ಧಾರವಾಡ: ಆಸ್ಟ್ರೇಲಿಯಾದಿಂದ ಬಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ; ಆಕೆ ಬರೆದ ಡೆತ್​ನೋಟ್​ನಲ್ಲಿ ಏನಿದೆ?

ಆಸ್ಟ್ರೇಲಿಯಾ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್​ ಟ್ಟೀಸ್ಟ್​ ಸಿಕ್ಕಿದೆ. ಡೆತ್​ನೋಟ್‌ನಲ್ಲಿ ತಮ್ಮ ನೋವುನ್ನು ತೋಡಿಕೊಂಡಿದ್ದಾರೆ. ಹೌದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಗಸ್ಟ್​ 20 ರಂದು ನವಿಲುತೀರ್ಥ ಜಲಾಶಯದ ಬಳಿ ಪ್ರಿಯದರ್ಶಿನಿ ಶವ ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆಯ ಗುರುತು ಪತ್ತೆಹಚ್ಚಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು.

ಧಾರವಾಡ: ಆಸ್ಟ್ರೇಲಿಯಾದಿಂದ ಬಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ; ಆಕೆ ಬರೆದ ಡೆತ್​ನೋಟ್​ನಲ್ಲಿ ಏನಿದೆ?
ಆತ್ಮಹತ್ಯೆ ಮಾಡಿಕೊಂಡ ಮಹಿಳೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 25, 2023 | 4:52 PM

ಧಾರವಾಡ, ಆ.25: ಆಸ್ಟ್ರೇಲಿಯಾದಿಂದ (Australia) ಬಂದು ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ಬಳಿಯ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಧಾರವಾಡದ (Dharwad) ಮಹಿಳೆ ಬರೆದಿಟ್ಟಿದ್ದ ಡೆತ್ ನೋಟ್ ಟಿವಿ9 ಡಿಜಿಟಲ್​ಗೆ ಲಭ್ಯವಾಗಿದೆ. ಇದರಲ್ಲಿ ತಾನು ಅನುಭವಿಸಿದ್ದ ನೋವನ್ನು ವಿವರವಾಗಿ ಬರೆದಿದ್ದಾರೆ. ಆಗಸ್ಟ್ 19 ರಂದು ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಬಂದಿದ್ದ ಪ್ರಿಯದರ್ಶಿನಿ, ಅಂದು ರಾತ್ರಿ ಬಸ್ ಮೂಲಕ ಹುಬ್ಬಳ್ಳಿಗೆ ಬಂದಿದ್ದರು. ಬಳಿಕ ಅಲ್ಲಿನ ಕೋರಿಯರ್ ಕಚೇರಿಯೊಂದಕ್ಕೆ ತೆರಳಿ ಎಲ್ಲ ಬ್ಯಾಗ್, ಚಿನ್ನಾಭರಣ, ಮೊಬೈಲ್ ಗಳನ್ನು ನೀಡಿ, ತನ್ನ ತಂದೆಗೆ ಕೋರಿಯರ್ ಮಾಡುವಂತೆ ಹೇಳಿದ್ದರು. ಬಳಿಕ ಸಂಜೆ 5 ಗಂಟೆಯವರೆಗೆ ತಮ್ಮನ್ನು ಸಂಪರ್ಕಿಸದಿರಲು ಹೇಳಿ, ಅಲ್ಲಿಂದ ಗೋಕಾಕ್ ಕಡೆ ಹೊರಟಿದ್ದೇನೆಂದು ಬಸ್ ಹತ್ತಿದ್ದರು.

ನಂತರ ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ನದಿಯನ್ನು ನೋಡಿ, ಅಲ್ಲಿಯೇ ಇಳಿದಿದ್ದರಾದರೂ ಅಲ್ಲಿ ಜನರಿದ್ದ ಕಾರಣ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಳಿಕ ಹಾಗೆಯೇ ನದಿಗುಂಟ ನಡೆದು ಬಂದು ಗೊರವನಕೊಳ್ಳ ಗ್ರಾಮದ ಬಳಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಶವ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಸಿಕ್ಕಿತ್ತು. ಇದೇ ವೇಳೆ ಅವರು ಇಂಗ್ಲೀಷ್ ನಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣವನ್ನು ತಿಳಿಸಿದ್ದಾರೆ.

