ಹುಬ್ಬಳ್ಳಿ: ದಸರಾ ಹಬ್ಬದ ಪ್ರಯುಕ್ತ ವಿಶೇಷ ಆಚರಣೆ: ನಿರ್ಗತಿಕ ಮಕ್ಕಳಿಗೆ ಕುಮಾರಿಕಾ ಪೂಜೆ
ಹುಬ್ಬಳ್ಳಿ ಮಾತೃ ಛಾಯಾ ಬಾಲ ಮಂದಿರದಲ್ಲಿ ದಸರಾ ಹಬ್ಬದ ಪ್ರಯುಕ್ತ ಬಾಲ ಮಂದಿರದಲ್ಲಿರೋ ನಿರ್ಗತಿಕ ಮಕ್ಕಳಿಗಾಗಿ ಕುಮಾರಿಕಾ ಪೂಜೆ ಹಮ್ಮಿಕೊಳ್ಳಲಾಯ್ತು. ಮಕ್ಕಳಿಗೆ ಪೂಜೆ ಮಾಡಿ ಕುಮಾರಿಕಾ ಹಬ್ಬ ಆಚರಿಸಿ ಬಾಲ ಮಂದಿರ ಜೊತೆ ಅಕ್ಕ ಪಕ್ಕದ ನಿವಾಸಿಗಳು ನಿರ್ಗತಿಕ ಮಕ್ಕಳ ಮುಖದಲ್ಲಿ ಹಬ್ಬದ ಕಳೆ ತಂದಿದ್ದಾರೆ.
ಹುಬ್ಬಳ್ಳಿ, ಅಕ್ಟೋಬರ್ 19: ಅವರೆಲ್ಲ ನಿರ್ಗತಿಕ ಮಕ್ಕಳು. ಹಬ್ಬ ಹರಿದಿನಗಳಿಂದ ವಂಚಿತರಾದ ಮಕ್ಕಳು. ಹಬ್ಬಗಳಂದರೆ ಅವರಿಗೆ ಗೊತ್ತೆ ಇಲ್ಲ. ಇದೀಗ ಹೇಳಿ ಕೇಳಿ ದಸರಾ ಹಬ್ಬ. ಆ ನಿರ್ಗತಿಕ ಬಡ ಮಕ್ಕಳಿಗೆ ಹಬ್ಬ ಗೊತ್ತಾಗಲಿ, ಎಲ್ಲರಂತೆ ಅವರು ಹಬ್ಬ ಮಾಡಲಿ ಅನ್ನುವ ಕಾರಣಕ್ಕೆ ಇವತ್ತು ನಿರ್ಗತಿಕ ಮಕ್ಕಳಿಗೆ ಕುಮಾರಿಕಾ ಪೂಜೆ (Kumarika Puja) ಮಾಡಾಲಯ್ತು. ಮಾತೃ ಛಾಯಾ ಬಾಲ ಕಲ್ಯಾಣ ಕೇಂದ್ರದ ಜೊತೆ ಅಕ್ಕ ಪಕ್ಕದ ನಿವಾಸಿಗಳೆಲ್ಲ ಸೇರಿ ಆ ನಿರ್ಗತಿಕ ಮಕ್ಕಳಿಗೆ ಕುಮಾರಿಕಾ ಪೂಜೆ ಮಾಡಿದರು.
ಹುಬ್ಬಳ್ಳಿ ಮಾತೃ ಛಾಯಾ ಬಾಲ ಮಂದಿರದಲ್ಲಿ ದಸರಾ ಹಬ್ಬದ ಪ್ರಯುಕ್ತ ಬಾಲ ಮಂದಿರದಲ್ಲಿರೋ ನಿರ್ಗತಿಕ ಮಕ್ಕಳಿಗಾಗಿ ಕುಮಾರಿಕಾ ಪೂಜೆ ಹಮ್ಮಿಕೊಳ್ಳಲಾಯ್ತು. ಇದೀಗ ಹೇಳಿ ಕೇಳಿ ದಸರಾ ಹಬ್ಬ ಇವತ್ತ ಲಲಿತ ಪಂಚಮಿ ಇಲ್ಲಿರೋ ನಿರ್ಗತಿಕ ಮಕ್ಕಳಿಗೆ ಹಬ್ಬ ಅನ್ನೋದು ಗಗನ ಕುಸುಮ. ಅಂತಹ ಮಕ್ಕಳಿಗಾಗಿ ಕುಂಕುಮಾರ್ಚನೆ ಮಾಡಿ, ಮಕ್ಕಳಿಗೆ ಪೂಜೆ ಮಾಡಿ ಕುಮಾರಿಕಾ ಹಬ್ಬ ಆಚರಿಸಿ ಬಾಲ ಮಂದಿರ ಜೊತೆ ಅಕ್ಕ ಪಕ್ಕದ ನಿವಾಸಿಗಳು ನಿರ್ಗತಿಕ ಮಕ್ಕಳ ಮುಖದಲ್ಲಿ ಹಬ್ಬದ ಕಳೆ ತಂದಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲೊಂದು ಮಿನಿ ವಾರಾಣಸಿ: ಇಲ್ಲಿದೆ ಹಲವು ವಿಶೇಷ
