ಬರದ ನಡುವೆಯೂ ಈರುಳ್ಳಿ ಬೆಳೆದು ಕೋಟಿ ಆದಾಯ! ಧಾರವಾಡದ ರೈತ ಕುಟುಂಬದ ಯಶೋಗಾಥೆ

ಧಾರವಾಡದ ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದಲ್ಲಿ ರೂಗಿ ಕುಟುಂಬ 40 ಎಕರೆಯಲ್ಲಿ ಈರುಳ್ಳಿ ಬೆಳೆದು ಗಮನ ಸೆಳೆದಿದೆ. ಸುಮಾರು 2,500 ಕ್ವಿಂಟಾಲ್ ಈರುಳ್ಳಿ ಮಾರಾಟದಿಂದ ಒಂದು ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಕಳೆದ ವರ್ಷದ ನಷ್ಟದ ಬಳಿಕ ಈ ಬಾರಿಯ ಯಶಸ್ಸು ಸಂತಸ ತಂದಿದೆ.

ಬರದ ನಡುವೆಯೂ ಈರುಳ್ಳಿ ಬೆಳೆದು ಕೋಟಿ ಆದಾಯ! ಧಾರವಾಡದ ರೈತ ಕುಟುಂಬದ ಯಶೋಗಾಥೆ
ಈರುಳ್ಳಿ
Edited By:

Updated on: Nov 02, 2026 | 2:11 PM

ಮುಖ್ಯಾಂಶಗಳು

  • 40 ಎಕರೆಯಲ್ಲಿ ಭರ್ಜರಿ ಈರುಳ್ಳಿ ಬೆಳೆ
  • 2,500 ಕ್ವಿಂಟಾಲ್ ಈರುಳ್ಳಿ ಮಾರುಕಟ್ಟೆಗೆ ಸಾಗಣೆ
  • ರೂಗಿ ಕುಟುಂಬಕ್ಕೆ ಸುಮಾರು ಒಂದು ಕೋಟಿ ರೂ. ಆದಾಯ

ಧಾರವಾಡ, ನವೆಂಬರ್ 2: ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂಗಾರು ಹಂಗಾಮು ಆರಂಭವಾಗಿದ್ದರೂ ಮಳೆ ಕೊರತೆಯ ಆತಂಕ ರೈತರನ್ನು ಕಾಡುತ್ತಿದೆ. ಇಂತಹ ಪರಿಸ್ಥಿತಿಯ ನಡುವೆಯೇ ಧಾರವಾಡ ಜಿಲ್ಲೆಯ ರೈತ ಕುಟುಂಬವೊಂದು ಈರುಳ್ಳಿ ಬೆಳೆಯ ಮೂಲಕ ಉತ್ತಮ ಆದಾಯ ಗಳಿಸಿ ಗಮನ ಸೆಳೆದಿದೆ. ಕಣ್ಣಿಗೆ ಕಂಡಷ್ಟು ತೆಳು ಕೆಂಪು ಬಣ್ಣದ ಈರುಳ್ಳಿ ಗಡ್ಡೆಗಳು, ಗೋದಾಮಿನಲ್ಲಿ ಸಾಲು ಸಾಲಾಗಿ ತುಂಬಿರುವ ಈರುಳ್ಳಿ ಚೀಲಗಳು, ಬಿಸಿಲಿನಲ್ಲಿ ಈರುಳ್ಳಿ ಒಣಗಿಸುತ್ತಿರುವ ಕಾರ್ಮಿಕರು ಹಾಗೂ ಉತ್ತಮ ಗುಣಮಟ್ಟದ ಗಡ್ಡೆಗಳನ್ನು ಬೇರ್ಪಡಿಸುತ್ತಿರುವ ದೃಶ್ಯಗಳು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದಲ್ಲಿ ಕಂಡುಬರುತ್ತಿವೆ.

ಗ್ರಾಮದ ರೂಗಿ ಕುಟುಂಬದವರು ಈ ಬಾರಿ ಸುಮಾರು 40 ಎಕರೆಯಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಉತ್ತಮ ಫಸಲು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಕಟಾವು ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈರುಳ್ಳಿಗೆ ಉತ್ತಮ ಬೆಲೆ ದೊರೆತಿರುವುದರಿಂದ ಕುಟುಂಬದವರು ಸುಮಾರು 2,500 ಕ್ವಿಂಟಾಲ್ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸಿದ್ದು, ಇದರಿಂದ ಸುಮಾರು ಒಂದು ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ.

