ಪೋಷಕರ ಕಾಡುತಿದೆ ಮೂರನೇ ಅಲೆ ಕೊರೊನಾ, ಒಮಿಕ್ರಾನ್ ಭೀತಿ; ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು

ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಪೋಷಕರಲ್ಲಿ ಹೆಚ್ಚಿದ ಆತಂಕ ಉಂಟಾಗಿದೆ. ರಾಜ್ಯದ ಎಲ್ಲಾ ಕಡೆ ಅಂಗನವಾಡಿಯಿಂದ ಕಾಲೇಜ್ ವರೆಗೂ ಶಾಲಾ ಕಾಲೇಜು ಆರಂಭವಾಗಿದೆ. ಮಕ್ಕಳು ಕಳೆದ ಎರಡು ತಿಂಗಳಿನಿಂದ ಶಾಲೆಗೆ ಹೋಗುತ್ತಾ ಇದ್ದಾರೆ.

ಪೋಷಕರ ಕಾಡುತಿದೆ ಮೂರನೇ ಅಲೆ ಕೊರೊನಾ, ಒಮಿಕ್ರಾನ್ ಭೀತಿ; ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು
ವಿದ್ಯಾರ್ಥಿನಿಗೆ ಕೊವಿಡ್​ 19 ಪರೀಕ್ಷೆ ನಡೆಸುತ್ತಿರುವ ಸಿಬ್ಬಂದಿ
Follow us
TV9 Web
| Updated By: ಆಯೇಷಾ ಬಾನು

Updated on:Nov 30, 2021 | 11:03 AM

ಬೆಂಗಳೂರು: ಮಹಾಮಾರಿ ಕೊರೊನಾ 3ನೇ ಅಲೆ ಜೊತೆಗೆ ಒಮಿಕ್ರೋನ್ ಜನರನ್ನು ಆತಂಕದಲ್ಲಿ ಮುಳುಗುವಂತೆ ಮಾಡಿದೆ. ಅದರಲ್ಲೂ ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕೊರೊನಾ ಪತ್ತೆಯಾಗುತ್ತಿರುವುದು ದುಪ್ಪಟ್ಟು ಆತಂಕ ಹೆಚ್ಚಿಸಿದೆ. ಕೊರೊನಾ ಹೊಸ ತಳಿ ಪತ್ತೆಯಿಂದ ಪೋಷಕರು ಪುಲ್ ಟೆನ್ಷನ್ ಆಗಿದ್ದಾರೆ.

ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಪೋಷಕರಲ್ಲಿ ಹೆಚ್ಚಿದ ಆತಂಕ ಉಂಟಾಗಿದೆ. ರಾಜ್ಯದ ಎಲ್ಲಾ ಕಡೆ ಅಂಗನವಾಡಿಯಿಂದ ಕಾಲೇಜ್ ವರೆಗೂ ಶಾಲಾ ಕಾಲೇಜು ಆರಂಭವಾಗಿದೆ. ಮಕ್ಕಳು ಕಳೆದ ಎರಡು ತಿಂಗಳಿನಿಂದ ಶಾಲೆಗೆ ಹೋಗುತ್ತಾ ಇದ್ದಾರೆ. ಆದ್ರೆ ಈಗ ಮತ್ತೆ ಹೊಸ ತಳಿ ಪತ್ತೆಯಿಂದ ಪೋಷಕರು ಶಾಲೆಗೆ ಮಕ್ಕಳನ್ನ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳಿಗೆ ವ್ಯಾಕ್ಸಿನ್ ಆಗಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕೊರೊನೊ ಮೂರನೇ ಅಲೆಯ ಆತಂಕದಿಂದ ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳನ್ನ ಶಾಲೆಗೆ ಕಳಿಸಲು ಪೋಷಕರು ಮುಂದಾಗುತ್ತಿಲ್ಲ. ಆದ್ರೆ ಶಾಲೆ ಆರಂಭವಾಗಿ ಮೂರು ತಿಂಗಳು ಕಳೆದಿಲ್ಲ. ಶಾಲೆ ಮುಚ್ಚಲ್ಲ ಎಂದು ಶಿಕ್ಷಣ ಸಚಿವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದರ ನಡುವೆ ಮಕ್ಕಳ ಭವಿಷ್ಯದ ಚಿಂತೆ ಕಾಡುತ್ತಿದೆ. ಸದ್ಯ ಶಾಲಾ ಕಾಲೇಜು ಬಂದ್ ಮಾಡುವ ಯವುದೇ ನಿರ್ಧಾರ ಶಿಕ್ಷಣ ಇಲಾಖೆ ಮುಂದಿಲ್ಲ. ಕೊರೊನಾ ಏರಿಕೆಯಾದ್ರೆ ಸರ್ಕಾರದ ಮಾಹಿತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತೆ. ಆರೋಗ್ಯ ಇಲಾಖೆಯ ಜೊತೆ ಶಿಕ್ಷಣ ಇಲಾಖೆ ಮಾರ್ಗದರ್ಶನದಲ್ಲಿದೆ. ಆದ್ರೂ ಪೋಷಕರು ಮಕ್ಕಳನ್ನ ಮತ್ತೆ ಶಾಲೆಗೆ ಕಳಿಸಲು ಭಯ ಪಡುತ್ತಿದ್ದಾರೆ.

