Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದ ಹಲವೆಡೆ ಆ 22 ರಂದು ವಿದ್ಯುತ್ ವ್ಯತ್ಯಯ: ಹೆಸ್ಕಾಂ ಪ್ರಕಟಣೆ

Dharwad News: ನಿತಿನ್ ನಗರ, ಓಲ್ಡ್ ಎಸ್‍ಪಿ ಸರ್ಕಲ್, ಲಕ್ಷ್ಮಿ ಗುಡಿ ಮತ್ತು 10/11 ಕೆ.ವಿ ಯುಎಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ಧಾರವಾಡದ ಹಲವೆಡೆ ಆ 22 ರಂದು ವಿದ್ಯುತ್ ವ್ಯತ್ಯಯ: ಹೆಸ್ಕಾಂ ಪ್ರಕಟಣೆ
ಪ್ರಾತಿನಿಧಿಕ ಚಿತ್ರ
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ

Updated on:Aug 19, 2023 | 7:45 PM

ಧಾರವಾಡ, ಆಗಸ್ಟ್​ 19: ಧಾರವಾಡ (Dharwad) ಉಪವಿಭಾಗ ವ್ಯಾಪಿಯಲ್ಲಿ ಬರುವ 110/11 ಕೆ.ವಿ ಯುಎಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆ.22 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 2ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ. ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ಆಗಸ್ಟ್ 22 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ.

ಎಲ್ಲೆಲ್ಲಿ ಪವರ್ ಕಟ್?

ಎತ್ತಿನಗುಡ್ಡ, ಅಗ್ರಿ ಯೂನಿವರ್ಸಿಟಿ ಕ್ಯಾಂಪಸ್, ಕುಮಾರೇಶ್ವರ ನಗರ, ಸೈದಾಪೂರ, ಬೆಳಗಾವಿ ಮೇನ್ ರೋಡ, ನಾರಾಯಣಪುರ, ಸಿಐಟಿಬಿ, ಕೆಹೆಚ್‍ಬಿ ಕಾಲೋನಿ, ಸಂಪಿಗೆ ನಗರ, ತಾವರಗೇರಿ ಹಾಸ್ಪಿಟಲ್, ಸನ್ಮತಿ ನಗರ, ಜಿಟಿಸಿ ಕ್ಯಾಂಪಸ್, ಮೆಹಬೂಬ್ ನಗರ, ಹಶ್ಮಿ ನಗರ, ಮಾಳಾಪುರ, ಏರಟೆಕ್, ಜಯಲಕ್ಷ್ಮಿ ಇಂಡಸ್ಟ್ರೀಸ್, ಬಸವ ಕಾಲೋನಿ, ಪವರ್ ಗ್ರಿಡ್, ಪೆಪ್ಸಿ, ಕಿಲ್ಲಾ, ಸಾದುನವರ ಎಸ್ಟೇಟ್, ನರೇಂದ್ರ, ಮಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಮಹದಾಯಿ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಬದ್ಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಅಷ್ಟೇ ಅಲ್ಲದೆ ಹಿರೇಮಲ್ಲಿಗವಾಡ, ಶಿರಡಿ ನಗರ, ರಾಜನಗರ, ಬಿಎಸ್‍ಕೆ ಲೇಔಟ್, ಮಾಳಾಪುರ ಲಾಸ್ಟ್ ಬಸ್ ಸ್ಟಾಪ್, ರಾಜನಗರ, ತಮದಂಡಿ ಪ್ಲಾಟ್, ಹರಿಜನಕೇರಿ, ಎಪಿಎಮ್‍ಸಿ, ಫೈರ್ ಸ್ಟೇಷನ್, ರಾಮನಗೌಡ ಹಾಸ್ಪಿಟಲ್, ದುರ್ಗಾದೇವಿ ದೇವಸ್ಥಾನ, ಮರಾಠ ಕಾಲೋನಿ, ಕೊಪ್ಪದ ಕೇರಿ, ಗುಲಗಂಜಿಕೊಪ್ಪ, ಎಂ.ಬಿ. ನಗರ, ಸಿವಿಲ್ ಹಾಸ್ಪಿಟಲ್, ನಿತಿನ್ ನಗರ, ಓಲ್ಡ್ ಎಸ್‍ಪಿ ಸರ್ಕಲ್, ಲಕ್ಷ್ಮಿ ಗುಡಿಯ ಪ್ರದೇಶ, ಪೊಲೀಸ್ ಹೆಡ್ ಕ್ವಾಟರ್ಸ್, ಬೇಂದ್ರೆ ನಗರ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಧಾರವಾಡದ ಹಲವೆಡೆ ಆಗಸ್ಟ್ 13ರಂದು ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ ಪವರ್ ಕಟ್? ಇಲ್ಲಿದೆ ವಿವರ

ಆಗಸ್ಟ್ 13 ರಂದು ಕೂಡ ಧಾರವಾಡ ನಗರ ವ್ಯಾಪಿಯಲ್ಲಿ ಬರುವ 110/11 ಕೆವಿ ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ 3ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:45 pm, Sat, 19 August 23

ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?