ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣ; ಇಂದು ಕೂಡ ವಸೀಂ ಪಠಾಣ್, ತುಫೇಲ್ ಮುಲ್ಲಾಗೆ ಗ್ರಿಲ್

ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣ; ಇಂದು ಕೂಡ ವಸೀಂ ಪಠಾಣ್, ತುಫೇಲ್ ಮುಲ್ಲಾಗೆ ಗ್ರಿಲ್
ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ದೃಶ್ಯಗಳು

ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಕೂಡ ವಸೀಂ ಪಠಾಣ್, ತುಫೇಲ್ ಮುಲ್ಲಾರನ್ನು ವಿಚಾರಣೆಗೆ ಒಳಪಡಿಸಲಾಗುತ್ತೆ.

TV9kannada Web Team

| Edited By: Ayesha Banu

Apr 24, 2022 | 8:58 AM

ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಕೂಡ ವಸೀಂ ಪಠಾಣ್, ತುಫೇಲ್ ಮುಲ್ಲಾರನ್ನು ವಿಚಾರಣೆಗೆ ಒಳಪಡಿಸಲಾಗುತ್ತೆ. ಇಂದು ಮತ್ತಷ್ಟು ಆರೋಪಿಗಳ ಹೆಸರು ಬಾಯ್ಬಿಡುವ ಸಾಧ್ಯತೆ ಇದೆ. ಗಲಭೆ‌ ಮಾಡಿ ತಮಗೇನು ಗೊತ್ತಿಲ್ಲ ಅಂತಿದ್ದ ವಸೀಂ, ತುಫೇಲ್ ಗ್ರಿಲ್ ಬಳಿಕ ಮಾಹಿತಿ ನೀಡಿದ್ದು ನಿನ್ನೆಯಷ್ಟೇ ವಸೀಂ ಮಾಹಿತಿ ಮೇರೆಗೆ ಕಾರ್ಪೊರೇಟರ್ ಬಂಧನವಾಗಿದೆ.

ನಿನ್ನೆ ಆರೋಪಿಗಳ ಮಾಹಿತಿ ಮೇರೆಗೆ ಎಐಎಂಐಎಂ ಕಾರ್ಪೊರೇಟರ್ನನ್ನು ಅರೆಸ್ಟ್ ಮಾಡಲಾಗಿತ್ತು. ಇಂದು ತಾಂತ್ರಿಕ ಸಾಕ್ಷ್ಯ ಇಟ್ಟುಕೊಂಡು ಪೊಲೀಸ ವಿಚಾರಣೆ ನಡೆಸಲಿದ್ದಾರೆ. ಎಲ್ಲಿ ತಮ್ಮ ಹೆಸರು ಬಂದ್ರೆ ಹೇಗೆ ಎನ್ನೋ ಭಯದಲ್ಲಿ ಗಲಭೆಯ ಹಿಂದಿನ ಕಿಡಗೇಡಿಗಳಿದ್ದಾರೆ. ಈ ನಡುವೆ ಆಯುಕ್ತ ಲಾಬೂರಾಮ್ ನಿಷೇಧಾಜ್ಞೆ ತೆರವು ಮಾಡಿದ್ದಾರೆ. ಕಳೆದೊಂದು ವಾರದಿಂದ ಸೆಕ್ಷನ್ 144 ಜಾರಿ ಮಾಡಲಾಗಿತ್ತು. ಪರಿಸ್ಥಿತಿ ಹತೋಟಿಗೆ ಬಂದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ತೆರವು ಮಾಡಲಾಗಿದೆ.

ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ 15 ಆರೋಪಿಗಳು ಶಿಫ್ಟ್ ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಮೈಸೂರು, ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ 15 ಆರೋಪಿಗಳು ಶಿಫ್ಟ್ ಮಾಡಲಾಗಿದ್ದು ಮೈಸೂರು ಕೇಂದ್ರ ಕಾರಾಗೃಹಕ್ಕೆ 10 ಆರೋಪಿಗಳ ಸ್ಥಳಾಂತರ ಮಾಡಲಾಗಿದೆ. ಕಲಬುರಗಿ ಜಿಲ್ಲಾ ಕೇಂದ್ರ‌ ಕಾರಾಗೃಹಕ್ಕೆ ಏ.19ರಂದು 103 ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಗಲಭೆ ಪ್ರಕರಣದಲ್ಲಿ ಒಟ್ಟು 138 ಆರೋಪಿಗಳನ್ನು ಬಂಧಿಸಲಾಗಿತ್ತು. ಮೂವರನ್ನು ಕೋರ್ಟ್ ಅನುಮತಿ ಮೇರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಮಾಸ್ಟರ್ ಮೈಂಡ್ ಮೌಲ್ವಿ ವಸೀಂ ಹುಬ್ಬಳ್ಳಿಯಲ್ಲಿ ಪೊಲೀಸ್ ವಾಹನದ ಮೇಲೆ ನಿಂತು ಅಬ್ಬರಿಸಿ, ಮುಸ್ಲಿಮರನ್ನ ಪ್ರಚೋದಿಸಿ, ದಾಂದಲೆ ಬಳಿಕ ಎಸ್ಕೇಪ್ ಆಗಿ, ಈಗ ಖಾಕಿ ಬಲೆಯಲಿದ್ದಾರೆ. ಮೌಲ್ವಿಯ ಮತ್ತಷ್ಟು ಕಹಾನಿಗಳು ಬಯಲಾಗಿದೆ. ಗುರುವಾರ ಕತ್ತು ಹಿಡಿದು ಎಳೆದುಕೊಂಡು ಹೋಗಿದ್ದ ಪೊಲೀಸರು, ಐದು ದಿನಗಳ ಕಾಲ ಮೌಲ್ವಿಯನ್ನ ತಮ್ಮ ವಶಕ್ಕೆ ಪಡೆದುಕೊಂಡಿದ್ದು ಅಸಲಿ ಇನ್ವೆಸ್ಟಿಗೇಶನ್ ಆರಂಭಿಸಿದ್ದಾರೆ.

‘ಖಾಕಿ’ ಮುಂದೆ ಭಯಾನಕ ಸತ್ಯ ಬಾಯ್ಬಿಟ್ಟ ಮೌಲ್ವಿ ಮೌಲ್ವಿ ವಸೀಂನನ್ನ ವಶದಲ್ಲಿಟ್ಟುಕೊಂಡಿರೋ ಹುಬ್ಬಳ್ಳಿ ಪೊಲೀಸರು ಈಗ ಆತನಿಗೆ ಫುಲ್ ಗ್ರಿಲ್ ಮಾಡ್ತಿದ್ದಾರೆ. ಪ್ರಶ್ನೆಗಳ ಸುರಿಮಳೆಗೆರೆದು, ಕೌಂಟರ್ ಕ್ವಶ್ಚನ್ ಕೇಳಿ ಮೌಲ್ವಿಯ ನಿದ್ದೆಗೆಡಿಸ್ತಿದ್ದಾರೆ. ಪ್ರಕರಣದ ಬಗ್ಗೆ, ಘಟನೆ ಹಿಂದಿರೋ ಕಾಣದ ಕೈಗಳ ಬಗ್ಗೆ ಪಿನ್ ಟು ಪಿನ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಪ್ರಕರಣದಲ್ಲಿ ಮಾಸ್ಟರ್ಮೈಂಡ್ಗಳು ಬೇರೆಯೇ ಇದ್ದಾರೆ. ಆದ್ರೆ ನನ್ನನ್ನ ಬಲಿಪಶು ಮಾಡಲಾಗ್ತಿದ್ದು, ಬೇಕಂತಲೇ ಕೇಸ್ ಸಿಕ್ಕಿಹಾಕಿಸೋ ಕೆಲಸ‌ ಮಾಡಿದ್ದಾರೆ ಅಂತಾ ಮೌಲ್ವಿ ವಸೀಂ ಹೇಳಿದ್ದಾರೆ. ಇಷ್ಟೇ ಅಲ್ಲ, ಎಲ್ಲರ ಬಣ್ಣ ಬಯಲು ಮಾಡ್ತೀನಿ ಅನ್ನುತ್ತಾ ಇನ್ನೂ ಕೆಲ ವಿಚಾರಗಳನ್ನ ಮೌಲ್ವಿ ವಸೀಂ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Dr Rajkumar: ‘ನಿನದೇ ನೆನಪು ದಿನವೂ ಮನದಲ್ಲಿ..’: ಡಾ. ರಾಜ್​ ಜನ್ಮದಿನಕ್ಕೆ ಪುನೀತ್​ ವಿಶ್​ ಮಾಡಿದ್ದ ವಿಡಿಯೋ ವೈರಲ್​

545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ; ಅಕ್ರಮದಲ್ಲಿ ಕಾಂಗ್ರೆಸ್ ಬಿಜೆಪಿ ಭಾಯಿಭಾಯಿ, ರುದ್ರಗೌಡ ಇಂದು ಕೋರ್ಟ್ಗೆ ಹಾಜರು

Follow us on

Related Stories

Most Read Stories

Click on your DTH Provider to Add TV9 Kannada