ಇದನ್ನೂ ಓದಿ:ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ, ದಂಪತಿ ಮಧ್ಯೆ ಜಗಳ: ಸಾವು

ಅಷ್ಟಕ್ಕೂ ಆ ಡೆತ್ ನೋಟ್​ನಲ್ಲಿ ಏನಿದೆ

ಪ್ರೀತಿಯ ಅಪ್ಪಾಜಿ, ‘ನಾವು ಇದೀಗ ಜೀವ ಬೆದರಿಕೆಯ ಪರಿಸ್ಥಿತಿಯಲ್ಲಿದ್ದೇವೆ. ನನ್ನ ಮಕ್ಕಳ ಮತ್ತು ಪತಿ ಲಿಂಗರಾಜ್ ಉಳಿವಿಗಾಗಿ ನಾನು ಸಾಯಬೇಕಾಗಿದೆ. ನನ್ನ ಬಗ್ಗೆ ನೀವು ಹೆಚ್ಚು ಚಿಂತಿಸಬೇಡಿ. ನನ್ನ ಕುಟುಂಬ ಮತ್ತು ಮಕ್ಕಳ ಒಳ್ಳೆಯದಕ್ಕಾಗಿ ಈ ಸಾವನ್ನು ನಾನು ಸ್ವೀಕರಿಸುತ್ತೇನೆ. ನಾನು ಮಾಡುತ್ತಿರೋದು ಒಳ್ಳೆಯ ಕಾರ್ಯವೆಂದು ಸ್ವೀಕರಿಸಿದ್ದೇನೆ. 2021 ರಿಂದ ಇಲ್ಲಿಯವರೆಗೂ DCJ ನಮ್ಮ ಕುಟುಂಬವನ್ನು ಹಾಳು ಮಾಡಿದ್ದಾರೆ. ವೆರ್ಲಿ ಸ್ಟ್ರೀಟ್ ಸಿಡ್ನಿ ನಿವಾಸಿಗಳು ನಮಗೆ ತೊಂದರೆ ಕೊಟ್ಟಿದ್ದಾರೆ. ಶ್ರೀ ಆನಂದ್ ಗೋರು, ಅಜಿತ ಗೋರು, ಶ್ರೀನಿಧಿ ಗೋರು, ಶ್ರೀ ಜಬ್ಬೂರ್ ಮತ್ತು ಕುಟುಂಬ, ಡೇನಿಯಲ್ ಮತ್ತು ಕುಟುಂಬ, ರೇಮಂಡ್ ಮತ್ತು ಅವನ ಮಕ್ಕಳು, ತಾನ್ಯಾ ಮತ್ತು ಇಡೀ ಕುಟುಂಬ, ಪೊಲೀಸ್ ಅಧಿಕಾರಿ ಮತ್ತು ಕುಟುಂಬದವರು ನಮಗೆ ತೊಂದರೆ ಕೊಟ್ಟಿದ್ದಾರೆ. ಎ, ಬಿ + #17+ #19+ #22 ಕುಟುಂಬದವರೆಲ್ಲರೂ ನನ್ನ ಸಾವಿಗೆ ಕಾರಣರಾಗಿದ್ದಾರೆ. ನಮ್ಮ ಮನೆಗೆ ಪೂರೈಕೆಯಾಗೋ ನೀರಿನಲ್ಲಿ ವಿಷ ಬೆರೆಸಲಾಗಿತ್ತು. ಇದರಿಂದಾಗಿ ನಮ್ಮ ಆರೋಗ್ಯದಲ್ಲಿ ಸಮಸ್ಯೆಯುಂಟಾಯಿತು ಎಂದು ಪ್ರಿಯದರ್ಶಿನಿ ಪಾಟೀಲ್ ಅಳಲನ್ನು ತೋಡಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಸರಕಾರ ಇವರ ಎರಡೂ ಮಕ್ಕಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿತ್ತು

