ಹುಬ್ಬಳ್ಳಿಯಲ್ಲಿ ಇಂದು ಆರ್ಎಸ್ಎಸ್ ಪಥಸಂಚಲನ; ನಗರದಲ್ಲಿ ಮದ್ಯ ಮಾರಾಟ ನಿಷೇಧ
ವಿಜಯದಶಮಿ ನಿಮತ್ತ ಹುಬ್ಬಳ್ಳಿ ಮಹಾನಗರದಿಂದ ಇಂದು (ಅ.29) ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ ಅ.29: ವಿಜಯದಶಮಿ ನಿಮತ್ತ ಹುಬ್ಬಳ್ಳಿ (Hubballi) ಮಹಾನಗರದಿಂದ ಇಂದು (ಅ.29) ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನ ನಡೆಯಲಿದೆ. ಹೀಗಾಗಿ ವಾಣಿಜ್ಯನಗರಿಯಲ್ಲಿ ಮದ್ಯ (Alcohol) ಮಾರಾಟವನ್ನು ಬಂದ್ ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಆದೇಶ ಹೊರಡಿಸಿದ್ದಾರೆ. ನಾಳೆ (ಅ.30) ಬೆಳಿಗ್ಗೆ ಆರು ಗಂಟೆವರೆಗೂ ಮದ್ಯ ಮರಾಟ ಮತ್ತು ಮದ್ಯ ಸಾಗಾಟ ಬಂದ್ ಮಾಡಲಾಗಿದೆ.
ಪಥ ಸಂಚಲನ ವೇಳೆ ಮದ್ಯಪಾನ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಗಣವೇಷಧಾರಿಗಳು ವಿವಿಧ ಬಡಾವಣೆಯಲ್ಲಿ ಪಥ ಸಂಚಲನ ನಡೆಸಲಿದ್ದು, ಅಲ್ಲಿ ಹಿಂದೂ ಮುಸ್ಲಿಂರು ವಾಸಮಾಡ್ತಾರೆ.
ಪಥಸಂಚಲನ ಸಮಯದಲ್ಲಿ ಕಿಡಗೇಡಿಗಳು ಮದ್ಯಪಾನ ಮಾಡಿ ಜನರ ಭಾವನೆ ಕೆರಳಿಸುವ ಘೋಷಣೆ ಕೂಗುವುದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಸಾಧ್ಯತೆ ಇದೆ. ಇದಲ್ಲದೆ ಹುಬ್ಬಳ್ಳಿ ನಗರ ಕೋಮು ದೃಷ್ಟಿಯಿಂದ ಅತೀ ಸೂಕ್ಷ್ಮ ಪ್ರದೇಶವಾಗಿದ್ದು, ಯಾವದೇ ಸಣ್ಣ ಪುಟ್ಟ ಘಟನೆ ನಡೆದರೂ ಅದು ಮತೀಯ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಇಂದು ಮದ್ಯ ಮಾರಟಕ್ಕೆ ಬ್ರೇಕ್ ಹಾಕಲಾಗಿದೆ.
ಇದನ್ನೂ ಓದಿ: RSS ಅಂದ್ರೆ ಅದು ಪಕ್ಕಾ ಹಿಂದೂ ಪರ ಸಂಘಟನೆ; ಆದ್ರೆ ಮಂಗಳೂರಿನಲ್ಲಿ ಕ್ರೈಸ್ತ ಧರ್ಮೀಯ ಸಾಮರಸ್ಯಕ್ಕೆ ಅಡಿಪಾಯ ಹಾಕಿದೆ
ಆರ್ಎಸ್ಎಸ್ ಪಥಸಂಚಲನ ಇಂದು ಮಧ್ಯಾಹ್ನ 2:30 ನೆಹರು ಮೈದಾನದಿಂದ ಆರಂಭವಾಗುತ್ತದೆ. ಎರಡು ಮಾರ್ಗದಲ್ಲಿ ಪಥಸಂಚಲನ ನಡೆಯಲಿದೆ. ಮಾರ್ಗ 1: ನೆಹರು ಮೈದಾನ, ಕೃಷ್ಣ ಭವನ, ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ ಪೇಟೆ, ಶ್ರೀ ತುಳಜಾಭವಾನಿ ವೃತ್ತ, ಪೆಂಡಾರ ಗಲ್ಲಿ, ಶ್ರೀ ಶಂಕರ ಮಠ, ಕಂಚಗಾರ ಗಲ್ಲಿ, ಹಿರೆಪೇಟೆ, ಸರಾಫ್ ಗಟ್ಟಿ ವೃತ್ತ, ಜವಳಿ ಸಾಲ, ಬೆಳಗಾವಿ ಗಲ್ಲಿ ಮತ್ತು ದುರ್ಗದ ಬೈಲ್ ವೃತ್ತದಲ್ಲಿ ಸಂಗಮವಾಗುವುದು.
ಮಾರ್ಗ 2: ನೆಹರು ಮೈದಾನ, ಟೌನ್ ಹಾಲ್, ಜೆಸಿ ನಗರ, ಶಕ್ತಿ ರಸ್ತೆ, ಸ್ಟೇಶನ್ ರಸ್ತೆ, ಗಣೇಶ ಪೇಟೆ ವೃತ್ತ, ಸಿಬಿಟಿ, ಮಕಾನದಾರ ಗಲ್ಲಿ, ಮಂಗಳವಾರ ಪೇಟೆ, ಇಟಗಿ ಮಾರುತಿ ಗಲ್ಲಿ, ರಾಧಾಕೃಷ್ಣ ಗಲ್ಲಿ, ದುರ್ಗದ ಬೈಲ್ ವೃತ್ತದಲ್ಲಿ ಎರಡೂ ಸಂಚಲನಗಳು ಸಂಗಮಗೊಂಡು ಒಟ್ಟಿಗೆ ಬ್ರಾಡವೇ, ಶಿವಾಜಿ ವೃತ್ತ, ಕೊಪ್ಪಿಕರ ರಸ್ತೆ, ಕೃಷ್ಣ ಭವನ ಮಾರ್ಗವಾಗಿ ನೆಹರು ಮೈದಾನದಲ್ಲಿ ಸಂಚಲನ ಮುಕ್ತಾಯವಾಗುತ್ತದೆ.
ಸಾಯಂಕಾಲ 5:15ಕ್ಕೆ ಬೃಹುತ್ ಕಾರ್ಯಕ್ರಮ ನಡೆಯುತ್ತದೆ. ಮುಖ್ಯಅತಿಥಿಯಾಗಿ ದಿವ್ಯಾಂಗ ಚೇತನ ಕ್ರೀಡಾಪಟುಗಳ ರಾಷ್ಟ್ರೀಯ ತರಬೇತುದಾರರು ಶಿವಾನಂದ ಗುಂಜಾಲ ಭಾಗಿಯಾಗಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 am, Sun, 29 October 23