ಪೋಷಕರ ಆತಂಕ ಏನು? ಮಕ್ಕಳಿಗೇ ಮೂರನೇ ಅಲೆ ಬರುತ್ತೆ ಅನ್ನೊ ಭಯದಲ್ಲಿ ಸದ್ಯ ಪೋಷಕರು ದಿನ ಕಳೆಯುತ್ತಿದ್ದಾರೆ. ಅಲ್ಲದೆ ಮಕ್ಕಳಿಗೆ ಇನ್ನು ವ್ಯಾಕ್ಸಿನ್ ಲಭ್ಯವಾಗಿಲ್ಲ, ಇದರಿಂದ ಮಕ್ಕಳು ಅಪಾಯದಲ್ಲಿದ್ದಾರೆ. ಸದ್ಯದ ವಾತಾವರಣದಿಂದ ಮಕ್ಕಳಲ್ಲಿ ವೈರಲ್ ಜ್ವರ, ನೆಗಡಿ, ಕೆಮ್ಮು ಕಿರಿಕಿರಿ ಇದೆ. ಮಕ್ಕಳಿಂದ ಮನೆ ಮನೆಗೂ ಕೊರೊನಾ ಹರಡುವ ಆತಂಕ ಇದೆ. ಅಲ್ಲದೆ ಮಕ್ಕಳಿಗೆ ಕೊರೊನಾ ಮಾರ್ಗಸೂಚಿ ಪಾಲನೆ ಕಷ್ಟ. ಶಾಲೆಯಲ್ಲಿ ಒಂದು ಮಗುವಿಗೆ ಕೊರೊನಾ ಬಂದ್ರು ಕಂಪ್ಲೀಟ್ ಶಾಲೆ ಮಕ್ಕಳಿಗೆ ಹರಡುವ ಭಯ ಇದೆ. ಮಕ್ಕಳಿಲ್ಲಿ ಸದ್ಯ ವೈರಲ್ ಇನ್ಫೆಕ್ಷನ್, ಡೆಂಘೀ ಜ್ವರ ಕಾಣಿಸಿಕೊಳ್ಳುತ್ತಿದೆ. ಮಕ್ಕಳು ಶಾಲೆಯಲ್ಲಿ ಮಾಸ್ಕ್ ಸರಿಯಾಗಿ ಹಾಕಲ್ಲ, ಸಾಮಾಜಿಕ ಅಂತರ ಕಷ್ಟ ಎಂಬುವುದು ಪೋಷಕರನ್ನು ಕಾಡುತ್ತಿರುವ ಭಯ.

ಕೆಂಪೇಗೌಡ ಏರ್ಪೋಟ್ ನಲ್ಲಿ ಮತ್ತಷ್ಟು ಮುಂಜಾಗ್ರತಾ ಕ್ರಮ ಕೆಂಪೇಗೌಡ ಏರ್ಪೋಟ್ನಲ್ಲಿ ಈಗಾಗಲೆ ಮೂರು ಪಾಳಯದಲ್ಲಿ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಈಗಾಗಲೆ ಒಂದು ಪಾಳಯಕ್ಕೆ 10 ಜನರಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ನಾಳೆಯಿಂದ 15 ರಿಂದ 20 ಜನರಷ್ಟು ಸಿಬ್ಬಂದಿಯನ್ನ ಹೆಚ್ಚಳ ಮಾಡಲಾಗುತ್ತಿದೆ. ಹೊಸ ರೂಪಾಂತರಿ ಒಮಿಕ್ರೋನ್ ಆತಂಕ ಹಿನ್ನೆಲೆ, ನಾಳೆಯಿಂದ ಕೆಂಪೇಗೌಡ ಏರ್ಪೋಟ್ನಲ್ಲಿ ಮತ್ತಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಹೈರಿಸ್ಕ್ ದೇಶಗಳು ಸೇರಿದಂತೆ ವಿವಿಧ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲರಿಗೂ ಕಡ್ಡಾಯ ಆರ್ಟಿಪಿಸಿಆರ್ ಟೆಸ್ಟ್, 12 ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ಟೆಸ್ಟಿಂಗ್ ನಡೆಸಿ ಡಾಟಾ ಎಂಟ್ರಿ ಮಾಡಲು ಸಿಬ್ಬಂದಿಯ ಹೆಚ್ಚಳ ಮಾಡಲಾಗುತ್ತಿದೆ. ಟರ್ಮಿನಲ್ ಒಳ ಭಾಗದಲ್ಲಿ ಅಧಿಕಾರಿಗಳು ಸಿಬ್ಬಂದಿಯನ್ನ ಹೆಚ್ಚಿಸಲಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಆಕ್ರೋಶ ಏರ್​​ಪೋರ್ಟ್​​ನಲ್ಲಿ ಪ್ರಯಾಣಿಕರಿಗೆ ವರದಿ ಕಡ್ಡಾಯ ಹಿನ್ನೆಲೆ ವಿದೇಶ, ಅಂತಾರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ಏರ್​ಪೋರ್ಟ್​​ನಲ್ಲಿ ಟೆಸ್ಟಿಂಗ್​ ದರ ಹೆಚ್ಚು ಇದೆ. ಟೆಸ್ಟ್​ಗೆ 3 ಸಾವಿರ ಅಂದ್ರೆ ಎಲ್ಲಿಂದ ತರುವುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಟೆಸ್ಟಿಂಗ ದರ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಇನ್ನು ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. 2 ದಿನಗಳಿಂದ ಬೆಂಗಳೂರಿಂದ ಹೋಗುವ, ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 257 ಜನರಿಗೆ ಕೊರೊನಾ ದೃಢ; 5 ಮಂದಿ ಸಾವು

Published On - 9:01 am, Tue, 30 November 21