ಕಳೆದ ವರ್ಷದ ನಷ್ಟದ ನಡುವೆಯೂ ಮತ್ತೆ ಈರುಳ್ಳಿ ಬೆಳೆ

ಕಳೆದ ವರ್ಷವೂ ರೂಗಿ ಕುಟುಂಬ ಇದೇ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿತ್ತು. ಆದರೆ ಅಂದು ಸೂಕ್ತ ಬೆಲೆ ದೊರೆಯದಿರುವುದು ಹಾಗೂ ಅತಿವೃಷ್ಟಿಯಿಂದಾಗಿ ಬೆಳೆ ನಷ್ಟವಾಗಿತ್ತು. ಆದರೂ ಈ ಬಾರಿ ಈರುಳ್ಳಿ ಬೆಳೆಯಿಂದ ಹಿಂದೆ ಸರಿಯದೆ ಮತ್ತೆ ಅದೇ ಸುಮಾರು 40 ಎಕರೆಯಲ್ಲಿ ಬೆಳೆ ಬೆಳೆಸಿದ್ದಾರೆ.

ರಾಜ್ಯದ ಹಲವು ಭಾಗಗಳಲ್ಲಿ ಬರದಿಂದ ರೈತರು ಸಂಕಷ್ಟ ಎದುರಿಸುತ್ತಿರುವ ನಡುವೆಯೂ, ಸೊಟಕನಾಳ ಗ್ರಾಮದ ರೈತರು ಈರುಳ್ಳಿ ಬೆಳೆಯಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಈ ಗ್ರಾಮದಲ್ಲಿ ಅನೇಕ ರೈತರು ಈರುಳ್ಳಿಯನ್ನು ಪ್ರಮುಖ ಬೆಳೆಯಾಗಿ ಬೆಳೆಸುತ್ತಿದ್ದು, ಈ ಬಾರಿ ಹಲವರಿಗೆ ಉತ್ತಮ ಲಾಭ ದೊರೆಯುತ್ತಿದೆ. ಇನ್ನೂ ಹೊಲಗಳಲ್ಲಿ ಸಾಕಷ್ಟು ಫಸಲು ಉಳಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆದಾಯದ ನಿರೀಕ್ಷೆಯಿದೆ.

Dharwad Farmers Earn Rs 1 Crore from Onion Farming Despite Drought in Karnataka

ಸೊಟಕನಾಳ ಗ್ರಾಮಸ್ಥರು ಹಲವು ವರ್ಷಗಳಿಂದ ಈರುಳ್ಳಿ ಬೆಳೆಯನ್ನು ಬೆಳೆಸುತ್ತಾ ಬಂದಿದ್ದಾರೆ. ರೂಗಿ ಕುಟುಂಬಕ್ಕೆ ಈರುಳ್ಳಿಯೇ ಪ್ರಮುಖ ಬೆಳೆಯಾಗಿದ್ದು, ಇದರ ಜೊತೆಗೆ ಗೋಧಿ, ಹೆಸರು ಸೇರಿದಂತೆ ಇತರ ಬೆಳೆಗಳನ್ನೂ ಬೆಳೆಯುತ್ತಾರೆ. ಆದರೆ ಪ್ರತಿವರ್ಷ ಕುಟುಂಬದ ಕೃಷಿ ಬದುಕಿಗೆ ಆಸರೆಯಾಗುತ್ತಿರುವ ಪ್ರಮುಖ ಬೆಳೆಯಾಗಿ ಈರುಳ್ಳಿ ಉಳಿದಿದೆ.

ಇದನ್ನೂ ಓದಿ: ಈರುಳ್ಳಿ ತಾಜಾವಾಗಿದೆಯೇ ಅಥವಾ ಒಳಗಿನಿಂದ ಕೊಳೆತಿದೆಯೇ? ಗುರುತಿಸುವ ಸುಲಭ ವಿಧಾನಗಳು

ಒಟ್ಟಿನಲ್ಲಿ, ಕಳೆದ ವರ್ಷದ ನಷ್ಟದಿಂದ ಹತಾಶರಾಗದೆ ಮತ್ತೆ ಈರುಳ್ಳಿ ಬೆಳೆಗೆ ಮುಂದಾದ ರೂಗಿ ಕುಟುಂಬಕ್ಕೆ ಈ ಬಾರಿ ಉತ್ತಮ ಫಸಲು ಮತ್ತು ಬೆಲೆ ಕೈಹಿಡಿದಿದೆ. ಸುಮಾರು ಒಂದು ಕೋಟಿ ರೂಪಾಯಿ ಆದಾಯದೊಂದಿಗೆ ಧಾರವಾಡದ ಈ ರೈತ ಕುಟುಂಬದ ಯಶಸ್ಸು ಗಮನ ಸೆಳೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 20 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us