ಪರಿಸರಕ್ಕೆ ಮಾರಕವಾಗುವ ವಸ್ತುವಿನಿಂದ ನಿರ್ಮಾಣ ಕ್ಷೇತ್ರಕ್ಕೆ ಕೊಡುಗೆ ನೀಡಿದ ಧಾರವಾಡ ಯುವಕ; ದೇಶದಲ್ಲೇ ಇದು ಮೊದಲ ಪ್ರಯತ್ನ

ಪ್ರತಿ ವರ್ಷ ಭಾರತದಲ್ಲಿ ಸರಿಸುಮಾರು 100 ಮಿಲಿಯನ್ ಟೈಯರ್​ಗಳನ್ನು ಉತ್ಪಾದಿಸಲಾಗುತ್ತದೆ. ಇಷ್ಟೇ ಪ್ರಮಾಣದ ಟೈಯರ್​ಗಳು ಗುಜರಿಗೆ ಹೋಗುತ್ತವೆ. ಇದರ ಮೂಲಕ ರಸ್ತೆ ನಿರ್ಮಾಣಕ್ಕೆ ಬೇಕಾದ ಇಂಧನ ಹಾಗೂ ಅದರಲ್ಲಿನ ತಂತಿಯನ್ನು ಮರುಬಳಕೆಗೆ ಬಳಸಲಾಗುತ್ತದೆ.

ಪರಿಸರಕ್ಕೆ ಮಾರಕವಾಗುವ ವಸ್ತುವಿನಿಂದ ನಿರ್ಮಾಣ ಕ್ಷೇತ್ರಕ್ಕೆ ಕೊಡುಗೆ ನೀಡಿದ ಧಾರವಾಡ ಯುವಕ; ದೇಶದಲ್ಲೇ ಇದು ಮೊದಲ ಪ್ರಯತ್ನ
ತೇಜಸ್ ಸಿದ್ನಾಳ ಇಂಗಾಲದ ಡೈಆಕ್ಸೈಡ್ ಬಳಸಿಕೊಂಡು ಟೈಲ್ಸ್ ಉತ್ಪಾದಿಸುತ್ತಿದ್ದಾರೆ
Follow us
TV9 Web
| Updated By: sandhya thejappa

Updated on:Jan 16, 2022 | 10:49 AM

ಧಾರವಾಡ: ಪ್ರಕೃತಿಗೆ (Environment) ಮಾರಕವಾದ ವಸ್ತುವಿನಿಂದ ಕಟ್ಟಡ ನಿರ್ಮಾಣಕ್ಕೆ ಬಳಸುವ ಉತ್ಪನ್ನ ಆವಿಷ್ಕರಿಸಬೇಕು ಎನ್ನುವ ಯುವಕನ ಕನಸ್ಸು ಸಾಕಾರಗೊಂಡಿದೆ. ವಾಯು ಮಾಲಿನ್ಯಕ್ಕೆ ಕಾರಣವಾದ ಇಂಗಾಲದ ಡೈಆಕ್ಸೈಡ್ ಬಳಸಿ ಟೈಲ್ಸ್ ತಯಾರಿಕೆಯಲ್ಲಿ ಯಶಸ್ಸು ಕಂಡಿದ್ದು, ಧಾರವಾಡ ಜಿಲ್ಲೆಯ ಯುವಕನ ಈ ಸಾಧನೆ ದೇಶದಲ್ಲಿ ಮೊದಲ ಪ್ರಯತ್ನವಾಗಿದೆ. ಧಾರವಾಡದ (Dharwad) ತೇಜಸ್ ಸಿದ್ನಾಳ ಈ ಸಂಶೋಧನೆಯಲ್ಲಿ ಯಶಸ್ವಿಯಾಗಿದ್ದಾರೆ. ವೃತ್ತಿಯಲ್ಲಿ ಆರ್ಕಿಟೆಕ್ಟ್ ಡಿಸೈನರ್ ಆಗಿರುವ ತೇಜಸ್ ಇಂಜಿನಿಯರಿಂಗ್ (Engineer) ಪದವಿಯನ್ನು ಮುಂಬಯಿ ಹಾಗೂ ಸ್ನಾತಕೋತ್ತರ ಪದವಿಯನ್ನು ಲಂಡನ್​ನಲ್ಲಿ ಪೂರೈಸಿದ್ದಾರೆ.

