ಪರೋಪಕಾರಂ ಇದಂ ಶರೀರಂ: ಬಾಡಿ ಬಿಲ್ಡಿಂಗ್ ಮಾಡ್ತಾ ಯುವಕರಿಗೆ ಮಾದರಿಯಾಗಿದ್ದವ ಅಪಘಾತಕ್ಕೆ ಬಲಿ, ಪುತ್ರನ ಅಂಗಾಂಗ ದಾನ ಮಾಡಿದ ತಂದೆ!
Brain dead: ಪೋಲಿಸ್ ಅಧಿಕಾರಿಯಾಗಿಯೇ ಸಿದ್ದ ಅಂತಾ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದ್ದ ಬಸವರಾಜ್ ಗೆ ಪೊಲೀಸ್ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ತಂದೆಯ ಬೆಂಬಲ ಕೂಡಾ ಇತ್ತು. ಸಾವಿನಲ್ಲೂ ಬಸು ಸಾರ್ಥಕತೆ ಮೆರೆದಿರುವುದು ಗೆಳೆಯರಲ್ಲಿ ನೋವಿನಲ್ಲೂ ಹೆಮ್ಮೆ ಪಡುವಂತೆ ಮಾಡಿದೆ.
ಅವನು ಡಿಗ್ರಿ ವ್ಯಾಸಂಗ ಮಾಡುತ್ತಿದ್ದ ಯುವಕ.. ಬಾಡಿ ಬಿಲ್ಡಿಂಗ್ ಮಾಡ್ತಾ ಅವರ ಕಾಲೋನಿಯಲ್ಲಿ ಇತರೆ ಯವಕರಿಗೂ ಮಾಡಲ್ ಆಗಿದ್ದ.. ಅವನ ದೇಹದಾರ್ಢ್ಯ ಕಂಡು ಕ್ವಾಟರ್ಸನ ಯವಕರು ಸಾಕಷ್ಟು ಜನರಿಗೆ ಇನ್ಫ್ಲೂಯನ್ಸರ್ ಆಗಿದ್ದು ಸುಳ್ಳಲ್ಲ.. ಪೊಲೀಸ್ ಆಫೀಸರ್ ಆಗೇ ಆಗ್ತೀನಿ ಅಂದುಕೊಂಡವನು ಏನಾದ ಅಂತಾ ಕೇಳಿದ್ರೆ ನಿಮ್ಮ ಕಣ್ಣುಗಳು ಒದ್ದೆಯಾಗದೇ ಇರದು.. ಏನಾಯ್ತು ಅಂದ್ರೆ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆ ತುಂಬಾ ಜನ.. ಎಲ್ಲಿ ಕಣ್ಣಾಯಿಸಿದ್ರೂ ಜನವೋ ಜನ.. ಯುವಕರ ದೊಡ್ಡ ಪಡೆಯೇ ಅಲ್ಲಿ ನೆರೆದಿತ್ತು.. ಎಲ್ಲರ ಕಣ್ಣಲ್ಲೂ ಕಂಬನಿ ಮಿಡಿಯುತ್ತಿತ್ತು.. ಛೇ ಹೀಗಾಗಬಾರದಿತ್ತು ಅಂತಾ ಎಲ್ಲಾ ಸ್ನೇಹಿತರು ಪಶ್ಚಾತಾಪ ಪಡುತ್ತಿದ್ದರು..
ಹೌದು ಸ್ಟ್ರೆಚರ್ ಮೇಲೆ ನಿಸ್ತೇಜನಾಗಿ ಮಲಗಿರುವ ಬಸವರಾಜ ಬಜಂತ್ರಿಗೆ ಅಮರ್ ರಹೋ ಅಂತಾ ಗೆಳೆಯರು ಉದ್ಘೋಷ ಹಾಕುತ್ತಿದ್ದುದ್ದು ಎಲ್ಲರ ಹೃದಯ ಭಾರವಾಗಿಸಿತ್ತು. ಅಪಘಾತದಲ್ಲಿ ಮೃತಪಟ್ಟಿದ್ದ (Brain dead) ಬಸವರಾಜ ಭಜಂತ್ರಿ ಅಂಗಾಂಗ ದಾನ ಪ್ರಕ್ರಿಯೆ ಸುಕ್ರವಾರ ಹುಬ್ಬಳ್ಳಿಯ (Hubballi) ಸುಚಿರಾಯು ಆಸ್ಪತ್ರೆಯಲ್ಲಿ ನೇರವೇರಿತು. ನಾಲ್ಕು ಜನರಿಗೆ ಜೀವದಾನ ಮಾಡಿದ ಬಸವರಾಜ ಕಿಡ್ನಿ, ಲಿವರ್, ಕಣ್ಣುಗಳನ್ನು ಅವರ ಫ್ಯಾಮಿಲಿ ದಾನ (organ donation) ಮಾಡಿದೆ. ಇದರ ಮೂಲಕ ತಮ್ಮ ಮಗಗನ್ನು ಜೀವಂತವಾಗಿ ಇತರರಲ್ಲಿ ಹೆತ್ತವರು ಕಾಣುತ್ತಿದ್ದಾರೆ. ಸುಚಿರಾಯು ಆಸ್ಪತ್ರೆಯಿಂದ ವಿಮಾನ ನಿಲ್ಧಾಣದವರೆಗೂ ಪೊಲೀಸರು ಗ್ರೀನ್ ಕಾರಿಡಾರ್ ಟ್ರಾಫಿಕ್ ಸೃಷ್ಟಿಸಿದ್ದರು. ಬಸವರಾಜನ ಲಿವರ್ ಅನ್ನು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ರವಾನಿಸಲಾಯಿತು.
