ಧಾರವಾಡ: ಆ್ಯಪ್ ಅಥವಾ ಸಾಫ್ಟ್ವೇರ್ಗಳಿಂದ ಯಾವುದೇ ದೇಶ ಅಭಿವೃದ್ಧಿಯಾಗಿಲ್ಲ. ರೈತರ ಅಭಿವೃದ್ಧಿಯಾದಾಗ ಮಾತ್ರ ಸುಸ್ಥಿರ ಪ್ರಗತಿ ಸಾಧ್ಯ ಎಂದು ಸೆಲ್ಕೊ ಇಂಡಿಯಾ ಕಂಪನಿಯ ಸಂಸ್ಥಾಪಕ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಉದ್ಯಮಿ ಡಾ.ಹರೀಶ್ ಹಂದೆ ಹೇಳಿದರು. ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಪುನಃ 1970ರ ಹಸಿರು ಕ್ರಾಂತಿ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಲೀಸಾಗಿ ಪದವಿ ಸಿಗುತ್ತದೆ. ಆದರೆ ಅನುಭವಿ ರೈತರಿಗೆ ಯಾವುದೇ ಪದವಿಗಳು ಸಿಗುವುದಿಲ್ಲ. 40 ವರ್ಷ ಕಬ್ಬು ಬೆಳೆದ ರೈತನಿಗೆ ಪದವಿ ಸಿಗುವುದಿಲ್ಲ. ಅನುಭವಿ ರೈತರನ್ನು ಕೃಷಿ ತಜ್ಞರು ಎಂದು ಯಾರೂ ಪರಿಗಣಿಸುವುದೂ ಇಲ್ಲ. ಅಂಥ ರೈತರಿಂದ ಕೃಷಿ ವಿವಿಗಳಲ್ಲಿ ಕಲಿಸುವಂಥ ಪದ್ಧತಿ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.
2030ಕ್ಕೆ ಸುಸ್ಥಿರ ಅಭಿವೃದ್ಧಿ ದೇಶದ ಪರಿಕಲ್ಪನೆ ಹೇಗಿರಬೇಕು ಎಂದು ವಿಶ್ವಸಂಸ್ಥೆ ಒಂದು ರೂಪುರೇಷೆ ನೀಡಿದೆ. ಭಾರತವು ಸುಸ್ಥಿರ ಅಭಿವೃದ್ಧಿ ದೇಶ ಆಗುವ ಸಾಧ್ಯತೆಯು ರೈತರ ಕೈಲಿದೆ. ಕೃಷಿ ಕ್ಷೇತ್ರದಲ್ಲಿ ಇಂದು ಹೆಚ್ಚಿನ ಆವಿಷ್ಕಾರಗಳು ನಡೆಯಬೇಕಿದೆ. ಌಪ್, ಸಾಫ್ಟ್ವೇರ್ ಆವಿಷ್ಕಾರಗಳಿಗಿಂತಲೂ ಉತ್ತಮ ಕೃಷಿ ಆವಿಷ್ಕಾರಗಳು ಹೆಚ್ಚಾಗಬೇಕಿದೆ. ಕೃಷಿ ಪದವೀಧರರಿಂದ 1970ರ ಹಸಿರು ಕ್ರಾಂತಿ ಮರುಕಳಿಸಬೇಕಿದೆ. ಕೃಷಿ ಪದವೀಧರರು ಹೊಸ ತಲೆಮಾರಿನ ರೈತರನ್ನು ಸೃಷ್ಟಿಸಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ದಾಖಲೆಯ ಬಿತ್ತನೆ ಬೀಜ ಮಾರಾಟ; ಕೃಷಿ ಮೇಳ ನಡೆಸದೆಯೂ ಸಾಧನೆ
ಇದನ್ನೂ ಓದಿ: Rail Roko Agitation: ರೈಲು ಹಳಿಗಳ ಮೇಲೆ ಪ್ರತಿಭಟನೆಗೆ ಕುಳಿತ ರೈತರು; 160ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