ಹುಬ್ಬಳ್ಳಿ: ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಗು; ಸವಾಲಾಗಿ ಸ್ವೀಕರಿಸಿದ ವೈದ್ಯರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 14, 2022 | 2:29 PM

ಕಡುಬಡತನದಲ್ಲಿ ಬದುಕುತ್ತಿರುವ ಪ್ರೇಮಾನಂದ ಮತ್ತು ಪ್ರಜ್ಞಾ ಕಾಂಬ್ಳೆ ದಂಪತಿಗಳ 4ವರ್ಷದ ಮಗುವಿಗೆ ವಿಚಿತ್ರವಾದ ಕಾಯಿಲೆ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.

ಹುಬ್ಬಳ್ಳಿ: ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಗು; ಸವಾಲಾಗಿ ಸ್ವೀಕರಿಸಿದ ವೈದ್ಯರು
ಹುಬ್ಬಳ್ಳಿ
Follow us on

ಹುಬ್ಬಳ್ಳಿ: ಕಡುಬಡತನದಲ್ಲಿ ಬದುಕುತ್ತಿರುವ ಕಾರವಾರದ ಪ್ರೇಮಾನಂದ ಮತ್ತು ಪ್ರಜ್ಞಾ ಕಾಂಬ್ಳೆ ದಂಪತಿಗಳ 4ವರ್ಷದ ಮಗುವಿಗೆ ವಿಚಿತ್ರವಾದ ಕಾಯಿಲೆ ಬಂದಿದ್ದು, ಹುಬ್ಬಳ್ಳಿಯ ಕಿಮ್ಸ್ ಸೂಪರ್ ಸ್ಪೆಷಾಲಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಗುವಿನ ಪರಿಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ. ಮುಖದ ತುಂಬಾ ಆವರಿಸಿದ ಗುಳ್ಳೆಗಳು ಮಗುವಿಗೆ ಹಿಂಸಿಸುತ್ತಿವೆ. ಊಟ ಮಾಡುವುದಕ್ಕೂ ಸಾಧ್ಯವಾಗದಂತ ಸ್ಥಿತಿಯಲ್ಲಿದ್ದಾನೆ.

ಕಾರವಾರದ ವೈದ್ಯಕೀಯ ಕಾಲೇಜಿನ ವೈದ್ಯರ ತಂಡ ಸತತ ಪ್ರಯತ್ನ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್ ವೈದ್ಯರಿಗೆ ಈ ಖಾಯಿಲೆ ಎನು ಎನ್ನುವುದೇ ಗೊತ್ತಾಗುತ್ತಿಲ್ಲ. ನಂತರ ಅಲ್ಲಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮಗುವನ್ನು ಶಿಫ್ಟ್ ಮಾಡಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ವೈದ್ಯರಿಗೆ ಈ ಕಾಯಿಲೆ ಗುರುತಿಸೋದೆ ಸವಾಲಾಗಿದ್ದು ಚಿಕಿತ್ಸೆ ಶುರು ಮಾಡಿದ್ದಾರೆ.

ಮೊದಲಿಗೆ ಕಿವಿಯ ಹಿಂದೆ ಚಿಕ್ಕ ಗುಳ್ಳೆ ಕಾಣಿಸಿಕೊಂಡಿತಂತೆ ಅದರಿಂದ ಏನು ಸಮಸ್ಯೆಯಿಲ್ಲ ವಾಸಿಯಾಗುತ್ತದೆ ಎಂದು ಅನ್ಕೊಂಡು ಅಮ್ಮ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಇದಾದ ಬಳಿಕ ಒಂದರಿಂದ ನಾಲ್ಕೈದು ಗುಳ್ಳೆಗಳು ಆಗಲು ಪ್ರಾರಂಭಿಸಿವೆ. ಅದಾದ ಬಳಿಕ ತಾಯಿ ಏನೇನೋ ಮನೆ ಔಷಧಿಯನ್ನ ಹಚ್ಚಿದ್ದಾರೆ. ಆದರೆ ದಿನದಿಂದ ದಿನಕ್ಕೆ ಕಾಯಿಲೆ ಉಲ್ಬಣಗೊಳ್ಳ ತೊಡಗಿದೆ ಕೂಡಲೇ ತಾಯಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೂ ಏನು ಪ್ರಯೋಜನವಾಗಿಲ್ಲ. ಇದೀಗ ತಲೆ ಕಿವಿ ಮುಖದ ಮೇಲೆ ಆವರಿಸದ ಗುಳ್ಳೆಗಳು ಕಣ್ಣು, ಕಿವಿ ಮೂಗು ಬಾಯಿ ಸುತ್ತಲೂ ಆವರಿಸಿವೆ.

ಇದನ್ನೂ ಓದಿ:ಸಮಂತಾ ಬಳಿಕ ಪೂನಂ​ ಕೌರ್​ಗೆ ಅಂಟಿತು ವಿಚಿತ್ರ ಕಾಯಿಲೆ; ಮೆದುಳಿನ ಮೇಲೂ ಬೀರುತ್ತೆ ಪರಿಣಾಮ  

ಚಿಕ್ಕ ಗುಳ್ಳೆ ಎಂದು ಕೇರ್ ಲೇಸ್ ಮಾಡಿದ್ದರ ಪರಿಣಾಮ ಮಗುವಿಗೆ ದುಷ್ಪರಿಣಾಮ ಬೀರುತ್ತಿದೆ. ಮುಖದ ಮೇಲೆ ಜೇನುಗೂಡು ಕಟ್ಟಿದಂತೆ ಮಗುವಿನ ಮುಖದ ತುಂಬೆಲ್ಲ ಗಲ್ಲಿಗಳೆ ಆವರಿಸಿವೆ. ಅವುಗಳನ್ನು ಸ್ಕ್ಯಾನಿಂಗ್ ಮಾಡಿಸಿ, ರಕ್ತ ಪರೀಕ್ಷೆ ಮಾಡಿ ಚರ್ಮ ವಿಭಾಗದ ವೈದ್ಯರು ಮಗುವನ್ನು ಪರೀಕ್ಷೆ ಮಾಡುತ್ತಿದ್ದಾರೆ. ಇತ್ತೀಚಿಗೆ ಹಲವು ವಿಶೇಷ ಶಸ್ತ್ರ ಚಿಕಿತ್ಸೆ ಮಾಡಿ ಹೆಸರು ಮಾಡಿದ್ದ ಕಿಮ್ಸ್ ವೈದ್ಯರು ಈ ಕೇಸ್ ಸವಾಲಾಗಿ ಸ್ವೀಕರಿಸಿದ್ದಾರೆ. ನಾವು ವೈದ್ಯರಿಗೆ ಬೆಸ್ಟ್ ಆಫ್ ಲಕ್ ಹೇಳಿ ಮಗು ಆರೋಗ್ಯದ ಬಗ್ಗೆ ಪ್ರಾರ್ಥಿಸೋಣ.

ವರದಿ: ರಹಮತ್ ಕಂಚಗಾರ್ ಟಿವಿ9 ಹುಬ್ಬಳ್ಳಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