Also Read: Organ Donations: ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ 2ನೇ ಸ್ಧಾನ
ಹುಬ್ಬಳ್ಳಿಯ ಸಿಎಆರ್ ನಲ್ಲಿ ಹೆಡ್ ಕಾನ್ಸಸ್ಟೇಬಲ್ ಆಗಿರುವ ಯಲ್ಲಪ್ಪ ಇರುವ ತಮ್ಮ ಒಬ್ಬೇ ಮಗನನ್ನು ಕಳ್ಕೊಂಡಿದ್ದಾರೆ. ಕಳೆದ ಬುಧವಾರ ಕೊಪ್ಪಳ ಬಳಿಯಿರುವ ಹಿಟ್ನಾಳ ಕ್ರಾಸಿನಲ್ಲಿ ಸ್ನೇಹಿತನ ಮದುವೆ ಮುಗಿಸಿಕೊಂಡು ಮರಳುತ್ತಿದ್ದಾಗ.. ಬೈಕ್ ಅಪಘಾತ ಸಂಭವಿಸಿದೆ. ಬಸವಾಜ್ ಮತ್ತವನ ಗೆಳೆಯ ಇಬ್ಬರೂ ಗಂಭೀರವಾಗಿ ಗಾಯಗೊಂಡು ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಸವರಾಜ್ ಕೊನೆಗೂ ಬದುಕುಳಿಯಲಿಲ್ಲ. ಮೆದಳು ನಿಷ್ಕ್ರಿಯವಾಗಿ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ. ಪೋಲಿಸ್ ಕ್ವಾಟರ್ಸನಲ್ಲಿ ಸಾಕಷ್ಟು ಯುವಕರಿಗೆ ರೋಲ್ ಮಾಡಲ್ ಆಗಿದ್ದ ಬಸವರಾಜ್, ಬಾಡಿ ಬಿಲ್ಡರ್ ಕೂಡಾ ಆಗಿದ್ದವ. ಬಸವರಾಜನ ಅಗಲಿಕೆಯಿಂದ ಸ್ನೇಹಿತರಲ್ಲಿ ದಿಗ್ರ್ಬಾಂತಿ ಮೂಡಿಸಿದೆ. ಆಕಾಶವೇ ಕಳಚಿ ಬಿದ್ದಂತಾಗಿದೆ.
ಸಿಎಆರ್ ಕ್ವಾಟರ್ಸನಲ್ಲಿ ಬಸವರಾಜ್‌ನಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಪಿಜಿ ವ್ಯಾಸಾಂಗದಲ್ಲಿ ಬಸವರಾಜ ಬಾಡಿ ಬಿಲ್ಡಿಂಗ್ ಜತೆಯಲ್ಲಿ ಪಿಎಸ್‌ಐ ನೇಮಕಾತಿಗಾಗಿ ನಿರಂತರ ಅಭ್ಯಾಸ ಮಾಡ್ತಿದ್ದ. ಪೋಲಿಸ್ ಅಧಿಕಾರಿಯಾಗಿಯೇ ಸಿದ್ದ ಅಂತಾ ಸಾಕಷ್ಟು ಬಾರಿ ಸ್ನೇಹಿತರ ಬಳಿ ಹೇಳಿಕೊಂಡಿದ್ದಾನೆ. ಮನೆಯಲ್ಲೂ ಪೊಲೀಸ್ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ತಂದೆಯ ಬೆಂಬಲ ಕೂಡಾ ಬಸವರಾಜನಿಗಿತ್ತು. ಮನೆಯ ದೊಡ್ಡ ಮಗ ಆಗಿದ್ದ ಬಸವರಾಜನಿಗೆ ಇಬ್ಬರು ಸಹೋದರಿಯರು ಇದ್ದಾರೆ. ಬಸವರಾಜನ ಸಾವಿನಿಂದ ಭಜಂತ್ರಿ ಮನೆಯ ದೀಪ ನಂದಿದೆ. ಸಾವಿನಲ್ಲೂ ಬಸು ಸಾರ್ಥಕತೆ ಮೆರೆದಿರುವುದು ಗೆಳೆಯರಲ್ಲಿ ನೋವಿನಲ್ಲೂ ಹೆಮ್ಮೆ ಪಡುವಂತೆ ಮಾಡಿದೆ.
ವರದಿ: ರಹಮತ್ ಕಂಚಗಾರ್, ಟಿವಿ 9, ಹುಬ್ಬಳ್ಳಿ
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:51 pm, Sat, 17 December 22