ವಾಹನ ಚಾಲಕರು ನಿದ್ರೆಗೆ ಜಾರುವುದನ್ನು ತಡೆಯಲು ಬಂದಿದೆ ಕನ್ನಡಕ! ಈ ಸಂಶೋಧನೆಯ ಹಿಂದಿದೆ ಯುವತಿಯ ಕರುಣಾಜನಕ ಕತೆ

ಯುವ ಸಂಶೋಧಕಿ ರಬಿಯಾ ಊಟಿಗೆ ಹೋಗಿದ್ದಾಗ ಭೀಕರ ಅಪಘಾತ ಸಂಭವಿಸಿತ್ತು. ಚಾಲಕ ನಿದ್ರೆಗೆ ಜಾರಿದ್ದರಿಂದ ಆ ಅಪಘಾತ ಸಂಭವಿಸಿತ್ತು. ಅದರಲ್ಲಿ ಇಡೀ ಕುಟುಂಬದ ಸದಸ್ಯರು ಸಾವನ್ನಪ್ಪಿದ್ದರು. ಈ ರೀತಿಯ ಅಪಘಾತಗಳನ್ನು ಹೇಗೆ ತಪ್ಪಿಸಬಹುದು ಎಂಬ ನಿಟ್ಟಿನಲ್ಲಿ ಈ ಶೋಧನೆಯಲ್ಲಿ ತೊಡಗಿದೆ. ಕೊನೆಗೆ ಈ ಯಂತ್ರ ರೂಪಿಸಿದೆ ಎಂದು ರಬಿಯಾ ಫಾರೂಕಿ ತಮ್ಮ ಸಂಶೋಧನೆಯ ಹಿಂದಿನ ಕರುಣಾಜನಕ ಕತೆ ಹೇಳಿದ್ದಾರೆ.

ವಾಹನ ಚಾಲಕರು ನಿದ್ರೆಗೆ ಜಾರುವುದನ್ನು ತಡೆಯಲು ಬಂದಿದೆ ಕನ್ನಡಕ! ಈ ಸಂಶೋಧನೆಯ ಹಿಂದಿದೆ ಯುವತಿಯ ಕರುಣಾಜನಕ ಕತೆ
ಚಾಲನೆ ವೇಳೆ ನಿದ್ರೆಗೆ ಜಾರುವ ಅಭ್ಯಾಸವೇ, ಡೋಂಟ್ ವರಿ, ಈ ಕನ್ನಡಕ ಹಾಕ್ಕೊಳ್ಳಿ ಸೇಫ್ ಡ್ರೈವ್ ಮಾಡಿ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಸಾಧು ಶ್ರೀನಾಥ್​

Updated on: Oct 19, 2023 | 6:06 AM

ಹುಬ್ಬಳ್ಳಿ: ಚಾಲನೆ ವೇಳೆ (driving) ನಿದ್ರೆಗೆ ಜಾರುವ ಅಭ್ಯಾಸವೇ, ಡೋಂಟ್ ವರಿ, ಈ ಕನ್ನಡಕ ಹಾಕ್ಕೊಳ್ಳಿ ಸೇಫ್ ಡ್ರೈವ್ ಮಾಡಿ ಎಂಬ ಆಫರ್​​ ಕೇಳಿಬಂದಿದೆ. ಇನ್ನು ವಿದ್ಯಾರ್ಥಿಗಳು ಓದುವಾಗ ನಿದ್ರೆಗೆ ಜಾರಿದ್ರೂ ಇದು ಪಟಕ್ಕಂತ ಎಚ್ಚರಿಸುತ್ತೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರನ್ನೂ ಅಲರ್ಟ್ ಮಾಡುತ್ತಂತೆ… ಅದೇ ಆ್ಯಂಟಿ ಸ್ಲೀಪ್ ಡ್ರೌಸಿನೆಸ್ ಪ್ರಿವೆಂಟರ್ ಮಷಿನ್! ಹುಬ್ಬಳ್ಳಿಯ ವಿದ್ಯಾರ್ಥಿನಿ ಈ ಯಂತ್ರ ಶೋಧನೆ (Succes Story) ಮಾಡಿದ್ದಾರೆ. ಹುಬ್ಬಳ್ಳಿಯ ಕಾನ್ವೆಂಟ್ ಶಾಲೆಯ ರಬಿಯಾ ಫಾರೂಕಿ (Hubballi puc student rabiya) ಎಂಬ ವಿದ್ಯಾರ್ಥಿನಿಯ ಸಾಧನೆ (Innovation) ಇದು. ಸದ್ಯ ಇವರು ವಿದ್ಯಾನಿಕೇತನ್ ಕಾಲೇಜಿನಲ್ಲಿ ಪಿಯುಸಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ರಬಿಯಾಳ ಈ ಕಾರ್ಯಕ್ಕೆ ರಾಷ್ಟ್ರಮಟ್ಟದಲ್ಲಿಯೂ ಮೆಚ್ಚುಗೆ ದೊರೆತಿದೆ. ವಾಹನ ಚಲಾಯಿಸುವಾಗ ಚಾಲಕ ಒಮ್ಮೊಮ್ಮೆ ತೂಕಡಿಸೋದು ಸಹಜ. ಚಾಲಕ ತೂಕಡಿಸಿದರೆ ಪ್ರಯಾಣಿಕರ ಕಥೆ ಮುಗೀತು! ಡ್ರೈವಿಂಗ್ ವೇಳೆ ನಿದ್ರೆಗೆ ಜಾರಿ ಸಂಭವಿಸುವ ಅಪಘಾತಗಳಿಗೆ ಲೆಕ್ಕವೇ ಇಲ್ಲ. ಇಂತಹ ಅಪಘಾತಗಳನ್ನು ತಡೆಯಲೆಂದೇ ಸದರಿ ವಿದ್ಯಾರ್ಥಿನಿ ಆ್ಯಂಟಿ ಸ್ಲೀಪ್ ಡ್ರೋಸೆನೆಸ್ ಪ್ರವೆಂಟರ್ ಯಂತ್ರವನ್ನು ಶೋಧನೆ ಮಾಡಿದ್ದರೆ.