ಒಂದು ಕಂಪನಿಯಲ್ಲಿ ಉದ್ಯೋಗಿಯಾಗಿ ಇರುವ ಬದಲು ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎನ್ನುವ ಹಂಬಲ ಪದವಿ ಹಂತದಿಂದಲೇ ಇತ್ತು. ಹೀಗಾಗಿ ಪರಿಸರಕ್ಕೆ ಮಾರಕವಾದ ವಸ್ತುವಿನಿಂದಲೇ ನಿರ್ಮಾಣ ಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ತುಡಿತ ಎಂಟು ವರ್ಷಗಳ ಬಳಿಕ ಸಾಕಾರಗೊಂಡಿದೆ. ವಾಯು ಮಾಲಿನ್ಯಕ್ಕೆ ಕಾರಣವಾಗಿರುವ ಇಂಗಾಲದ ಡೈಆಕ್ಸೈಡ್ ಬಳಸಿಕೊಂಡು ಮೊದಲ ಪ್ರಯತ್ನದಲ್ಲಿ ಇಟ್ಟಿಗೆ ಇನ್ನಿತರ ವಸ್ತುಗಳ ತಯಾರಿಸಿ ಯಶಸ್ವಿಯಾಗಲಿಲ್ಲ. ನಿರಂತರ ಆವಿಷ್ಕಾರದ ನಂತರ ಇದೀಗ ಟೈಲ್ಸ್ ಉತ್ಪಾದನೆ ಕೈ ಹಿಡಿದಿದ್ದು, ಗುಜರಾತನ ಮೋರ್ಬಿ ಕೈಗಾರಿಕೆ ವಲಯದಲ್ಲಿನ ಟೈಲ್ಸ್ ತಯಾರಿಕೆ ಕಂಪನಿ ಮೂಲಕ ಈ ಉತ್ಪಾದನೆ ನಡೆಯುತ್ತಿದೆ. ಕಾರ್ಬನ್ ಕ್ರಾಫ್ಟ್ ಮೂಲಕ ಹೊಸ ಸಂಶೋಧನೆಯನ್ನು ಜನರಿಗೆ ತಲುಪಿಸುವ ಪ್ರಯತ್ನದಲ್ಲಿ ತಂಡ ಕಾರ್ಯ ನಿರ್ವಹಿಸುತ್ತಿದೆ.

ಪರಿಸರ ಮತ್ತು ಸಾಮಾಜಿಕ ಕಾಳಜಿ                                                                                                                                                                ಪ್ರತಿ ವರ್ಷ ಭಾರತದಲ್ಲಿ ಸರಿಸುಮಾರು 100 ಮಿಲಿಯನ್ ಟೈಯರ್​ಗಳನ್ನು ಉತ್ಪಾದಿಸಲಾಗುತ್ತದೆ. ಇಷ್ಟೇ ಪ್ರಮಾಣದ ಟೈಯರ್​ಗಳು ಗುಜರಿಗೆ ಹೋಗುತ್ತವೆ. ಇದರ ಮೂಲಕ ರಸ್ತೆ ನಿರ್ಮಾಣಕ್ಕೆ ಬೇಕಾದ ಇಂಧನ ಹಾಗೂ ಅದರಲ್ಲಿನ ತಂತಿಯನ್ನು ಮರುಬಳಕೆಗೆ ಬಳಸಲಾಗುತ್ತದೆ. ಒಂದು ಟೈಯರ್ ಸುಟ್ಟಾಗ ಕನಿಷ್ಠ 300 ಗ್ರಾಂ ಇಂಗಾಲದ ಡೈಆಕ್ಸೈಡ್ ಹೊರಸೂಸುತ್ತದೆ. ಹೀಗೆ ಟೈಯರ್ಗಳನ್ನು ಸುಟ್ಟಾಗ ಪ್ರತಿವರ್ಷ 150 ಮಿಲಿಯನ್ ಕೆಜಿ ಯಷ್ಟು ಕಾರ್ಬನ್ ಪುಡಿ ಉತ್ಪಾದನೆಯಾಗುತ್ತದೆ. ಈ ತ್ಯಾಜ್ಯ ನಿರ್ವಹಣೆ ಸಾಧ್ಯವಾಗದೆ ಪುನಃ ಸುಡಲಾಗುತ್ತದೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗುತ್ತದೆ. ಈ ತ್ಯಾಜ್ಯವನ್ನು ಗುರಿಯಾಗಿಸಿಕೊಂಡ ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕಾರ್ಬನ್ ಪುಡಿಯನ್ನು ಟೈಲ್ಸ್ ಉತ್ಪಾದನೆಗೆ ಬಳಸಲಾಗುತ್ತಿದೆ. ಇನ್ನು ಕೆಲ ಸಂಸ್ಥೆಗಳು ಶುದ್ಧ ವಾಯು ಪಡೆಯುವ ಕಾರಣಕ್ಕೆ ಗಾಳಿ ಶುದ್ಧೀಕರಣ ಘಟಕ ಸ್ಥಾಪಿಸಿವೆ. ಇವುಗಳ ಮೂಲಕವು ಇಂಗಾಲದ ಡೈಆಕ್ಸೈಡ್ ದೊರೆಯುತ್ತಿದೆ.

