರ ಟೆಸ್ಟಿಂಗ್ ನಡೆಸಲಾಗುತ್ತದೆ. ರೋಗಿಯ ಸಂಬಂಧಿಕರ ಕೊರೊನಾ ಟೆಸ್ಟ್‌ಗೆ ಸೂಚನೆ ಕೊಡಲಾಗಿದೆ ಎಂದು ಗದಗ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಬಸರಿಗಿಡ ಮಾಹಿತಿ ನೀಡಿದ್ದಾರೆ.

ಧಾರವಾಡ: 15 ದಿನಗಳಲ್ಲಿ ಎಸ್​ಡಿಎಮ್​ ಆಸ್ಪತ್ರೆಗೆ ಹೋಗಿ ಬಂದವರಿಗೆ ಕೊರೊನಾ ಪರೀಕ್ಷೆ ಮಾಡಲು ನಿರ್ಧಾರ
ಪ್ರಾತಿನಿಧಿಕ ಚಿತ್ರ

ಧಾರವಾಡ: ಇಲ್ಲಿನ ಎಸ್​ಡಿಎಮ್​ ಆಸ್ಪತ್ರೆಯಲ್ಲಿ ಕೊರೊನಾ ಸ್ಫೋಟ ಹಿನ್ನೆಲೆ ಆಸ್ಪತ್ರೆಗೆ ಹೋಗಿ ಬಂದವರಿಗೆ ಕೊರೊನಾ ಪರೀಕ್ಷೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ 15 ದಿನಗಳಿಂದ ಚಿಕಿತ್ಸೆಗೆ ಹೋಗಿ ಬಂದವರಿಗೆ ಟೆಸ್ಟ್ ಮಾಡಬೇಕಿದೆ. ಈ ಬಗ್ಗೆ, ಗದಗ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಧಾರವಾಡ ಜಿಲ್ಲಾ ಸರ್ವಲೆನ್ಸ್ ವಿಭಾಗದಿಂದ ಮಾಹಿತಿ ಸಂಗ್ರಹ ಮಾಡಲಾಗಿದೆ. ಗದಗ ಜಿಲ್ಲೆಯ ರೋಗಿಗಳ ಪಟ್ಟಿಯನ್ನು ನೀಡುವಂತೆ ಮನವಿ ಮಾಡಲಾಗಿದೆ. ಮಾಹಿತಿ ಬಂದ ತಕ್ಷಣ ರೋಗಿಗಳ ಸಂಬಂಧಿಕರ ಟೆಸ್ಟಿಂಗ್ ನಡೆಸಲಾಗುತ್ತದೆ. ರೋಗಿಯ ಸಂಬಂಧಿಕರ ಕೊರೊನಾ ಟೆಸ್ಟ್‌ಗೆ ಸೂಚನೆ ಕೊಡಲಾಗಿದೆ ಎಂದು ಗದಗ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಬಸರಿಗಿಡ ಮಾಹಿತಿ ನೀಡಿದ್ದಾರೆ.

ಕೇರಳದಿಂದ ಬಂದಿದ್ದ 15 ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿದೆ. ಸಿದ್ದಗಂಗಾ, ವರದರಾಜ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಒಟ್ಟು 15 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ಎಲ್ಲಾ ವಿದ್ಯಾರ್ಥಿಗಳನ್ನ ಕ್ವಾರಂಟೈನ್ ಮಾಡಲಾಗಿದೆ. 15 ವಿದ್ಯಾರ್ಥಿಗಳ ಸ್ಯಾಂಪಲ್ಸ್​ ಬೆಂಗಳೂರಿಗೆ ಕಳುಹಿಸಲಾಗಿದೆ. ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಲ್ಯಾಬ್​ಗೆ ರವಾನಿಸಲಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

ಬೆಳಗಾವಿಯಲ್ಲಿರುವ ಖಾಸಗಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಪತ್ತೆಯಾಗಿದೆ. ಬಿಹಾರ ಮೂಲದ ಇಬ್ಬರು ವಿದ್ಯಾರ್ಥಿನಿಯರಿಗೆ ಸೋಂಕು ಕಂಡುಬಂದಿದೆ. ಅಂತಿಮ ವರ್ಷದ ಇಬ್ಬರು ವಿದ್ಯಾರ್ಥಿನಿಯರಿಗೆ ಕೊರೊನಾ ದೃಢವಾಗಿದೆ. ಸೋಂಕಿತ ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ. ವಾರದ ಹಿಂದಷ್ಟೇ ಬೆಳಗಾವಿಗೆ ಬಂದಿದ್ದ ವಿದ್ಯಾರ್ಥಿನಿಯರು ಕೊರೊನಾ ಸೋಂಕಿತರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ನಮ್ಮ ರಾಜ್ಯದಲ್ಲಿ ಒಮಿಕ್ರಾನ್ ಬಂದು ಆತಂಕ ಹೆಚ್ಚಾಗಿದೆ. ಪಕ್ಕರಾಜ್ಯಗಳಾದ ಮಹಾರಾಷ್ಟ್ರ,ಕೇರಳದಲ್ಲಿ ಆತಂಕ ಹೆಚ್ಚಿದ್ದು, ಬೆಳಗಾವಿ ಅಧಿವೇಶನ ಬಗ್ಗೆ ಮೊತ್ತೊಮ್ಮೆ ಸಿಎಂ ಪರಿಶೀಲಿಸಿಲಿ. ನೌಕರರಿಗೆ, ಅಧಿಕಾರಿಗಳಿಗೆ, ಶಾಸಕರಿಗೆ ಅನುಕೂಲ ಆಗಲಿದೆ. ಅಧಿವೇಶನದ ಮರುಪರಿಶೀಲನೆಯಿಂದ ಅನುಕೂಲವಾಗಲಿದೆ ಎಂದು ವಿಧಾನಸೌಧದಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಪೋಷಕರ ಕಾಡುತಿದೆ ಮೂರನೇ ಅಲೆ ಕೊರೊನಾ, ಒಮಿಕ್ರಾನ್ ಭೀತಿ; ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು

ಇದನ್ನೂ ಓದಿ: ಕೊರೊನಾ 3ನೆಯ ಅಲೆ ಮುನ್ನೆಲೆ ಸರ್ಕಾರದ ಮುಂದೆ ಲಾಕ್‌ಡೌನ್ ಪ್ರಸ್ತಾವನೆ ಇಲ್ಲ -ಸಚಿವ ಡಾ. ಕೆ. ಸುಧಾಕರ್

Click on your DTH Provider to Add TV9 Kannada