ಬಾಲ ಮಂದಿರದಲ್ಲಿರೋ ನಿರ್ಗತಿಕ ಮಕ್ಕಳಿಗೆ ಮಾತೆಯರು ಪೂಜೆ ಮಾಡಿದ್ದು ವಿಶೇಷವಾಗಿತ್ತು. ಮನೆಯಲ್ಲಿ ಆದರೆ ತಂದೆ ತಾಯಿ ಹಬ್ಬ ಮಾಡೋದನ್ನ ಮಕ್ಕಳು ನೋಡ್ತಾರೆ, ಇವರೆಲ್ಲ ನಿರ್ಗತಿಕ ಮಕ್ಕಳು, ಇವರಿಗೆ ಹಬ್ಬ ಅನ್ನೋದು ಗೊತ್ತಿಲ್ಲ. ಅಂತಹ ಮಕ್ಕಳಿಗೆ ಪೂಜೆ ಮಾಡಿದ್ದು ಇವತ್ತು ವಿಶೇಷವಾಗಿತ್ತು.
ಹುಬ್ಬಳ್ಳಿಯ ಕೇಶ್ವಾಪೂರದಲ್ಲಿರೋ ಬಾಲ ಮಂದಿರದಲ್ಲಿ ಸುಮಾರು 32 ಜನ ನಿರ್ಗತಿಕ ಮಕ್ಕಳಿದಾರೆ. ಮಕ್ಕಳೆಲ್ಲ ಬೇರೆ ಬೇರೆ ಶಾಲೆಯಲ್ಲಿ ಓದುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಇದೀಗ ದಸರಾ ಹಬ್ಬದ ಸಂಭ್ರಮ. ಆದರೆ ಇಲ್ಲಿರುವ ಮಕ್ಕಳಿಗೆ ಹಬ್ಬದ ಖುಷಿ ಇರಲಿಲ್ಲ, ಮಿಗಿಲಾಗಿ ತಂದೆ ತಾಯಿ ಇಲ್ಲ ಅನ್ನೋ ನೋವು. ಆ ನೋವು ನಿವಾರಣೆ ಮಾಡಲು ಕೇಶ್ವಾಪೂರದಲ್ಲಿರೋ ಮಾತೆಯರು ಇಂದು ಮುಂದಾಗಿದ್ದರು.
ಇದನ್ನೂ ಓದಿ: ವಾಹನ ಚಾಲಕರು ನಿದ್ರೆಗೆ ಜಾರುವುದನ್ನು ತಡೆಯಲು ಬಂದಿದೆ ಕನ್ನಡಕ! ಈ ಸಂಶೋಧನೆಯ ಹಿಂದಿದೆ ಯುವತಿಯ ಕರುಣಾಜನಕ ಕತೆ
ನಿರ್ಗತಿಕ ಮಕ್ಕಳನ್ನ ಸಾಲಿಗೆ ಕೂರಿಸಿ ಅವರಿಗೆ ಕುಮಾರಿಕಾ ಪೂಜೆ ಮಾಡಿ ಮಾನವೀಯತೆ ಸಾರಿದ್ದಾರೆ. ಪೂಜೆ ನಂತರ ಎಲ್ಲರೊಂದಿಗೆ ಮಕ್ಕಳು ಬೆರೆತು ಕೋಲಾಟ ಆಡಿದರು. ನಿರ್ಗತಿಕ ಮಕ್ಕಳೊಂದಿಗೆ ಬಾಲ ಮಂದಿರದ ಪಕ್ಕದಲ್ಲಿರೋ ಕೆಲ ಮಕ್ಕಳು ಭಾಗಿಯಾಗಿದ್ದರು.
ನಿರ್ಗತಿಕ ಮಕ್ಕಳಲ್ಲೂ ಇಂದು ದಸರಾ ಹಬ್ಬದ ಸಡಗರ ಮನೆ ಮಾಡಿತ್ತು. ತಂದೆ ತಾಯಿ ಇಲ್ಲ ಅನ್ನೋ ನೋವು ಕಾಡಬಾರದು ಅನ್ನೋ ಕಾರಣಕ್ಕೆ ಬಾಲ ಮಂದಿರ ಇಂತಹ ಕಾರ್ಯಕ್ರಮ ಮಾಡಿದ್ದೂ ನಿಜಕ್ಕೂ ಒಳ್ಳೆಯ ಕೆಲಸ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.