ಪಿಯುಸಿ ವಿದ್ಯಾರ್ಥಿನಿ ರಬಿಯಾ ಫಾರೂಕಿ ಸಂಶೋಧನೆಯ ಹಿಂದಿದೆ ಕರುಣಾಜನಕ ಕತೆ

ಈ ಯಂತ್ರದಲ್ಲಿ ಪಾರದರ್ಶಕ ಕನ್ನಡಕಕ್ಕೆ ಚಾರ್ಜೆಬಲ್ ಬ್ಯಾಟರಿ, ಸಿಬ್ ಬಝರ್ ಹಾಗೂ ಐಆರ್ ಸೆನ್ಸಾರ್ ಅಳವಡಿಕೆ ಮಾಡಲಾಗಿದೆ. ವಾಹನ ಚಾಲನೆ ಮಾಡುವಾಗ ಈ ಕನ್ನಡಕ ಧರಿಸಿದರೆ ಸಾಕು… ಅಕಸ್ಮಾತ್​ ಸ್ವಲ್ಪ ಕಣ್ಣು ಮುಚ್ಚಿದರೂ ಕ್ಷಣಾರ್ಧದಲ್ಲಿ ನ್ಯಾನೋ ಅರ್ಡುನೋ ಆ್ಯಕ್ಟಿವ್ ಆಗುತ್ತೆ. ಬಝರ್ ರಿಂಗಣಿಸಿ ಚಾಲಕನನ್ನು ಎಚ್ಚರಿಸುತ್ತೆ. ಕೇವಲ 400 – 450 ರೂಪಾಯಿ ವೆಚ್ಚದಲ್ಲಿ ತಯಾರು ಮಾಡಬಹುದು ಈ ಕನ್ನಡಕವನ್ನು.

Also read: ಮಂಡ್ಯದ ಬಡ ರೈತ ಕುಟುಂಬದ ರಾಘವೇಶ್ ಗದಗ ಪಶು ವೈದ್ಯ ಕಾಲೇಜಿನಲ್ಲಿ 16 ಚಿನ್ನದ ಪದಕದೊಂದಿಗೆ ಪದವಿ ಸಾಧನೆ!

ಇಂತಹ ಕನ್ನಡಕ ಧರಿಸಿದ್ರೆ ಖಂಡಿತಾ ದೊಡ್ಡ ಅನಾಹುತ ತಪ್ಪಿಸಬಹುದು. ಈ ಕನ್ನಡಕ ದೆಹಲಿಯಲ್ಲಿ ನಡೆದ ಇನ್ಸ್ಪೈರ್ ಅವಾರ್ಡ್ ಮಾನಕ ದಲ್ಲಿ ಪ್ರದರ್ಶನ ಮಾಡಲಾಗಿದೆ. ರಾಷ್ಟ್ರ ಮಟ್ಟದ ಉತ್ತಮ ಮಾದರಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಅಂತತರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರದರ್ಶನಕ್ಕೂ ಆಯ್ಕೆಯಾಗಿದೆ.

Also read: ತಂತ್ರಜ್ಞಾನದ ಈ ಯುಗದಲ್ಲಿ ಯಾವುದೂ ಅಸಾಧ್ಯವಲ್ಲ! ಸೈಕಲ್​ ಚಕ್ರಗಳು ಗುಂಡಗೆ ಅಲ್ಲ-ಚೌಕಾಕಾರದ ಚಕ್ರಗಳ ಮೇಲೂ ಸೈಕಲ್ ಚಲಿಸುತ್ತದೆ, ವಿಡಿಯೋ ನೋಡಿ ಊಟಿಗೆ ಟೂರ್ ಹೋಗಿದ್ದಾಗ ಭೀಕರ ಅಪಘಾತ ಸಂಭವಿಸಿತ್ತು. ಚಾಲಕ ನಿದ್ರೆಗೆ ಜಾರಿದ್ದರಿಂದ ಆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಇಡೀ ಕುಟುಂಬದ ಸದಸ್ಯರು ಸಾವನ್ನಪ್ಪಿದ್ದರು. ಈ ರೀತಿಯ ಅಪಘಾತಗಳನ್ನು ಹೇಗೆ ತಪ್ಪಿಸಬಹುದು ಎಂಬ ನಿಟ್ಟಿನಲ್ಲಿ ಈ ಶೋಧನೆಯಲ್ಲಿ ತೊಡಗಿದೆ. ಕೊನೆಗೆ ಈ ಯಂತ್ರ ರೂಪಿಸಿದೆ ಎಂದು ರಬಿಯಾ ಫಾರೂಕಿ ತಮ್ಮ ಸಂಶೋಧನೆಯ ಹಿಂದಿನ ಕರುಣಾಜನಕ ಕತೆ ಹೇಳಿದರು. ರಬಿಯಾ ಫಾರೂಕಿ ಕಾರ್ಯಕ್ಕೆ ಪೋಷಕರು ಮತ್ತು ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್