
ಹುಬ್ಬಳ್ಳಿ, ಆ.23: ಇಂದು ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ-3 (Chandrayaan-3) ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಈ ಮೂಲಕ ಭಾರತ ಮತ್ತೊಂದು ಮೈಲುಗಲ್ಲು ತಲುಪಿದೆ. ಅದರಂತೆ ಇದೇ ವೇಳೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಕೂಡ ವಾಹನ ಸವಾರರಿಗೆ ಕಿರಿಕಿರಿ ಕೊಡುತ್ತ ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡನೊಬ್ಬನನ್ನು ಹಿಡಿದು ನೆಲಕ್ಕೆ ಲ್ಯಾಂಡ್ ಮಾಡಿದ್ದಾರೆ. ಹೌದು, ಇಸ್ರೋ ವಿಜ್ಞಾನಿಗಳು ವಿಕ್ರಮ್ ಲ್ಯಾಡರ್ನ್ನು ಚಂದ್ರನ ಮೇಲೆ ಲ್ಯಾಂಡ್ ಮಾಡಿಸಿದರೇ, ಇತ್ತ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು (Hubli-Dharwad City Police) ಬೈಕ್ನ ಚಕ್ರವನ್ನು ಮೇಲೆತ್ತಿ ವೀಲಿಂಗ್ ಮಾಡುತ್ತಿದ್ದವನನ್ನು ಹಿಡಿದು ನೆಲಕ್ಕೆ ಲ್ಯಾಂಡ್ ಮಾಡಿಸಿದ ಘಟನೆಯನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ವಿಭಿನ್ನವಾಗಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಹೌದು, ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಟ್ವೀಟರ್ ಖಾತೆಯಲ್ಲಿ‘ ಆವತ್ತು ಎರಡು ಘಟನೆಗಳು ನಡೆದವು. ಒಂದು ‘ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು’ ಇನ್ನೊಂದು ಬೈಕ್ನ ಚಕ್ರವನ್ನು ಮೇಲೆತ್ತಿ ವೀಲಿಂಗ್ ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು. ಎಂದು ಹಾಸ್ಯಾಸ್ಪದವಾಗಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಯಶಸ್ವೀ ಲ್ಯಾಂಡಿಂಗ್, ಬೆಂಗಳೂರಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಇದೀಗ ಪೊಲೀಸರು ಹಂಚಿಕೊಂಡ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಕೂಡ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಓರ್ವರು ‘ಈಗ ಹುಬ್ಬಳ್ಳಿ-ಧಾರವಾಡ ಪೊಲೀಸರು ಗಿಚ್ಚಿ ಡೈಲಾಗ್ ಬರಿಯುತ್ತಿದ್ದಾರೆಂದರೆ, ಮತ್ತೊರ್ವರು ಒಂದು ಕಡೆ ನಮ್ಮ ವಿಜ್ಞಾನಿಗಳು ವಿಕ್ರಂ ಲ್ಯಾಂಡರ್ನ್ನು ಚಂದ್ರನ ಮೇಲೆ ಇಳಿಸುವುದರಲ್ಲಿ ನಿರತರಾಗಿದ್ದಾರೆ. ಇನ್ನೊಂದು ಕಡೆ ನಮ್ಮ ಪೊಲೀಸರು ವಾಹನಗಳನ್ನು ಮನಸೋ ಇಚ್ಛೆ ಉಪಟಳ ಮಾಡುವವರಿಗೆ ಸರಿಯಾಗಿ ಕೆಳಗೆ ಇರಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:21 pm, Wed, 23 August 23