ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ ಪಂಚಕಲ್ಯಾಣ ಮಹೋತ್ಸವದ ಮೇಲ್ಚಾವಣಿ ಶೆಡ್ಗಳು
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಹಿನ್ನಲೆ ಭಾರಿ ಗಾಳಿ ಮಳೆಗೆ ಪಂಚಕಲ್ಯಾಣ ಮಹೋತ್ಸವದ ಮೇಲ್ಚಾವಣಿ ಶೆಡ್ಗಳು ಹಾರಿಹೋಗಿವೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಗುಂಡವಾಡ ಗ್ರಾಮದಲ್ಲಿ ಆಯೋಜಿಸಿದ್ದ ಪಂಚಕಲ್ಯಾಣ ಮಹೋತ್ಸವದಲ್ಲಿ ಘಟನೆ ನಡೆದಿದೆ. ಜೈನ್ ಸಮುದಾಯದ ವತಿಯಿಂದ ಆಯೋಜಿಸಿರುವ ಪಂಚ ಕಲ್ಯಾಣ ಮಹೋತ್ಸವ ಸಮಾರಂಭಕ್ಕೆ ಮಳೆಯಿಂದಾಗಿ ಅಡ್ಡಿ ಉಂಟಾಗಿದೆ.
ಗದಗ: ಸಿಡಿಲು ಬಡಿದು ರೈತ ಸಾವು
ಗದಗ ಜಿಲ್ಲೆಯ ರೋಣ ತಾಲೂಕಿನ ಯಾಸ ಹಡಗಲಿ ಎಂಬಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಮಾಳವಾಡ ಗ್ರಾಮದ ರೈತ ಹೊಳೆಬಸಯ್ಯ (52) ಎಂಬುವವರು ಸಾವನ್ನಪ್ಪಿದ್ದಾರೆ. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಧಾರವಾಡ: ಗಾಳಿ ಮಳೆಗೆ ನೆಲಕಚ್ಚಿದ ಪಾಲಿ ಹೌಸ್
ಗಾಳಿ ಮಳೆಗೆ ಪಾಲಿ ಹೌಸ್ ನೆಲಕಚ್ಚಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ. 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಪಾಲಿ ಹೌಸ್ ಕುಸಿದು ಬಿದ್ದಿದೆ. ನಿಂಗಪ್ಪ ಜಾಲಿಹಾಳ ಎಂಬುವವರಿಗೆ ಸೇರಿದ ಪಾಲಿಹೌಸ್ ಅನ್ನು ರೈತ 20 ಗುಂಟೆ ಜಾಗದಲ್ಲಿ ನಿರ್ಮಾಣ ಮಾಡಿದ್ದರು. ಇದೀಗ ಮಳೆಗೆ ಅದು ಕುಸಿದು ಬಿದ್ದಿದ್ದು ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಧಿಕಾರಿಗಳು ರೈತನಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: Karnataka Rain: ಕರ್ನಾಟಕದ ಬೆಂಗಳೂರು, ಕೊಡಗು ಸೇರಿ ಹಲವೆಡೆ ಮಳೆ; ಕರಾವಳಿಯಲ್ಲಿ ಇಂದು ಹಳದಿ ಅಲರ್ಟ್ ಘೋಷಣೆ
ಇದನ್ನೂ ಓದಿ: Shocking Video: 2 ಟ್ರಕ್ಗಳ ಮಧ್ಯೆ ಸಿಲುಕಿ ಕಾರು ಅಪ್ಪಚ್ಚಿ; ಭೀಕರ ಅಪಘಾತದಲ್ಲಿ ಓರ್ವ ಸಾವು