ಇದರ ವಿಶೇಷತೆ ಏನು?                                                                                                                                                                                  ಟೈಲ್ಸ್ ಉತ್ಪಾದನೆಯಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾದ ವಸ್ತುವನ್ನು ಪರಿಸರಕ್ಕೆ ಪೂರಕವಾಗಿ ಬಳಕೆಯಾಗುತ್ತಿದೆ. ಒಂದು ಡಿಸೇಲ್ ಕಾರು 15 ನಿಮಿಷ ಹೊರಸೂಸುವ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಒಂದು ಟೈಲ್ಸ್ ಉತ್ಪಾದನೆಗೆ ಬಳಸಾಗುತ್ತದೆ. ಇತರೆ ಟೈಲ್ಸ್ ಉತ್ಪಾದನೆಗೆ ಬಳಕೆಯಾಗುವ ವಿದ್ಯುತ್ನಲ್ಲಿ ಶೇ.20 ರಷ್ಟು ಮಾತ್ರ ಬೇಕಾಗುತ್ತದೆ. ನೈರ್ಗಿಕವಾಗಿ ಕ್ವಾರಿಗಳಲ್ಲಿ ದೊರೆಯುವ ಶೇ.70 ರಷ್ಟು ಮಾರ್ಬಲ್, ಗ್ರಾನೈಟ್ ಪುಡಿ ಬಳಸಲಾಗುತ್ತದೆ. ಕಟ್ಟಡ ತಾಜ್ಯದಲ್ಲಿ ದೊರೆಯುವ ಟೈಲ್ಸ್, ಮಾರ್ಬಲ್ ಹಾಗೂ ಗ್ರಾನೈಟ್ ಪುಡಿಯನ್ನು ಕೂಡ ಇದಕ್ಕೆ ಬಳಸಬಹುದಾಗಿದೆ. ಇತರೆ ಕಂಪನಿಯ ಟೈಲ್ಸ್ 10 ಮಿಮಿ ಇದ್ದರೆ ಇದು 20-30 ಎಂಎಂ ನಷ್ಟು ದಪ್ಪ. ಆವಿಷ್ಕಾರ ಹೊಸದಾದರು ಈ ಟೈಲ್ಸ್ ತಯಾರಿಕೆಗೆ 200 ವರ್ಷಗಳ ಹಿಂದಿನ ತಂತ್ರವನ್ನು ಬಳಸಲಾಗುತ್ತದೆ. ಈಗಾಗಲೇ 18 ವಿವಿಧ ವಿನ್ಯಾಸ ಹಾಗೂ 40 ಕ್ಕೂ ಹೆಚ್ಚು ಸಾದಾ ವಿನ್ಯಾಸದ ಟೈಲ್ಸ್ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಬಳಕೆಗೆ ಯೋಗ್ಯವಾಗಿದೆ                                                                                                                                                                             2020 ರಲ್ಲಿ ಕಾರ್ಬನ್ ತಯಾರಿಕೆ ಯಶಸ್ವಿಯಾಗುತ್ತಿದ್ದಂತೆ ತಮ್ಮದೇ ಒಂದು ತಂಡ ಕಟ್ಟಿಕೊಂಡು ಮಾರುಕಟ್ಟೆ ಪ್ರವೇಶಿಸಿದ್ದಾರೆ. ಇವರ ಸಾಮಾಜಿಕ ಕಾಳಜಿ ಕಾರ್ಯಕ್ಕೆ ಮನಸೋತ ಅಡಿಡಾಸ್ ಕಂಪನಿ ತನ್ನ 4 ಮಾರಾಟ ಮಳಿಗೆಗೆ ಇದೇ ಟೈಲ್ಸ್ ಬಳಸಿ ಯುವ ಸಮೂಹಕ್ಕೆ ಬೆನ್ನು ತಟ್ಟುವ ಕೆಲಸ ಮಾಡಿದ್ದರೆ. ಇದರಿಂದಾಗಿ ವಿದೇಶದ ಪ್ರಮುಖ ಕಂಪನಿಗಳು ವಿಚಾರಣೆಗೆ ಮುಂದಾಗಿವೆ. ಈ ಉತ್ಪನ್ನ ಕಟ್ಟಡ ನಿರ್ಮಾಣಕ್ಕೆ ಯೋಗ್ಯ, ಆರೋಗ್ಯಕರ ಎಂಬುವುದಕ್ಕೆ ಪ್ರಮಾಣಿಕೃತಗೊಂಡಿವೆ. ಶೀಘ್ರದಲ್ಲಿ ಹಕ್ಕು ಸ್ವಾಮ್ಯ ಪ್ರಮಾಣ ಪತ್ರ ಪಡೆಯುವ ಹಂತದಲ್ಲಿದ್ದಾರೆ. ಈಗಾಗಲೇ ವಿದೇಶಗಳಲ್ಲಿ ಈ ಬಗ್ಗೆ ಪ್ರಾತ್ಯಕ್ಷಿಗೆ ನೀಡಲಾಗಿದೆ. ಪರಿಸರ ಕಾಳಜಿಯ ಹೊಸ ಆವಿಷ್ಕಾರದಲ್ಲಿ ಹಲವು ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಕೊವಿಡ್ ಹಿನ್ನೆಲೆಯಲ್ಲಿ ಮಾರುಕಟ್ಟೆ ವಿಸ್ತರಣೆ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಉತ್ತರ ಭಾರತದಲ್ಲಿ ಒಂದಿಷ್ಟು ಕಂಪನಿಗಳ ವಿಚಾರಣಗಳಿವೆ. ಆದರೆ ತನ್ನೂರಿನತ್ತ ಇದನ್ನು ಪರಿಚಯಿಸಬೇಕು ಎನ್ನುವ ತವಕದಲ್ಲಿದ್ದು, ಮುಖ್ಯ ಕಚೇರಿಯನ್ನು ವಾಣಿಜ್ಯ ನಗರಿಯಲ್ಲಿ ಆರಂಭಿಸಿ ಸ್ಥಳೀಯ ಪ್ರತಿಭೆಗಳಿಗೆ ಒಂದಿಷ್ಟು ಉದ್ಯೋಗವಕಾಶ ಕಲ್ಪಿಸಿದ್ದಾರೆ. ಕನಿಷ್ಠ ಸರಕಾರ ಕಚೇರಿಗಳಲ್ಲಿ ಈ ಪರಿಸರ ಕಾಳಜಿಯ ಟೈಲ್ಸ್ ಅಳವಡಿಕೆಯಾದರೆ ಒಂದಿಷ್ಟು ಮಾರುಕಟ್ಟೆಗಳು ದೊರೆಯಬಹುದು ಎನ್ನುವ ಪ್ರಯತ್ನದಲ್ಲಿ ಕಾರ್ಬನ್ ಕ್ರಾಫ್ಟ್ ತಂಡ ಇದೆ.

ವರದಿ: ದತ್ತಾತ್ರೇಯ ಪಾಟೀಲ್

ಇದನ್ನೂ ಓದಿ

ಬ್ರಿಟನ್: ಪ್ರಯಾಣಿಕರಿಗೆ ಕಡ್ಡಾಯ ಕೊವಿಡ್ ಟೆಸ್ಟ್ ನಿಯಮದಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ಸಂಪೂರ್ಣ ಮಾಹಿತಿ ಇಲ್ಲಿದೆ

‘ಹೂ ಅಂತೀಯಾ ಮಾವ..’ ಹಾಡಿಗಾಗಿ ಸಮಂತಾಗೆ 5 ಕೋಟಿ ರೂ. ಸಂಭಾವನೆ? ಅಷ್ಟು ದುಬಾರಿ ಯಾಕೆ?

Published On - 10:47 am, Sun, 16 January 22

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್