Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಲ್ಹಾದ ಜೋಶಿಯವರ ಕ್ಷಮತಾ ಸೇವಾ ಸಂಸ್ಥೆ ನೇತೃತ್ವದಲ್ಲಿ ಕಲಘಟಗಿಯಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

Free eye check up camp; ಶಿಬಿರದಲ್ಲಿ ಕಲಘಟಗಿಯ ನೂರಾರು ಗ್ರಾಮಸ್ಥರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಕಣ್ಣಿನ ಸಮಸ್ಯೆ ಇರುವವರಿಗೆ ಸೂಕ್ತ ಪರೀಕ್ಷೆ ನಡೆಸಿ ಸ್ಥಳದಲ್ಲೇ ಔಷಧಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದ್ದವರಿಗೆ ಶಸ್ತ್ರ ಚಿಕಿತ್ಸೆಯ ಮಾಹಿತಿಯನ್ನು ನೀಡಲಾಯಿತು.

ಪ್ರಲ್ಹಾದ ಜೋಶಿಯವರ ಕ್ಷಮತಾ ಸೇವಾ ಸಂಸ್ಥೆ ನೇತೃತ್ವದಲ್ಲಿ ಕಲಘಟಗಿಯಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ
ಉಗ್ಗಿನಕೇರಿ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ
Follow us
TV9 Web
| Updated By: Ganapathi Sharma

Updated on: Aug 22, 2023 | 9:38 PM

ಧಾರವಾಡ, ಆಗಸ್ಟ್ 22: ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ (Pralhad Joshi) ಕ್ಷಮತಾ ಸೇವಾ ಸಂಸ್ಥೆ (ರಿ) (Kshamta Seva Samstha) ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಪದ್ಮಶ್ರೀ ಡಾ. ಎಂಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಗಳ ವತಿಯಿಂದ ಇಂದು ಕಲಘಟಗಿಯ ಉಗ್ಗಿನಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ (Free eye check up camp) ನಡೆಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಲೋಚನೆಯಂತೆ, ದೇಶದ ಜನರ ಆರೋಗ್ಯ ಸುಸ್ಥಿರವಾಗಿದ್ದಾಗ ಉತ್ತಮ ದೇಶ ನಿರ್ಮಿಸಲು ಸಾಧ್ಯ ಎಂಬ ಪರಿಕಲ್ಪನೆಯಂತೆ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಲ್ಹಾದ ಜೋಶಿಯವರು ಕಾಳಜಿ ವಹಿಸಿ ಕಳೆದ ಅನೇಕ ವರ್ಷಗಳಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಸುತ್ತಾ ಬಂದಿದ್ದಾರೆ. ಈ ಮೂಲಕ ಜಿಲ್ಲೆಯಾದ್ಯಂತ ಅವಶ್ಯಕತೆ ಇರುವ ಜನರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಬಡ ಜನರಿಗೆ ಉಪಯೋಗವಾಗುವಂತೆ ವೈದ್ಯಕೀಯ ತಪಾಸಣಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕ್ಷಮತಾ ಸೇವಾ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಶಿಬಿರದಲ್ಲಿ ಕಲಘಟಗಿಯ ನೂರಾರು ಗ್ರಾಮಸ್ಥರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಕಣ್ಣಿನ ಸಮಸ್ಯೆ ಇರುವವರಿಗೆ ಸೂಕ್ತ ಪರೀಕ್ಷೆ ನಡೆಸಿ ಸ್ಥಳದಲ್ಲೇ ಔಷಧಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದ್ದವರಿಗೆ ಶಸ್ತ್ರ ಚಿಕಿತ್ಸೆಯ ಮಾಹಿತಿಯನ್ನು ನೀಡಲಾಯಿತು.

ಇದನ್ನೂ ಓದಿ: ಮತ್ತೆ ಧಾರವಾಡದಿಂದಲೇ ಸ್ಪರ್ಧೆ, ಕರ್ನಾಟಕದಲ್ಲಿ ಬಿಜೆಪಿಗೆ 20ಕ್ಕೂ ಅಧಿಕ ಸ್ಥಾನ ಸಿಗಲಿದೆ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ನಾಗರಾಜ ಛಬ್ಬಿ, ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕರಾದ ಗೋವಿಂದ ಜೋಶಿ, ಉಗ್ಗಿನಕೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಹಾಗೂ ಊರ ಹಿರಿಯರು ಉಪಸ್ಥಿತರಿದ್ದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?