AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neha Murder Case: ನೇಹಾಳ ಹತ್ಯೆ ಕೋಪದಲ್ಲಿ ಮಾಡಿದ್ದಲ್ಲ! ಸ್ಪಾಟ್​​ ಇನ್ಸ್​​​​ಪೆಕ್ಷನ್​ ಮಾಡಿ, ವಾರದಿಂದ ಪೂರ್ವ ತಯಾರಿ ನಡೆಸಿದ್ದ ಫಯಾಜ್​

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಕೊಲೆಯೂ ದೇಶಾದ್ಯಂತ ಸದ್ದು ಮಾಡಿತ್ತು. ಆರೋಪಿ ಫಯಾಜ್ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಸಿಐಡಿ ಅಧಿಕಾರಿಗಳು ಆರೋಪಿ ಫಯಾಜ್​​ನನ್ನು 6 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡುವ ಕೆಲವು ದಿನಗಳ ಮುನ್ನ ಫಯಾಜ್​​ ನೇಹಾ ಹಿರೇಮಠ ಮನೆ ಬಳಿಯೇ ಓಡಾಡಿದ್ದಾನೆ. ಇನ್ನು ಕೊಲೆ ಮಾಡುವ ಐದು ದಿನಗಳ ಮೊದಲೇ ಚಾಕುವೊಂದನ್ನು ಖರೀದಿ ಮಾಡಿದ್ದ ಎಂಬ ಆತಂಕಕಾರಿ ವಿಷಯ ಬೆಳಕಿಗೆ‌ ಬಂದಿದೆ.

Neha Murder Case: ನೇಹಾಳ ಹತ್ಯೆ ಕೋಪದಲ್ಲಿ ಮಾಡಿದ್ದಲ್ಲ! ಸ್ಪಾಟ್​​ ಇನ್ಸ್​​​​ಪೆಕ್ಷನ್​ ಮಾಡಿ, ವಾರದಿಂದ ಪೂರ್ವ ತಯಾರಿ ನಡೆಸಿದ್ದ ಫಯಾಜ್​
ಕೊಲೆ ಆರೋಪಿ ಫಯಾಜ್ ಬಳಿಸಿದ್ದ ಬೈಕ್​
ಶಿವಕುಮಾರ್ ಪತ್ತಾರ್
| Updated By: ಗಂಗಾಧರ​ ಬ. ಸಾಬೋಜಿ|

Updated on:Apr 25, 2024 | 11:00 AM

Share

ಹುಬ್ಬಳ್ಳಿ, ಏಪ್ರಿಲ್ 25: ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ (Neha murder case) ಸಂಬಂಧಿಸಿದಂತೆ ರಾಜ್ಯವ್ಯಾಪಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಎಚ್ಚೆತ್ತ ಸರ್ಕಾರ ಪ್ರಕರಣವನ್ನು ಸಿಐಡಿಗೆ (CID) ನೀಡಲಾಯಿತು. ನಂತರ ತನಿಖೆ ಶುರುಮಾಡಿರುವ ಸಿಐಡಿ ಅಧಿಕಾರಿಗಳು ಆರೋಪಿ ಫಯಾಜ್​​ನನ್ನು 6 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕ್ರೈಂ ನಡೆದ ಸ್ಥಳದಲ್ಲಿ ಮಹಜರು ಮಾಡುವ ಮೂಲಕ ಫೀಲ್ಡಿಗಿಳಿದ್ದಾರೆ. ಇದೀಗ ಆರೋಪಿ ಫಯಾಜ್​​ನ ಮತ್ತಷ್ಟು ಆತಂಕಕಾರಿ ವಿಷಯಗಳು ಬೆಳಕಿಗೆ ಬಂದಿವೆ.

ಕೊಲೆ ಮಾಡುವ ಕೆಲವು ದಿನಗಳ ಮುನ್ನ ಆರೋಪಿ ಫಯಾಜ್​​ ನೇಹಾ ಹಿರೇಮಠ ಮನೆ ಬಳಿಯೇ ಓಡಾಡಿದ್ದಾನೆ. ಆ ಮೂಲಕ ನೇಹಾ ಚಲನವಲನವನ್ನು ಗಮನಿಸಿದ್ದಾರೆ. ಆಕೆಯ ಪ್ರತಿಯೊಂದು ವಿಚಾರಗಳನ್ನು ಗಮನಿಸುತ್ತಿದ್ದ. ಇನ್ನು ಕೊಲೆ ಮಾಡುವ ಐದು ದಿನಗಳ ಮೊದಲೇ ಚಾಕುವೊಂದನ್ನು ಖರೀದಿ ಮಾಡಿದ್ದ.