ಕಳೆದ ಎಂಟು ವರ್ಷಗಳಿಂದ ಈ ಕುಟುಂಬ ಅಲ್ಲಿ ತಮ್ಮ ಮಕ್ಕಳ ಸಲುವಾಗಿ ಕಾನೂನು ಹೋರಾಟ ಮಾಡುತ್ತಲೇ ಇತ್ತು. ಎಂಟು ವರ್ಷಗಳ ಹಿಂದೆ ಮಗ ಅಮರ್ತ್ಯನಿಗೆ ಆರೋಗ್ಯದಲ್ಲಿ ಸಮಸ್ಯೆಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ತೋರಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದರಾದರೂ ಅವರು ನೀಡಿದ್ದ ಔಷಧಗಳಿಂದಾಗಿ ಆತನಿಗೆ ಅಡ್ಡ ಪರಿಣಾಮವುಂಟಾಗಿತ್ತು. ಇದರಿಂದಾಗಿ ಪ್ರಿಯದರ್ಶಿನಿಗೆ ನೋವಾಗಿತ್ತು. ಇದನ್ನು ಅವರು ನ್ಯಾಯಯುತವಾಗಿಯೇ ಪ್ರಶ್ನಿಸಿದ್ದರು. ಆದರೆ, ಆಸ್ಪತ್ರೆಯವರು ಅದಕ್ಕೆ ಸರಿಯಾಗಿ ಸ್ಪಂದಿಸದೇ ಇರೋದಕ್ಕೆ ಆ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಸರಕಾರಕ್ಕೆ ದೂರು ಸಲ್ಲಿಸಿದ್ದರು. ಇದರಿಂದಾಗಿ ಆಸ್ಪತ್ರೆಯರು ಸಮಸ್ಯೆಗೆ ಸಿಲುಕಿಕೊಂಡಿದ್ದರು. ಆ ಸಮಸ್ಯೆಯಿಂದ ಹೊರಗೆ ಬರಲು ಹೊಸ ತಂತ್ರವನ್ನು ಹೂಡಿ, ನಿಮಗೆ ಮಕ್ಕಳನ್ನು ನೋಡಿಕೊಳ್ಳಲು ಬರೋದೇ ಇಲ್ಲ. ನಿಮ್ಮಲ್ಲಿಯೇ ಸಮಸ್ಯೆ ಇದೆಯೆಂದು ದೂಷಿಸಿ, ಅಲ್ಲಿನ ಸರಕಾರ ಇವರ ಎರಡೂ ಮಕ್ಕಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಬಿಟ್ಟಿತ್ತು. ಮಕ್ಕಳನ್ನು ಮರಳಿ ಕೊಡುವಂತೆ ಎಷ್ಟೇ ಹೋರಾಟ ಮಾಡಿದರೂ ಸರಕಾರ ಒಪ್ಪಲಿಲ್ಲ.

ಇದನ್ನೂ ಓದಿ:ತುಮಕೂರು: ಮೇಲಾಧಿಕಾರಿಯಿಂದ ಕಿರುಕುಳ ಆರೋಪ; ಡೆತ್​ನೋಟ್ ಬರೆದಿಟ್ಟು ಸಹಾಯಕ ಸರ್ವೆಯರ್​ ಆತ್ಮಹತ್ಯೆಗೆ ಯತ್ನ

ಇನ್ನು ಮಕ್ಕಳು ಅಲ್ಲಿಯೇ ಹುಟ್ಟಿದ್ದಕ್ಕೆ ಅವರಿಗೆ ಆಸ್ಟ್ರೇಲಿಯಾದ ಪೌರತ್ವ ಸಿಕ್ಕಿತ್ತು. ನಮಗೆ ನಿಮ್ಮ ಪೌರತ್ವವೇ ಬೇಡ, ನಮ್ಮ ದೇಶಕ್ಕೆ ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಪರಿಪರಿಯಾಗಿ ಬೇಡಿಕೊಂಡರೂ ಅಲ್ಲಿನ ಸರಕಾರ ಸ್ಪಂದಿಸಲೇ ಇಲ್ಲ. ಒಂದು ಕಡೆ ನಿರಂತರವಾಗಿ ಸರಕಾರದಿಂದ ಕಿರುಕುಳ, ಮತ್ತೊಂದು ಕಡೆ ಆರೋಗ್ಯ ಸಮಸ್ಯೆ. ಇದೆಲ್ಲದರ ಜೊತೆಗೆ ತಮ್ಮ ಮಕ್ಕಳನ್ನು ಕಿತ್ತಿಕೊಂಡರು ಅನ್ನೋ ನೋವು. ಇದೆಲ್ಲದರಿಂದ ನೊಂದಿದ್ದ ಪ್ರಿಯದರ್ಶಿನಿ, ಈ ಸಮಸ್ಯೆಗಳಿಗೆ ತಮ್ಮ ಸಾವೊಂದೇ ಪರಿಹಾರ ಅಂದುಕೊಂಡಿದ್ದಾರೆ. ಸಮಸ್ಯೆಗಳನ್ನು ತಮ್ಮವರ ಬಳಿ ಹೇಳಿಕೊಂಡಿದ್ದರೆ ಇಂಥ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲವೇನೋ? ಆದರೆ, ಅವರು ದುಡುಕಿ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ.