ಇದನ್ನೂ ಓದಿ: ನೇಹಾ ಹಂತಕ ಫಯಾಜ್‌ನನ್ನ ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ ಅಧಿಕಾರಿಗಳು

ಏಪ್ರಿಲ್​ 18 ರಂದು ನೇಹಾಳ ಪ್ರಾಕ್ಟಿಕಲ್ ಎಕ್ಸಾಂ ಇತ್ತು. ಈ ವಿಚಾರವನ್ನು ತಿಳಿದಿದ್ದ ಫಯಾಜ್​ ಧಾರವಾಡದಿಂದ ಬೈಕ್ (KA24Y5781) ತೆಗೆದುಕೊಂಡು ಕಾಲೇಜ್​ಗೆ ಬಂದಿದ್ದ. ಕೊಲೆ ಮಾಡುವ ಉದ್ಧೇಶದಿಂದಲೇ ರಸ್ತೆ ಕಡೆ ಮುಖ ಮಾಡಿ ಬೈಕ್ ನಿಲ್ಲಿಸಿದ್ದ.ಬಳಿಕ ಕಾಲೇಜ್​​ ಒಳಗಡೆ ಹೋಗಿ ಪ್ರಾಕ್ಟಿಕಲ್ ಎಕ್ಸಾಂ ನಡೆಯುವ ಹಾಲ್​ನಲ್ಲಿ ಕೂತಿದ್ದ.

ಬಳಿಕ ಎಕ್ಸಾಂ ಮುಗಿಯುತ್ತಲೇ ನೇಹಾಳನ್ನು ಫಯಾಜ್ ಮಾತನಾಡಿಸಲು ಯತ್ನಿಸಿದ್ದಾನೆ. ಆದರೆ ನೇಹಾ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಹೀಗಾಗಿ ರೊಚ್ಚಿಗೆದ್ದು ಚಾಕಿವಿನಿಂದ ಇರಿದು ಪರಾರಿ ಆಗಿದ್ದಾನೆ. ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರಿಂದ ಫಯಾಜ್​ ನನ್ನು ವಶಕ್ಕೆ ಪಡೆಯಲಾಗಿದೆ.

ಕೋರ್ಟ್​ನಿಂದ ಕಸ್ಟಡಿಗೆ ಪಡೆದುಕೊಳ್ಳೋಕೆ ಅನುಮತಿ ಸಿಗ್ತಿದ್ದಂತೆಯೇ ಸಿಐಡಿ ಎಸ್ಪಿ ವೆಂಕಟೇಶ್​ ಮತ್ತು ಡಿವೈಎಸ್ಪಿ ಎಂ.ಎಚ್. ಪೈಕ್ ನೇತೃತ್ವದಲ್ಲಿ ಧಾರವಾಡ ಕಾರಾಗೃಹಕ್ಕೆ ಅಧಿಕಾರಿಗಳು ಎಂಟ್ರಿಕೊಟ್ಟಿದ್ರು. ಭಾರೀ ಭದ್ರತೆಯಲ್ಲಿ ಆರೋಪಿ ಫಯಾಜ್​​ನನ್ನು ವಶಕ್ಕೆ ಪಡೆದಿದ್ದಾರೆ. ಜೈಲಿನೊಳಗೆ ತಮ್ಮ ವಾಹನ ತೆಗೆದುಕೊಂಡು ಹೋಗಿ, ಫಯಾಜ್​​ನನ್ನು ಹೊರ ಕರೆತಂದಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ನೇಹಾ ಹಂತಕನಿಗೆ ಗಲ್ಲುಶಿಕ್ಷೆ ಶಿಫಾರಸ್ಸು ಮಾಡಲು ನಿರ್ಧರಿಸಿದೆ: ರಂದೀಪ್ ಸುರ್ಜೆ ವಾಲಾ, ಎಐಸಿಸಿ ಉಸ್ತುವಾರಿ

ಸಿಐಡಿ ಅಲ್ಲಿಂದ ಪೊಲೀಸ್ ಹೆಡ್ ಕ್ವಾರ್ಟರ್ಸ್​​​​ನಲ್ಲಿರೋ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ರು. ನಂತ್ರ ಭದ್ರತೆಯಲ್ಲೇ ಕೃತ್ಯ ನಡೆದಿದ್ದ ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್​​ಗೆ ಕರೆ ತಂದು 3 ಗಂಟೆಗಳ ಕಾಲ ಸ್ಥಳ ಮಹಜರು ಮಾಡಿದ್ರು. ಈ ವೇಳೆ ಖುದ್ದು ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ಅವರೇ ಹಾಜರಿದ್ದರು.

ಇನ್ನು ಪ್ರಕರಣದಲ್ಲಿ ಒಬ್ಬನೇ ಆರೋಪಿಯನ್ನ ಅರೆಸ್ಟ್‌ ಮಾಡಿದ್ದಾರೆ. ಆದರೆ ಒಬ್ಬನೇ ಕೊಲೆ ಮಾಡಲು ಸಾಧ್ಯ ಇಲ್ಲ. ಕಾಲೇಜಿನ ಒಳಗಡೆ ಇದ್ದವರು ಆತನಿಗೆ ಮಾಹಿತಿ ನೀಡಿದ್ದಾರೆ ಅಂತಾ ನೇಹಾ ತಂದೆ ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:59 am, Thu, 25 April 24