ಗೆಳತಿಯ ಆತ್ಮಹತ್ಯೆ ತಪ್ಪಿಸಿದ್ದ ಪ್ರಿಯದರ್ಶಿನಿ ತಾನೇ ಆತ್ಮಹತ್ಯೆಗೆ ಶರಣಾಗಿದ್ದೇ ವಿಚಿತ್ರ

ಅವರ ಕುಟುಂಬಸ್ಥರು ಹೇಳೋ ಪ್ರಕಾರ, ಪ್ರಿಯದರ್ಶಿನಿ ತುಂಬಾನೇ ಪ್ರತಿಭಾವಂತೆ ಮತ್ತು ಜನಾನುರಾಗಿ ಮಹಿಳೆಯಾಗಿದ್ದರು. ಬೇರೆಯವರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸೋ ಗುಣ ಹೊಂದಿದ್ದರು. ಇದರಿಂದಾಗಿ ಅವರ ಅನೇಕ ಗೆಳತಿಯರು ತಮ್ಮ ಸಮಸ್ಯೆಗಳನ್ನು ಅವರ ಮುಂದೆ ಹೇಳಿಕೊಂಡು ಹಗುರವಾಗುತ್ತಿದ್ದರು. ಅವರೆಲ್ಲರ ಸಮಸ್ಯೆಗಳಿಗೆ ಪರಿಹಾರವನ್ನು ಪ್ರಿಯದರ್ಶಿನಿ ಹೇಳುತ್ತಿದ್ದರು. ಒಮ್ಮೆ ಅವರ ಗೆಳತಿಯೊಬ್ಬರು ಮನೆಯ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರಂತೆ. ಕೊನೆಯದಾಗಿ ಪ್ರಿಯದರ್ಶಿನಿಗೆ ಫೋನ್ ಮಾಡಿ, ನೇಣು ಹಾಕಿಕೊಳ್ಳಲು ನಿರ್ಧರಿಸಿದ್ದರಂತೆ. ಈ ವೇಳೆ ಫೋನ್ ಮೂಲಕವೇ ಆ ಗೆಳತಿಗೆ ಕೌನ್ಸೆಲಿಂಗ್ ಮಾಡಿ, ಆತ್ಮಹತ್ಯೆಯ ನಿರ್ಧಾರವನ್ನು ಬದಲಿಸುವಂತೆ ಮಾಡಿದ್ದರಂತೆ. ಇನ್ನೇನು ಕೆಲವೇ ನಿಮಿಷಗಳಾಗಿದ್ದರೆ ಆಕೆ ನೇಣಿಗೆ ಶರಣಾಗುತ್ತಿದ್ದರು. ಆದರೆ, ನಿಧಾನವಾಗಿ ಕೆಲವೇ ನಿಮಿಷಗಳಲ್ಲಿ ಆಕೆಯ ಮನವೊಲಿಸಿ, ಆತ್ಮಹತ್ಯೆ ಮಾಡಿಕೊಳ್ಳೋದ್ರಿಂದ ಯಾರಿಗೂ ಲಾಭವಿಲ್ಲ ಅನ್ನೋದನ್ನು ನಂಬಿಸಿದ್ದರಂತೆ. ಇಂಥ ಅದ್ಭುತ ಸ್ವಭಾವದ ಪ್ರಿಯದರ್ಶಿನಿ ತನ್ನದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗದೇ ಆತ್ಮಹತ್ಯೆಗೆ ಶರಣಾಗಿದ್ದು ನಮಗೆಲ್ಲ ಅಚ್ಚರಿ ತಂದಿದೆ ಎನ್ನುತ್ತಾರೆ ಅವರ ಸಂಬಂಧಿಗಳು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Fri, 25 August 23

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